ಜ್ಞಾನ, ಆತ್ಮಬಲ ಮತ್ತು ಪರಿಶ್ರಮದಿಂದ ಯಶಸ್ಸು ಸಾಧ್ಯ: ಆನಂದ ದೇವರ ಕರೆ
ರಾಯಬಾಗ 15: ನಮ್ಮ ಜ್ಞಾನ ಬಲ, ಆತ್ಮ ಬಲ, ತೋಳ ಬಲದ ಮೇಲೆ ನಂಬಿಕೆ ಇಟ್ಟು, ನಮ್ಮ ಬದುಕನ್ನು ನಾವು ಚೆನ್ನಾಗಿ ರೂಪಿಸಿಕೊಳ್ಳಬೇಕು ಎಂದು ಜಮಖಂಡಿ ಓಲೆಮಠದ ಆನಂದ ದೇವರು ಹೇಳಿದರು. ಗುರುವಾರ ಪಟ್ಟಣದ ಬಿ.ಎ.ಚೌಗುಲೆ ಶಿಕ್ಷಣ ಸಂಸ್ಥೆಯ ಹೀರಾಬಾಯಿ ಭರಮಾ ಚೌಗುಲೆ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯದ 2026-27ನೇ ಸಾಲಿನ ಪದವಿ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್ ಚಟುವಟಿಕೆಗಳ ಉದ್ಘಾಟಿನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಜೀವನ ಮಾಡಲು ಹಲವಾರು ಒಳ್ಳೆಯ ದಾರಿಗಳಿದ್ದು ಆ ನಿಟ್ಟಿನಲ್ಲಿ ಹೋಗಲು ಪ್ರಯತ್ನ ಮಾಡಬೇಕು.
ಪ್ರಾಮಾಣಿಕತೆಯಿಂದ ಕಷ್ಟ ಪಟ್ಟು ಕೆಲಸ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಈ ಭಾಗದಲ್ಲಿ ಚೌಗುಲೆ ಶಿಕ್ಷಣ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಿದೆ ಎಂದರು. ಸಂಸ್ಥೆಯ ಕಾರ್ಯದರ್ಶಿ ವಿನಯ ಚೌಗುಲೆ ಮಾತನಾಡಿ, ವಿದ್ಯಾರ್ಥಿ ಜೀವನ ಅಮೂಲ್ಯವಾಗಿದ್ದು, ಒಳ್ಳೆಯ ಶಿಕ್ಷಣ, ಸಂಸ್ಕಾರ ಪಡೆದು ಸಮಾಜದಲ್ಲಿ ಗೌರವಯುತ ಸ್ಥಾನ ಪಡೆಯಬೇಕು,
ಮಹಾನ ಪುರುಷರು ನಮಗೆ ಆದರ್ಶರಾಗಬೇಕೆಂದರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಲ್.ಬಿ.ಚೌಗುಲೆ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಾಚಾರ್ಯ ಎಸ್.ಎಸ್. ದಿಗ್ಗೇವಾಡಿ, ಉಪನ್ಯಾಸಕರಾದ ಪಿ.ಡಿ.ಲಂಗೋಟಿ, ಪೂರ್ಣಿಮಾ ಕಾಳೆ, ಶಿವಾಜಿ ಭುಯಿ, ಮಧುಮತಿ ವಾಳಕೆ, ಸುರೇಶ ಶಿಂದೆ, ಐಶ್ವರ್ಯ ಸುತಾರ, ಗಜಾನನ ಪೂಜಾರಿ, ಮಾರುತಿ ಪೂಜಾರಿ, ಕೀರ್ತಿ ಗುರವ, ಸುಪ್ರಿಯಾ ಗುಪ್ತೆ, ಸಿ.ವೈ.ಬೆಳಗಲಿ, ಎ.ವ್ಹಿ. ಕಾಂಬಳೆ, ಎ. ಎಂ. ಕಾಂಬಳೆ, ವಿದ್ಯಾರ್ಥಿ ಪ್ರತಿನಿಧಿಗಳಾದ ಹನುಮಂತ ಕಾಂಬಳೆ, ಸುಜಾತಾ ಕಾಂಬಳೆ ಹಾಗೂ ವಿದ್ಯಾರ್ಥಿಗಳು ಇದ್ದರು.