ಧಾರವಾಡ - ಹುಬ್ಬಳ್ಳಿ

ವೀರೇಂದ್ರ ಹೆಗ್ಗಡೆಯವರ 79ನೇ ಜನ್ಮದಿನದ ಪ್ರಯುಕ್ತ ಚಿತ್ರಕಲೆ ಮತ್ತು ರಂಗೋಲಿ ಸ್ಪರ್ಧೆ

ವೀರೇಂದ್ರ ಹೆಗ್ಗಡೆಯವರ 79ನೇ ಜನ್ಮದಿನದ ಪ್ರಯುಕ್ತ ಚಿತ್ರಕಲೆ ಮತ್ತು ರಂಗೋಲಿ ಸ್ಪರ್ಧೆ


           ಧಾರವಾಡ 06 : ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 59ನೇ ಪಟ್ಟಾಭಿಷೇಕ/ ವರ್ಧಂತ್ಯೋತ್ಸವ ಹಾಗೂ 79ನೇ ಜನ್ಮದಿನದ ಪ್ರಯುಕ್ತ ಜೆ.ಎಸ್‌.ಎಸ್‌. ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ ಹಾಗೂ ಜೆ.ಎಸ್‌.ಎಸ್‌. ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದಲ್ಲಿ ಚಿತ್ರಕಲಾ ಹಾಗೂ ರಂಗೋಲಿ ಸ್ಪರ್ಧೆಯನ್ನು ದಿನಾಂಕ 03-11-2026 ನೇ ಶುಕ್ರವಾರದಂದು ಆಯೋಜಿಲಾಗಿಯಿತ್ತು.

          ಸ್ಪರ್ಧಾಳುಗಳು ಶ್ರೀಕ್ಷೇತ್ರ ಧರ್ಮಸ್ಥಳದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಪರಂಪರೆಯನ್ನು ಬಿಂಬಿಸುವಂತಹ ಚಿತ್ರಗಳನ್ನು ಬಿಡಿಸಿದ್ದರು. ಕಾರ್ಯಕ್ರಮದಲ್ಲಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಚಾರ್ಯರಾದ ಡಯಾನಾ ಶಾಲಾ ವಿಭಾಗಗಳ ಮುಖ್ಯಸ್ಥರು, ಸಹಶಿಕ್ಷಕರು ಹಾಗೂ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರು ಉಪಸ್ಥಿತರಿದ್ದು ಚಿತ್ರಗಳನ್ನು ವೀಕ್ಷಿಸಿದರು. 

            ರಂಗೋಲಿ ಸ್ಪರ್ಧೆಯಲ್ಲಿ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ನೇತ್ರಾವತಿ ತಂಡದ ವಿದ್ಯಾರ್ಥಿಗಳು ಹಾಗೂ ಪ್ರೌಢಶಾಲಾ ವಿಭಾಗದಿಂದ ಮಲಪ್ರಭಾ ತಂಡದ ವಿದ್ಯಾರ್ಥಿಗಳು ವಿಜೇತರಾದರು. ಹಾಗೆಯೇ ಚಿತ್ರಕಲಾ ಸ್ಪರ್ಧೆಯಲ್ಲಿ ಹಿರಿಯ ಪ್ರಾಥಮಿಕ ವಿಭಾಗದಿಂದ ಚಿರಾಗ್ ವಾಗ್‌ಮೋರೆ, ಭರತ್ ಬಮ್ಮನಹಳ್ಳಿ ಪ್ರಥಮ,

            ಮುರಳಿ ದ್ವಿತೀಯ, ಆಯುಷ್ ತೃತೀಯ, ವೈಭವ ಹಾಗೂ ಶಿಫಾನಾಜ್ ಸಮಾಧಾನಕರ ಬಹುಮಾನ ಗಳಿಸಿದರು. ಪ್ರೌಢಶಾಲಾ ವಿಭಾಗದ ಚಿತ್ರಕಲಾ ಸ್ಪರ್ಧೆಯಲ್ಲಿ ಹೇಮಶ್ರೀ ಪೇಟಂಕರ್ ಹಾಗೂ ಪೂರ್ವಿ ಮಿಶ್ರಿಕೋಟಿ ಪ್ರಥಮ, ಅವನಿ ಹಾಗೂ ನಯನಾ ದ್ವಿತೀಯ, ಸ್ನೇಹಿತ್ ಶೆಟ್ಟಿ ತೃತೀಯ, ಪ್ರತೀಕ್ ಸಮಾಧಾನಕರ ಬಹುಮಾನ ಗಳಿಸಿದರು. ವಿಜೇತರೆಲ್ಲರಿಗೂ ಶಾಲಾ ಹಾಗೂ ಮಹಾವಿದ್ಯಾಲಯದ ಸಿಬ್ಬಂದಿಗಳು ಅಭಿನಂದಿಸಿದರು. 


ಸುದ್ದಿ ಓದಿ