ಕಾಗವಾಡ

ವರದಿಗಾರರ ಮೇಲೆ ಹಲ್ಲೆ ಖಂಡಿಸಿ ತಹಶಿಲ್ದಾರ,ಡಿವೈಎಸ್ಪಿ ಅವರಿಗೆ ಕಾನಿಪದಿಂದ ಮನವಿ

ವರದಿಗಾರರ ಮೇಲೆ ಹಲ್ಲೆ ಖಂಡಿಸಿ ತಹಶಿಲ್ದಾರ,ಡಿವೈಎಸ್ಪಿ ಅವರಿಗೆ ಕಾನಿಪದಿಂದ ಮನವಿ


ಕಾಗವಾಡ 28 : ತಾಲ್ಲೂಕಿನ ಪತ್ರಕರ್ತರ ರಾಹುಲ್ ಘೋರಡೆ ಶಿರಗುಪ್ಪಿ ಸಕ್ಕರೆ ಕಾರ್ಖಾನೆ ಉಪಾದ್ಯಕ್ಷ ಮತ್ತು ಸೆಕ್ಯುರಿಟಿ ಅಧಿಕಾರಿ ಸೇರಿ ಹಲ್ಲೆ ಮಾಡಿ ಮೊಬೈಲ್ ಕಸಿದುಕೊಂಡಿರುವ ಘಟನೆ ಖಂಡಿಸಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ರವೀಂದ್ರ ಹಾದಿಮನಿ ಮತ್ತು ಡಿವೈಎಸ್ಪಿ ವಿರೇಂದ್ರಕುಮಾರ ಪಿ .ಅವರಿಗೆ ಮನವಿ ಸಲ್ಲಿಸಿ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.ಇದೆ ವೇಳೆ ಮನವಿ ಸ್ವೀಕರಿಸದ ತಹಸಿಲ್ದಾರ ಹಾಗೂ ಡಿವೈಎಸ್ಪಿ ಮಾತನಾಡಿ,ಪರೀಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಈ ವೇಳೆ ಅಧ್ಯಕ್ಷರಾದ ಸಿದ್ದಯ್ಯ ಹಿರೇಮಠ, ಕಾರ್ಯದರ್ಶಿ ವಿಜಯಮಹಾಂತೇಶ ಅರಕೇರಿ,ಸದಸ್ಯರುಗಳಾದ ಸುರೇಶ ಕಾಗಲಿ,ಮುರಗೇಶ ಗಸ್ತಿ, ಬಸವರಾಜ ತಾರದಾಳೆ,ಸಚಿನ್ ಕಾಂಬಳೆ,ಅಮರ ಕಾಂಬಳೆ, ರಾಹುಲ್ ಘೋರಡೆ, ಸಚಿನ್ ಮಾನೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ