ಶಿಗ್ಗಾವ್

ಗ್ರಾಮೀಣ ಪರಂಪರೆ ಹಾಗೂ ಧಾರ್ಮಿಕ ನಂಬಿಕೆಗಳ ಪ್ರತೀಕ: ಸೀಗೆ ಹುಣ್ಣಿಮೆ

ಗ್ರಾಮೀಣ ಪರಂಪರೆ ಹಾಗೂ ಧಾರ್ಮಿಕ ನಂಬಿಕೆಗಳ ಪ್ರತೀಕ: ಸೀಗೆ ಹುಣ್ಣಿಮೆ


  

            ಶಿಗ್ಗಾವಿ  26: ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದಲ್ಲಿ ಕೃಷಿ ಸಂಸ್ಕೃತಿ, ಗ್ರಾಮೀಣ ಪರಂಪರೆ ಹಾಗೂ ಧಾರ್ಮಿಕ ನಂಬಿಕೆಗಳ ಪ್ರತೀಕವಾದ ಸೀಗೆ ಹುಣ್ಣಿಮೆಯನ್ನು ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಯಿತು.  ಹಬ್ಬದ ಅಂಗವಾಗಿ ಮನೆಗಳಲ್ಲಿ ವಿವಿಧ ಬಗೆಯ ಸಾಂಪ್ರದಾಯಿಕ ಖಾದ್ಯಗಳನ್ನು ತಯಾರಿಸಿಕೊಂಡು ಹೋಗಿ ಹೊಲದಲ್ಲಿ ಪಾಂಡವರನ್ನು ನಿರ್ಮಿಸಿ ಪೂಜೆ ಸಲ್ಲಿಸಿ ಚರಗ ಚೆಲ್ಲಿ ಮನೆಯ ಮಂದಿಯಲ್ಲ ಜೊತೆಗೆ ತಮ್ಮ ಸಂಬಂಧಿಕರನ್ನು ಕರೆಯಿಸಿ ಸಹಭೋಜನ ಸವಿಯುವ ಮೂಲಕ ರೈತಾಪಿ ಜನರು ಸಂಪ್ರದಾಯವನ್ನು ಮುಂದುವರಿಸಿದರು.

        ಸೀಗೆ ಹುಣ್ಣಿಮೆಯ ವಿಶೇಷತೆಯೆಂದರೆ ಹಬ್ಬದ ಪ್ರಯುಕ್ತ ಮನೆಗಳಲ್ಲಿ ರೊಟ್ಟಿ, ಕರ್ಚಿಕಾಯಿ, ಸುಳ್ಳಿ ಹೋಳಿಗೆ, ಕರಿ ಚಟ್ಟಿ, ಉಂಡಗಡಬು ಸೇರಿದಂತೆ ತರಹೇವಾರಿ ಸಾಂಪ್ರದಾಯಿಕ ಆಹಾರ ಪದಾರ್ಥಗಳನ್ನು ಸಿದ್ದಪಡಿಸುವುದು. ಮನೆಯ ಮಹಿಳೆಯರು ಸಂಭ್ರಮದಿಂದ ವಿವಿಧ ಖಾದ್ಯಗಳನ್ನು ತಯಾರಿಸಿ ಕುಟುಂಬದ ಸದಸ್ಯರು ಹಾಗೂ ಬಂಧುಗಳೊಂದಿಗೆ ಹಂಚಿಕೊಂಡು ಸವಿಯುತ್ತಾರೆ. ಕೃಷಿ ಭೂಮಿಯನ್ನು ಗೌರವಿಸುವುದು, ಧಾರ್ಮಿಕ ನಂಬಿಕೆಗಳನ್ನು ಪಾಲಿಸುವುದು ಹಾಗೂ ಪೂರ್ವಜರಿಂದ ನಡೆದುಕೊಂಡು ಬಂದಆಚರಣೆಗಳನ್ನು ಮುಂದುವರಿಸುವುದು ಈ ಹಬ್ಬದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎನ್ನುತ್ತಾರೆ.   ಈ ಸಂದರ್ಭದಲ್ಲಿ ಹಿರೇಬೆಂಡಿಗೇರಿ ಹೊಲದ ಮಾಲಕರು ಹಾಗೂ ಕುಟುಂಬ ವರ್ಗದವರು ಉಪಸ್ಥಿತರಿದ್ದರು. 


ಸುದ್ದಿ ಓದಿ