‘ಮತದಾರರ ನೋಂದಣಿ ಕುರಿತು ಜಾಗೃತಿ ಮತ್ತು ನೋಂದಣಿ ಅಭಿಯಾನ’
ಲೋಕದರ್ಶನ ವರದಿ
ಗದಗ 15; ಕೆ.ಎಲ್.ಇ ಕಲಾ ಹಾಗೂ ವಾಣಿಜ್ಯ ಮಾಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಂದ ಹಾತಲಗೇರಿ ಗ್ರಾಮದಲ್ಲಿ ಮತದಾರರ ನೋಂದಣಿ ಕುರಿತು ಜಾಗೃತಿ ಮತ್ತು ನೋಂದಣಿ ಅಭಿಯಾನ. ದಿನಾಂಕ. 15-10-2026 ರ ಗುರುವಾರ ದಂದು ಮತದಾರರ ನೋಂದಣಿ ಕುರಿತು ಜಾಗೃತಿ ಮತ್ತು ನೋಂದಣಿ ಅಭಿಯಾನವನ್ನು ಹಮ್ಮಿಕೊಂಡಿತ್ತು. ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಲು ಜನರ ರಾಜಕೀಯ ಭಾಗವಹಿಸುವಿಕೆ ಮಹತ್ವದ್ದು. ಹಾಗಾಗಿ ಪ್ರಜೆಗಳು ಮತದಾನದ ಹಕ್ಕನ್ನು ಪಡೆದುಕೊಳ್ಳುವುದು ಹಾಗೂ ಚಲಾಯಿಸುವುದು ಅತ್ಯಗತ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಮಹಾವಿದ್ಯಾಲಯವು ಹಾತಲಗೇರಿ ಗ್ರಾಮದಲ್ಲಿ ಯುವ ಮತದಾರರ ನೊಂದಣಿ ಹಾಗೂ ಜಾಗೃತ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳು ಮನೆ ಮನೆಗೆ ತೆರಳಿ ಮತದಾರರ ಸಹಾಯವಾಣಿ ಅಪ್ಲಿಕೇಶನ್ ಮೂಲಕ ಮತದಾರರ ನೊಂದಣಿ ಮಾಡಿಸಿದರು. ಹಾಗೂ ಕಡ್ಡಾಯ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸುವಂತೆ ವಿಭಾಗ ಮುಖ್ಯಸ್ಥರಾದ ಡಾ. ವೀಣಾ ಈ ಅವರು ಗ್ರಾಮಸ್ಥರಿಗೆ ಅರಿವು ನೀಡಿದರು.
ಈ ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಪ್ರೊ. ಚಂದಾಲಿಂಗಪ್ಪ ಹಳ್ಳಿಕೆರೆಯವರು ವಿದ್ಯಾರ್ಥಿಗಳೊಂದಿಗೆ ಮತದಾನ ಅಭಿಯಾನ ಜಾತ ಕೈಗೊಂಡರು. ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಸವಾಲುಗಳ ಕುರಿತು ಪ್ರಾಯೋಗಿಕ ಜ್ಞಾನ ನೀಡುವ ಜೊತೆಗೆ ಮತದಾರರ ನೊಂದಣಿ ಕುರಿತು ಜಾಗೃತಿ ಮೂಡಿಸಿದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿಯ ನಿಕಟ ಪೂರ್ವ ಅಧ್ಯಕ್ಷರಾದ ಗಂಗಮ್ಮ ಕಡೆಮನಿ ಹಾಗೂ ಗ್ರಾಮ್ ಪಂಚಾಯಿತಿ ಅಭೀವೃದ್ಧಿ ಅಧಿಕಾರಿಗಳಾದ ಸುರೇಶ ಲಮಾಣಿ ಮತ್ತು ಪಂಚಾಯಿತಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಅಲ್ಲದೆ ಗ್ರಾಮದ ಗ್ರಾಮಸ್ಥರು ಸಹಕರಿಸುವ ಮೂಲಕ ಕೆ.ಎಲ್.ಇ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗಕ್ಕೆ ಅಭಿನಂದನೆ ಸಲ್ಲಿಸಿದರು.