ಉಗರಗೋಳ ಗ್ರಾಮದಲ್ಲಿ ದುರ್ಗಾಮಾತಾ ನಿತ್ಯ ಗ್ರಾಮ ಸಂಚಾರ
ಲೋಕದರ್ಶನ ವರದಿ
ಉಗರಗೋಳ 15: ನವರಾತ್ರಿ ಅಂಗವಾಗಿ ಧರ್ಮದ ರಕ್ಷಣೆಗಾಗಿ ಉಗರಗೋಳ ಗ್ರಾಮದ ದುರ್ಗಾಮಾತಾ ದೌಡ ಯುವಕ ಸಂಘದ ವತಿಯಿಂದ ಆಯೋಜಿಸಿರುವ ದುರ್ಗಾಮಾತಾ ನಿತ್ಯ ಗ್ರಾಮದ ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಿದೆ.
ಗುರುವಾರ ಧ್ಯಾಮವ್ವ-ದುರ್ಗವ್ವ ಮಂದಿರದಿಂದ ಆರಂಭಗೊಂಡ ದೌಡ್ ಬೆಣ್ಣಿಕಟ್ಟಿ, ಹನುಮಂತ ದೇವರ ಮಂದಿರ, ಸಂಗೊಳ್ಳಿ ರಾಯಣ್ಣ ಸರ್ಕಲ್, ಅಂಬೇಡ್ಕರ್ ಸರ್ಕಲ್, ಬಸ್ ನಿಲ್ದಾಣ, ಬಸವೇಶ್ವರ ಸರ್ಕಲ್ ಮೂಲಕ ಸಾಗಿ ಗ್ರಾಮದೇವತೆ ದೇವಸ್ಥಾನ ತಲುಪಿತು.
ಶ್ವೇತ ವಸ್ತ್ರಧಾರಿಗಳು “ದುರ್ಗಾಮಾತಾ ಕೀ ಜೈ” ಎನ್ನುತ್ತ ಹೆಜ್ಜೆಹಾಕಿದರು. ರಂಗೋಲಿ ಚಿತ್ತಾರ ಮಾರ್ಗದಲ್ಲಿ ದೌಡ್ ತಮ್ಮ ಮನೆ ಮುಂದೆ ಬರುತ್ತಿದ್ದಂತೆ, ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು.
ಹರೀಶ ಪೈ, ಮುತ್ತಯ್ಯ ತೊರಗಲ್ಲಮಠ, ಅಪ್ಪು ಯಕ್ಕುಂಡಿ, ನಾಗನಗೌಡ ಗಡಾದಗೌಡ್ರ, ಯಲ್ಲಪ್ಪಗೌಡ ಪೋಲೇಶಿ, ಅಪ್ಪು ಹೆಬಸೂರ, ವೈ.ವೈ.ಕಾಳಪ್ಪನವರ, ರಾಕೇಶ ಪಾಟೀಲ, ಮಂಜು ಯಕ್ಕುಂಡಿ, ಮಂಜು ಗುಡೆನ್ನವರ,
ಉಮೇಶ ಹಾದಿಮನಿ, ಜ್ಯೋತಿಬಾ ಶಿಂಧೆ, ಉಮೇಶ ಹಾದಿಮನಿ, ಕುಮಾರ ಕಲಾಲ, ಶಂಕ್ರೆಮ್ಮ ಮುದ್ರಗಣಿ, ಭಾಗ್ಯ ಪೋಲೇಶಿ, ಸವಿತಾ ಹನಶಿ, ಮಂಜುಳಾ ಶಿಂಧೆ, ಪೊಲೀಸ್ ಬಾಳೇಶ ಶೆಟ್ಟೇಪ್ಪನವರ, ಯಲ್ಲಪ್ಪ ಗುಡೆನ್ನವರ, ಜ್ಞಾನೇಶ ಕೊಪ್ಪದ, ನಂದಕುಮಾರ ಚಂದರಗಿ, ಕಲ್ಲಪ್ಪ ಕಂಬಾರ, ಮಾರುತಿ ಬುಳ್ಳಿ, ಮಹೇಶ ರೋಗಿ, ಮಂಜುನಾಥ ಜಾಲಗಾರ ಇದ್ದರು.