ಗದಗ

ರಾಷ್ಟ್ರದ ಅಭಿವೃದ್ಧಿಯಲ್ಲಿ ಗ್ರಾಮೀಣ ಯುವಕರ ಪಾತ್ರ ಬಹಳ ಮುಖ್ಯ

ರಾಷ್ಟ್ರದ ಅಭಿವೃದ್ಧಿಯಲ್ಲಿ ಗ್ರಾಮೀಣ ಯುವಕರ ಪಾತ್ರ ಬಹಳ ಮುಖ್ಯ

ಲೋಕದರ್ಶನ ವರದಿ 


ಗದಗ 15 : ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾವಂತರಾಗಿ ಹಾಗೂ ಪ್ರಜ್ಞಾವಂತ ಪ್ರಜೆಗಳಾಗಬೇಕು ಎಂದು   ಕನ್ನಡ ಉಪನ್ಯಾಸಕರಾದ ಶಾಂತಕುಮಾರ ಮಲ್ಲಾಪುರ ಅವರು ಹೇಳಿದರು. 

 ಅವರು ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಚಿಕೇನಕೊಪ್ಪದ ಚನ್ನವೀರ ಶರಣರ  ಪದವಿ ಪೂರ್ವ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಘಟಕದ ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿ, ಹಳ್ಳಿಗಳ ಅಭಿವೃದ್ಧಿ ಯುವಕರ ಕೈಯಲ್ಲಿದೆ ಗ್ರಾಮಗಳ ಅಭಿವೃದ್ಧಿಯಾಗಬೇಕಾದರೆ ಅಲ್ಲಿ ಮೂಲಭೂತ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ಸುಸಜ್ಜಿತ ರಸ್ತೆಗಳು, ಮಹಿಳೆಯರಿಗೆ  ಶಿಕ್ಷಣ, ಮೂಡನಂಬಿಕೆ ತೊಲಗುವಿಕೆ ಇವೆಲ್ಲವೂ ಬಹಳ ಪ್ರಮುಖವಾಗಿವೆ. ಎನ್‌ಎಸ್‌ಎಸ್ ಶಿಬಿರಾರ್ಥಿಗಳು  ಸೇವಾ ಮನೋಭಾವ, ನಂಬಿಕೆ, ಆತ್ಮವಿಶ್ವಾಸ ಹಾಗೂ ಓದುವ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. 

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಹನುಮಪ್ಪ ಗಾಣಿಗೇರ, ರೇಣವ್ವ  ಅಗಸಿಮನಿ,  ಕಾಲೇಜಿನ ಪ್ರಾಚಾರ್ಯರಾದ ಎಸ್‌. ಬಿ. ಹಿರೇಮಠ, ಎನ್‌ಎಸ್‌ಎಸ್ ಕಾರ್ಯಕ್ರಮಧಿಕಾರಿ ಜಿ. ಎಸ್‌. ವೀರಘಂಟಿ ಹಾಗೂ ಶಿಬಿರಾರ್ಥಿಗಳು  ಹಾಜರಿದ್ದರು. ಕುಮಾರಿ ಲಕ್ಷಿ-್ಮ ನುಚ್ಚಂಬಲಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಗೀತಾ ರೋಣದ ಸ್ವಾಗತಿಸಿದರು. ಸಿಂಧು ಆಡೂರು ವಂದಿಸಿದರು. 


ಸುದ್ದಿ ಓದಿ