ಆಟೋಟಗಳು ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತೇವೆ- ನಾಗರಾಜ್ ಗೌಳಿ
ಲೋಕದರ್ಶನ ವರದಿ
ಧಾರವಾಡ 06 : "ಆಟೋಟಗಳು ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತೇವೆ." ಕೇವಲ ಓದುವುದರಲ್ಲಿ ಅಷ್ಟೇ ಅಲ್ಲದೆ ಮಕ್ಕಳು ಕ್ರೀಡೆಯಲ್ಲೂ ಭಾಗವಹಿಸಿ ದೇಹದಾಢ್ಯತೆಯನ್ನು ಹೊಂದಬೇಕು. ಎಂದು ಅತಿಥಿಗಳಾದ ಶ್ರೀಯುತ ನಾಗರಾಜ ಗೌಳಿ ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಜೆ ಎಸ್ ಎಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟವು ಜೆ.ಎಸ್.ಎಸ್ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ಜರುಗಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಾಗರಾಜ್ ಗೌಳಿ ಅವರು ಆಗಮಿಸಿದ್ದರು. ಬಲೂನ್ ಗಳನ್ನು ಬಾನಿನಲ್ಲಿ ತೇಲಿ ಬಿಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ. ಆರೋಗ್ಯದಲ್ಲಿ ಹಾಗೂ ದೇಹದಾಢ್ಯತೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಅದನ್ನರಿತು ಮಕ್ಕಳು ಎರಡನ್ನು ತಮ್ಮ ಜೀವನದಲ್ಲಿ ರೂಪಿಸಿಕೊಳ್ಳಬೇಕು. ದೇಶ ಸೇವೆಗಾಗಿ ಸೈನಿಕರು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ.
ಭಾರತೀಯ ಸೇನೆ ನಮ್ಮ ದೇಶಕ್ಕೆ ಒಂದು ಕೀರೀಟ ಎನ್ನಬಹುದು. ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆ ಮಾಡಿ ಮಕ್ಕಳನ್ನು ದ್ವೇಷಿಸಿ ಮಾತನಾಡಿದರು. ಜೀವನದಲ್ಲಿ ಸಾಧನೆ ಮಾಡಬೇಕೆಂದರೆ ಶ್ರಮ ಅತ್ಯಂತ ಮುಖ್ಯ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗುರುಗಳು, ತಂದೆ-ತಾಯಿಯರ ಮೇಲೆ ನಂಬಿಕೆಯನ್ನು ಇಟ್ಟು ಹೆಜ್ಜೆಯನ್ನ ಮುಂದಿಡಬೇಕು. ಎಂದು ಈ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿದ್ದ ಇನ್ನೋರ್ವ ಅತಿಥಿಗಳಾದ ಜೆ ಎಸ್ ಎಸ್ ಸಂಸ್ಥೆಯ ಆಡಳಿತ ಅಧಿಕಾರಿಗಳಾದ ಅರಿಹಂತ ಪ್ರಸಾದ ಅವರು ಮಾತನಾಡಿದರು.
ಐ.ಟಿ.ಐ ಕಾಲೇಜಿನ ಪ್ರಾಂಶುಪಾಲರಾದ ಮಹಾವೀರ ಉಪಾಧ್ಯೆ ಹಾಗೂ ಜೆ.ಎಸ್.ಎಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಸುಧಾಮಣಿ ರಾವ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ನಮ್ಮ ಶಾಲೆಯ ಮುಖ್ಯ ಗುರುಗಳಾದ ಮೈನಾವತಿ ದಿವಟೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ಯಾಮಲಾ ಹೆಗಡೆಯವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ವಿಜಯಲಕ್ಷ್ಮಿ ನೂಲ್ವಿಅವರು ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ರಾಜೇಶ್ವರಿ ಶೆಟ್ಟಿ ಅವರು ವಂದನಾರೆ್ಣ ಗೈದರು. ಮಹಾಂತೇಶ್ ಕಬನೂರವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕವೃಂದ ಹಾಗೂ ಮುದ್ದು ಮಕ್ಕಳು ಭಾಗವಹಿಸಿದ್ದರು.