ಗದಗ

ನೆಲೋಗಲ್ ಗ್ರಾಮದಲ್ಲಿ ಎನ್‌ಎಸ್‌ಎಸ್ ಸ್ವಚ್ಛತಾ ಶಿಬಿರ

ನೆಲೋಗಲ್ ಗ್ರಾಮದಲ್ಲಿ ಎನ್‌ಎಸ್‌ಎಸ್ ಸ್ವಚ್ಛತಾ ಶಿಬಿರ

ಲಕ್ಷ್ಮೇಶ್ವರ  13: ತಾಲೂಕಿನ ನೆಲೋಗಲ್ ಗ್ರಾಮದಲ್ಲಿ  ಬಿ.ಪಿ.ಅಳವಂಡಿ ಬಾಲಕಿಯರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಬೆಳ್ಳಟ್ಟಿವಿದ್ಯಾರ್ಥಿಗಳಿಂದ ರಾಷ್ಟ್ರೀಯ ಸೇವಾ ಯೋಜನೆ ಎನ್‌ಎಸ್‌ಎಸ್ ಘಟಕದ ವತಿಯಿಂದ ಗ್ರಾಮದಲ್ಲಿ ಏಳು ದಿನಗಳ ವಿಶೇಷ ಸ್ವಚ್ಛತಾ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತುವಿದ್ಯಾರ್ಥಿಗಳಲ್ಲಿ ಯಾವುದೇ ಕೆಲಸ ಕೇಳಲ್ಲ ಎಂಬ ಭಾವನೆ ಮೂಡಿಸುವುದು ಮತ್ತು ಶ್ರಮದಾನದ ಮಹತ್ವವನ್ನು ತಿಳಿಸಿಕೊಡುವುದು ಪರಿಸರ ಜಾಗೃತಿ ಗ್ರಾಮ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವ ಮೂಲಕ ಪರಿಸರ ಸುರಕ್ಷಣೆಯ ಜಾಗೃತಿ ಮೂಡಿಸುವುದು ವ್ಯಕ್ತಿತ್ವ ವಿಕಸನ ಗುಂಪು ಜೀವನ ನಾಯಕತ್ವ ಗುಣ ಮತ್ತು ಸಮಾಜ ಸೇವಾ ಮನೋಭಾವನೆಯ ಎನ್‌ಎಸ್‌ಎಸ್ ಸ್ವಯಂಸೇವಕರ ಶಿಬಿರದ ಮೂಲ ಉದ್ದೇಶವಾಗಿತ್ತು  ಶಿಬಿರದಲ್ಲಿ ಪಾಲ್ಗೊಂಡ ಎಲ್ಲ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಗ್ರಾಮದ ದೇವಸ್ಥಾನ ಶಾಲೆ ಬಸ್ ನಿಲ್ದಾಣ ಸೇರಿದಂತೆ ಗ್ರಾಮದ ಎಲ್ಲೆಡೆ ಸ್ವಚ್ಛತೆ ಮಾಡುವ ಮೂಲಕ ಸ್ವಚ್ಛತೆಯ ಬಗ್ಗೆ ಗ್ರಾಮದಲ್ಲಿ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ. 

 ಶಿಬಿರದ ಅಂಗವಾಗಿ ಮಂಗಳವಾರ ಸಂಜೆ ಗ್ರಾಮದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸುಗ್ನಳ್ಳಿ ಗ್ರಾಮದ ಕೃಷಿ ಪಂಡಿತರು ಹಲವಾರು ಪ್ರಶಸ್ತಿ ಪುರಸ್ಕೃತರಾದ ಡಾ, ಬಸವರಾಜ ನಾವಿ ಅವರು ಯುವಕರ ಚಿತ್ತ ಖುಷಿ ಯತ್ತ ವಿಷಯದ ಕುರಿತು ಉಪನ್ಯಾಸ ನೀಡಿದಅವರು ವಿದ್ಯಾರ್ಥಿಗಳು ತಮ್ಮ ಉತ್ತಮ ಬದುಕು ರೂಪಿಸಿಕೊಳ್ಳಲು ಹಲವಾರು ಮಾರ್ಗಗಳಿವೆ ನೌಕರಿ ವ್ಯಾಮೋಹ ಒಂದೇ ಕಲಿಕೆಗೆ ಮೂಲ ಆಗಬಾರದು ನೌಕರಿ ಇಲ್ಲದೆ ಹಲವಾರು ವಿಧಗಳಿಂದ ನಾವು ಸಾಧನೆಗಳನ್ನು ಮಾಡುವ ಮೂಲಕ ಉನ್ನತ ಮಟ್ಟದ ನಮ್ಮ ಬದುಕು ರೂಪಿಸಿಕೊಳ್ಳಲು ಸಾಧ್ಯವಿದೆ ಎಂದರು ಎನ್ ಎಸ್ ಎಸ್ ಶಿಬಿರದ ಅಂಗವಾಗಿ ವಿದ್ಯಾರ್ಥಿಗಳು ಏಳು ದಿನಗಳವರೆಗೆ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದ್ದು ತುಂಬಾ ಸಂತೋಷ ತಂದಿದೆ ಗ್ರಾಮಸ್ಥರು ಶಿಬಿರದ ಪ್ರಯೋಜನವನ್ನು ಪಡೆದುಕೊಂಡು ಮುಂದೆಯೂ ಸಹ ಗ್ರಾಮವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ ಎಂದರುಈ ಸಮಯದಲ್ಲಿ ಗ್ರಾಮದ ಶಿವಣ್ಣ ಲಮಾಣಿ ಈಶ್ವರ​‍್ಪ ಬಕ್ಷಿ ಮಹೇಶ ಮೂಲಿಮನಿ ಗ್ರಾಮದ ಎಲ್ಲ ಗುರು ಹಿರಿಯರು ಮುಖಂಡರು ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಶಿಬಿರದ ಮುಖ್ಯಸ್ಥರು ಇದ್ದರು 


ಸುದ್ದಿ ಓದಿ