ವಿಜಯಪುರ

ರೈತರ ಕಬ್ಬಿಗೆ 5500 ನೀಡಲೇಬೇಕು: ಕಲ್ಲಿನಾಥ ಶ್ರೀಗಳು

ರೈತರ ಕಬ್ಬಿಗೆ 5500 ನೀಡಲೇಬೇಕು: ಕಲ್ಲಿನಾಥ ಶ್ರೀಗಳು



            ಕೊಲ್ಹಾರ: ಪಟ್ಟಣದಲ್ಲಿ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಮೆರವಣಿಗೆ, ರಸ್ತೆ ತಡೆ ಮತ್ತು ರಾಷ್ಟ್ರೀಯ ಹೆದ್ದಾರಿ ತಡೆದು ಹೋರಾಟ ಮಾಡಲಾಯಿತು.

          ಪಟ್ಟಣದ ತುಂಬೆಲ್ಲ ಸ್ವಯಂ ಘೋಷಿತ ಬಂದ್ ಮಾಡಿ ಹೋರಾಟಕ್ಕೆ ಪಟ್ಟಣದ ಸಾರ್ವಜನಿಕರು,ವ್ಯಾಪಾರಸ್ಥರು ವಿವಿಧ ಸಂಘಟನೆಗಳು ಸಂಪೂರ್ಣ ಬೆಂಬಲ ನೀಡಿ ಹೋರಾಟದಲ್ಲಿ ಭಾಗವಹಿಸಿದರು, ರೈತರು ತಮ್ಮ ಎತ್ತುಗಳನ್ನು ಬಂಡೆಗಳ ಜೋತೆಯಲ್ಲಿ ಸಾವಿರಾರು ರೈತರು ಭಾಗವಹಿಸಿದ್ದರು.

            ಪಟ್ಟಣದ ಶ್ರೀ ಬಸವೇಶ್ವರ ಸರ್ಕಲ್ ದಿಂದ ಎತ್ತಿನ ಬಂಡಿಗಳಿಗೆ ಮೆರವಣಿಗೆ ಮೂಲಕ ರೈತ ಸಂಘ,ಕರವೇ ಮತ್ತು ಚಾಲಕರ ಸಂಘ ಹೀಗೆ ಹಲವಾರು ಸಂಘಟನೆಗಳ ನಾಯಕರುಗಳ ನೇತೃತ್ವದಲ್ಲಿ ಹೋರಾಟಕ್ಕೆ ಚಾಲನೆ ನೀಡಲಾಯಿತು.ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಯುಕಪಿ ಹತ್ತಿರ ಕೊರೆಮ್ಮದೇವಿ ಗುಡಿ ಮುಂದೆ ಹೋರಾಟದ ಸಮಾವೇಶ ನಡೆಯಿತು.

            ಶ್ರೀ ದಿಗಂಬರೇಶ್ವರ ಮಠದ ಶ್ರೀ ಕಲ್ಲಿನಾಥ ದೇವರು ರೈತರ ಬೇಡಿಕೆ ಉದ್ದೇಶಿಸಿ ಮಾತನಾಡಿ ರೈತರು ಒಂದು ವರ್ಷ ಬೆಳೆ ಬರುವಷ್ಟರಲ್ಲಿ ರೈತನ ಬದುಕು ಸಾಲದ ಸುಳಿಯಲ್ಲಿ ಸಿಲುಕಿ ಜೀವನ ಸಾಕು ಎನಿಸುತ್ತದೆ ಕಬ್ಬು ಬೆಳೆಯುವಲ್ಲಿ ರೈತರ ಕಷ್ಟ ಹೇಳತೀರದು,ರೈತರ ನೋವು ಅರಿತು ಕೊಂಡು ಕಾರ್ಖಾನೆ ಮಾಲೀಕರು ಮತ್ತು ಸರ್ಕಾರಗಳು ಕೂಡಿಕೊಂಡು ರೈತರಿಗೆ ಬೆಲೆ 5500 ಕೊಡಬೇಕು ಎಂದು ಹೇಳಿದರು.

           ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಮಾತನಾಡಿ ರೈತರ ಹೋರಾಟದಲ್ಲಿ ರಾಜಕೀಯ ಮಾಡದೇ ರೈತನ ಮಕ್ಕಳು ನಾವೆಲ್ಲಾ ಒಂದುಗೂಡಿ ರೈತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನಾನು ಕಾರ್ಖಾನೆಗಳ ಹಾಗೂ ರಾಜ್ಯ ಸರ್ಕಾರಗಳಿಗೆ ಹೇಳುವುದು ಏನೆಂದರೆ ಒಂದು ಸೂಕ್ತ ಬೆಲೆ ನಿರ್ಧರಿಸ ಬೇಕು ಇದರಿಂದ ರೈತರ ಬದುಕು ಹಸನಾಗಲಿದೆ ಎಂದು ಹೇಳಿದರು.

           ರೈತ ನಾಯಕ ಟಿ ಟಿ ಹಗೇದಾಳ ಮತ್ತು ಸೋಮು ಬಿರಾದಾರ, ಅಖೀಲಗೌಡ ಪಾಟೀಲ,ಮಹಾಂತೇಶ ಗಿಡ್ಡಪ್ಪಗೋಳ,ರವಿ ಗೊಳಸಂಗಿ,ವೀರುಪಾಕ್ಷಿ ಕೋಲಕಾರ ,ಸಿದ್ದು ಗಣಿ, ಕಲ್ಲಪ್ಪ ಗಿಡ್ಡಪ್ಪಗೋಳ, ರಾಮಣ್ಣ ಬಾಟಿ,ಕಲ್ಲು ಬಾಲಗೊಂಡ.ದಾದು ಗಿರಗಾಂವಿ,ಮಲ್ಲು ಗಾಣಿಗೇರ, ಮಂಜುನಾಥ ಸೊನ್ನದ , ಸುರೇಶ ಗಿಡ್ಡಪ್ಪಗೋಳ ಹಾಗೂ ತಾಲ್ಲೂಕಿನ ಹತ್ತಾರು ಹಳ್ಳಿಗಳಿಂದ ಸಾವಿರಾರು ರೈತರು ಭಾಗವಹಿಸಿದ್ದರು.

ಸುದ್ದಿ ಓದಿ