ಹೊಸಪೇಟೆ

ಉಳ್ಳವರ ಶಿವಾಲಯ ದೇಹ ದೇಗುಲ ಕೃತಿ ಲೋಕಾರೆ​‍್ಣ

ಉಳ್ಳವರ ಶಿವಾಲಯ ದೇಹ ದೇಗುಲ ಕೃತಿ ಲೋಕಾರೆ​‍್ಣ

ಲೋಕದರ್ಶನ ವರದಿ 

ಹೊಸಪೇಟೆ 15 : ವಿಜಯನಗರ ಪ್ರತಿಷ್ಠಾನ ಹೊಸಪೇಟೆ, ಅಖಿಲ ಭಾರತ ಶರಣಸಾಹಿತ್ಯ ಪರಿಷತ್ ಜಿಲ್ಲಾಘಟಕ ವಿಜಯನಗರ ಪ್ರೌಢ ದೇವರಾಯ ತಾಂತ್ರಿಕ ಮಹಾ ವಿದ್ಯಾಲಯ ಹೊಸಪೇಟೆ ಇವರ ಸಹಯೋಗದಲ್ಲಿ ಡಾ. ಮೃತ್ಯುಂಜಯ ರುಮಾಲೆರವರ ಉಳ್ಳವರ ಶಿವಾಲಯ ದೇಹ ದೇಗುಲ ಕೃತಿ ಲೋಕಾರೆ​‍್ಣ ಸಮಾರಂಭವನ್ನು ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ ಹೊಸಪೇಟೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.  

ಈ ಕಾರ್ಯಕ್ರಮ ಹಾಗೂ ಕೃತಿ ಲೋಕಾರೆ​‍್ಣಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಕುಲಪತಿಗಳಾದ ಡಾ. ಡಿ.ವಿ.ಪರಮ ಶಿವಮೂರ್ತಿಯವರು ಬಿಡುಗಡೆಗೊಳಿಸಿ ಮಾತನಾಡಿ ಕನ್ನಡ ಸಾಹಿತ್ಯ ಅತ್ಯಂತ ಸಮೃದ್ಧವಾದ ವಿಶಿಷ್ಟವಾದ ಸಾಹಿತ್ಯವಾಗಿದೆ ಅದರಲ್ಲಿ ಶರಣಸಾಹಿತ್ಯ ಪ್ರಸ್ತುತ ಕಾಲಘಟ್ಟದಲ್ಲೂ ಜೀವಂತವಾಗಿದೆ. ಇಷ್ಟು ಕಾಲಕಳೆದರು ಸಹ ನಮ್ಮ ಅಂತರಂಗವನ್ನು ಪ್ರಶ್ನಿಸುವಂತಹ ನಡವಳಿಕೆ ತಿದ್ದಿಕೊಳ್ಳುವಂತಹ ಮಹತ್ವತೆಯನ್ನ ಶರಣ ಸಾಹಿತ್ಯ ಹೊಂದಿದೆ. ಕನ್ನಡ ನೆಲ ಸಂಭಂದವನ್ನು ಬೆಸೆಯುವ ನೆಲವಾಗಿದೆ.

ಇನ್ನೊಬ್ಬರನ್ನು ಸಹಿಸಿಕೊಳ್ಳುವ ಹಾಗೂ ಪರಧರ್ಮ ಸಹಿಷ್ಠ್ನುತೆಯ ನೆಲವಾಗಿದೆ. ಈ ನೆಲದಲ್ಲಿ ಬಸವಣ್ಣ ಹಾಗೂ ಸಮಕಾಲೀನರು ನೀಡಿದ ಶರಣಸಾಹಿತ್ಯ ಕೊಡುಗೆ ಕನ್ನಡ ಬಾಷೆಯ ಸೊಗಡನ್ನ ಹೆಚ್ಚಿಸಿದೆ. ಅದರ ಭಾಗವಾಗಿ ಡಾ. ಮೃತ್ಯುಂಜಯ ರುಮಾಲೆಯವರು ಬಸವಣ್ಣನವರ ಉಳ್ಳವರು ಶಿವಾಲಯ ಮಾಡುವರು ಎಂಬ ಒಂದು ವಚನವನ್ನ ಬೇರೆ ಬೇರೆ ಶ್ರೇಷ್ಠ ವಿದ್ವಾಂಸರ ಹೇಳಿಕೆಗಳನ್ನ ವಿಮರ್ಷೆಗಳನ್ನ ವಿಶ್ಲೇಷಿಸಿ ಒಂದು ಬಹುದೊಡ್ಡ ಕೃತಿಯನ್ನು ರಚಿಸಿರುವುದು ಶ್ಲಾಘನೀಯ ಎಂದು ಹೇಳಿದರು.  


ಸುದ್ದಿ ಓದಿ