ಬೆಳಗಾವಿ

ಮುನವಳ್ಳಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ

ಮುನವಳ್ಳಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ



ಮುನವಳ್ಳಿ  27 : ಪ್ರಾಚೀನ ಹಿಂದೂ ಮಹಾಕಾವ್ಯವಾದ ರಾಮಾಯಣದ ಮೂಲ ಕತೃ ಮತ್ತು ಪೂಜ್ಯ ಋಷಿ ವಾಲ್ಮೀಕಿ, ಸಂಸ್ಕೃತ ಸಾಹಿತ್ಯದ "ಆದಿ ಕವಿ" ಎಂದು ಕರೆಯಲ್ಪಡುವ ವಾಲ್ಮೀಕಿಯ ಜೀವನ ಮತ್ತು ಬೋಧನೆಗಳನ್ನು ಗೌರವಿಸುವ ಈ ದಿನ ಮಹತ್ವದ್ದು ಎಂದು ಮುಖ್ಯೋಪಾಧ್ಯಾಯರಾದ ಎಂ. ಡಿ ಜೋಗೋಜಿ ತಿಳಿಸಿದರು.


ಅವರು ಪಟ್ಟಣದ ಎಂಎಲ್‌ಇ ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾಲ್ಮೀಕಿ ಜಯಂತಿ ಆಚರಣೆಯನ್ನು ಉದ್ದೇಶಿಸಿ ಮಾತನಾಡಿರು.ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಾಹಿತಿ ಡಾ. ವ. ಬಿ. ಕಡಕೋಳ ಮಾತನಾಡಿ " ನಾರದ ಮುನಿಯೊಂದಿಗಿನ ಭೇಟಿಯು ಅವರ ಹೃದಯದಲ್ಲಿ ಆಳವಾದ ಬದಲಾವಣೆಗೆ ಕಾರಣವಾಯಿತು. ರಾಮಾಯಣ ಮೂಲಕ ಮಹತ್ವದ ಕೃತಿಯನ್ನು ನೀಡುವ ಮೂಲಕ ಚಿರಸ್ಥಾಯಿಯಾಗಿರುವರು." ಎಂದು ತಿಳಿಸಿದರು.


ಪ್ರಾಸ್ತಾವಿಕವಾಗಿ ಶಿಕ್ಷಕರಾದ ಎ. ವ್ಹಿ. ನರಗುಂದ ಆಚರಣೆಯ ಮಹತ್ವವನ್ನು ತಿಳಿಸಿದರು. ಗುರುಮಾತೆಯರಾದ ರಮ್ಯಾ ಮರಡಿಮಠ, ವಿದ್ಯಾ ಕಾಜಗಾರ, ಪ್ರಿಯಾಂಕಾ ಪಾಟೀಲ ಪ್ರಾರ್ಥನಾಗೀತೆ ಹೇಳಿದರು. ನಾಗರಾಜ್ ಹಿಟ್ಟಣಗಿ, ಜಾಫರ್ ಮುಲ್ಲಾ, ಗೀತಾ ಪ್ರಭುನವರ, ಅಟೆಂಡರ ರಮೇಶ್ ರಣ್ಣೋರೆ, ಬಸಣ್ಣ ದೊಡವಾಡ, ಪರಿಚಾಯಕಿರಾದ ಸಿದ್ಲಿಂಗಮ್ಮ, ಸುವರ್ಣ, ಸಾವಿತ್ರಿ, ಗಂಗಮ್ಮ ಮೊದಲಾದವರು ಉಪಸ್ಥಿತರಿದ್ದರು.ಬಸವರಾಜ್ ಬಂಡಿ ಸ್ವಾಗತಿಸಿದರು. ಆರ್ ಜಿ ಮಲ್ಲಾಪುರಮಠ ನಿರೂಪಿಸಿದರು. ಕಿರಣ್ ನಾಯ್ಕರ ವಂದಿಸಿದರು. 


ಸುದ್ದಿ ಓದಿ