ಬೆಳಗಾವಿ

ಬೆಟಗೇರಿ ಗ್ರಾಮದಿಂದ ಪಲಾವ ಅನ್ನಸಂತರೆ​‍್ನ

ಬೆಟಗೇರಿ ಗ್ರಾಮದಿಂದ ಪಲಾವ ಅನ್ನಸಂತರೆ​‍್ನ

ಲೋಕದರ್ಶನ ವರದಿ 


ಬೆಟಗೇರಿ  15: ರಾಜ್ಯ ರೈತ ಸಂಘಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ, ಗೌರವಾಧ್ಯಕ್ಷ ಶಶಿಕಾಂತ ಗೂರೂಜಿ ನೇತೃತ್ವದಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹತ್ತರಗಿ ಟೋಲ್ ನಾಕಾ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಅಹೋರಾತ್ರಿ ಕಳೆದೆರಡು ದಿನಗಳಿಂದ ಪ್ರತಿಭಟನೆ ಕೈಗೊಂಡು ಬುಧವಾರ ಸಂಜೆ ಹೊತ್ತು ಹುಬ್ಬಳ್ಳಿಯತ್ತ ಪಾದಯಾತ್ರೆ ಆರಂಭಿಸಿದ ರೈತರಿಗೆ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮಸ್ಥರಿಂದ ಪಲಾವ ಅನ್ನಸಂತರೆ​‍್ನ ಸೇವೆ ಗುರುವಾರ ಅ.15ರಂದು ನಡೆಯಿತು. 

   ಸ್ಥಳೀಯ ಯುವ ಪ್ರಗತಿಪರ ರೈತ ಶ್ರೀಧರ ದೇಯಣ್ಣವರ ಮಾತನಾಡಿ, ಈ ಅನ್ನಸಂತರೆ​‍್ನ ಸೇವೆಗೆ ಸ್ಥಳೀಯ ಹಲವಾರು ಜನ ಗ್ರಾಮಸ್ಥರು, ರೈತರು ಕೈಜೋಡಿಸಿದ್ದಾರೆ. ಹುಬ್ಬಳ್ಳಿಯತ್ತ ಪಾದಯಾತ್ರೆ ಆರಂಭಿಸಿದ ರೈತರಿಗೆ ಹಾಗೂ ಪ್ರತಿಭಟನೆ ಕಾರ್ಯಕ್ರಮ ಮುಗಿಯುವ ತನಕ ಪ್ರತಿಭಟನಾನಿರತ ರೈತರಿಗೆ ಪ್ರತಿದಿನ 1 ಕ್ವಿಂಟಲ್ ಪಲಾವ ಅನ್ನ ಸಂತರೆ​‍್ನ ಸೇವೆ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮಸ್ಥರಿಂದ, ಪ್ರಗತಿಪರ ರೈತರಿಂದ ನಡೆಯಲಿದೆ ಎಂದರು. 

    ಬೆಟಗೇರಿ ತಾಪಂ ಮಾಜಿ ಸದಸ್ಯ ಬಸವಂತ ಕೋಣಿ ಅನ್ನಸಂತರೆ​‍್ನ ಸೇವೆಗೆ ಚಾಲನೆ ನೀಡಿದರು. ವೇದಮೂರ್ತಿ ಈರಯ್ಯ ಹಿರೇಮಠ ಈ ಕಾರ್ಯಕ್ರಮದ ಸಮ್ಮುಖ ವಹಿಸಿದ್ದರು. ಸ್ಥಳೀಯ ಅನ್ನಸಂತರೆ​‍್ನ ಆಯೋಜಕ ಸಮಿತಿ ವತಿಯಿಂದ ಅನ್ನಸಂತರೆ​‍್ನ ಸೇವೆಯಲ್ಲಿ ಪಾಲ್ಗೊಳ್ಳುವ ಯುವಕರಿಗೆ ಹಸಿರು ಶಾಲು ವಿತರಿಸಿದರು. ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೈಗೊಂಡಿರುವ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದ ಪ್ರತಿಭಟನೆಗೆ ಸ್ಥಳೀಯ ರೈತರು, ಗ್ರಾಮಸ್ಥರು ಈ ವೇಳೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. 

  ಲಕ್ಷ್ಮಣ ನೀಲಣ್ಣವರ, ಮಹಾಂತೇಶ ದಂಡಿನ, ಮಹಾಂತೇಶ ಸಿದ್ನಾಳ, ಪ್ರಕಾಶ ಹಾಲಣ್ಣವರ, ಅರ್ಜುನ ಅಂದಾನಿ, ಅರ್ಜುನ ನೀಲಣ್ಣವರ, ಬಸವರಾಜ ದೇಯಣ್ಣವರ, ಹರೀಶ ದೇಯಣ್ಣವರ, ಭೀಮಶಿ ಮಾಕಾಳಿ, ಮಹಾಂತೇಶ ಮಾಳೇದ, ಭೀಮಶೆಪ್ಪ ಬಳಿಗಾರ, ಹನುಮಂತ ಆನೆಗುಂದಿ, ಸದಾಶಿವ ದಂಡಿನ, ಮುತ್ತೆಪ್ಪ ದಂಡಿನ, ಬಸು ದೇಯಣ್ಣವರ, ರುದ್ರ​‍್ಪ ಮಾಡಲಗಿ, ಬೀರ​‍್ಪ ಮಾಕಾಳಿ, ಮಲ್ಲಪ್ಪ ಪೇದನ್ನವರ, ರ್ಜುನ ವಾಲಿಕಾರ, ಸ್ಥಳೀಯ ಹಿರಿಯ ನಾಗರಿಕರು, ರೈತರು, ಗ್ರಾಮಸ್ಥರು, ಮತ್ತೀತರರು ಇದ್ದರು. 


ಸುದ್ದಿ ಓದಿ