ವಿಜಯಪುರ

ಆತ್ಮವಿಶ್ವಾಸದೊಂದಿಗೆ ಕೌಶಲ್ಯ ಬೆಳೆಸಿಕೊಂಡು ಪರಿಪೂರ್ಣ ಪತ್ರಕರ್ತರಾಗಿ: ಶ್ರೀಕೃಷ್ಣ ಕುಲಕರ್ಣಿ

ಆತ್ಮವಿಶ್ವಾಸದೊಂದಿಗೆ ಕೌಶಲ್ಯ ಬೆಳೆಸಿಕೊಂಡು ಪರಿಪೂರ್ಣ ಪತ್ರಕರ್ತರಾಗಿ: ಶ್ರೀಕೃಷ್ಣ ಕುಲಕರ್ಣಿ

ಲೋಕದರ್ಶನ ವರದಿ 

  ವಿಜಯಪುರ  29: ಪತ್ರಿಕೋದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಆತ್ಮವಿಶ್ವಾಸ, ಸೃಜನಶೀಲತೆ *ಹಾಗೂ ತಂತ್ರಜ್ಞಾನದ ಅರಿವು ಅತ್ಯಗತ್ಯ ಎಂದು ನಿವೃತ್ತ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಕೃಷ್ಣ ಕುಲಕರ್ಣಿ  ಹೇಳಿದರು. 

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಫ್ರೆಶರ್ಸ್‌ ಡೇ ಹಾಗೂ ಮಹಿಳಾ ಮೀಡಿಯಾ ಕ್ಲಬ್ ಉದ್ಘಾಟನಾ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು. 

ಪತ್ರಕರ್ತರಲ್ಲಿ ಆತ್ಮವಿಶ್ವಾಸ ಇರಬೇಕು.

ಕಾರ್ಯನಿರ್ವಹಿಸುವ ಸಂಸ್ಥೆಗಳಲ್ಲಿ ಬದ್ಧತೆಯಿಂದ ಕೆಲಸ ಮಾಡಬೇಕು. ಸಾಮಾನ್ಯ ಜನರಿಗೆ ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿ ಸುದ್ದಿ ನೀಡಬೇಕು. ಪ್ರತಿಭೆಗೆ ಸದಾ ಮನ್ನಣೆ ದೊರೆಯುತ್ತದೆ. ಆದ್ದರಿಂದ ವಿದ್ಯಾರ್ಥಿನಿಯರು ವೃತ್ತಿಯೊಂದಿಗೆ ತಮ್ಮ ಪ್ರವೃತ್ತಿಗಳನ್ನೂ ಬೆಳೆಸಿಕೊಳ್ಳಬೇಕು ಎಂದರು. ಅಷ್ಟೇ ಅಲ್ಲದೇ ವಿದ್ಯಾರ್ಥಿನಿಯರಿಗೆ ವೃತ್ತಿಪರ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಕುರಿತು ಮಾರ್ಗದರ್ಶನ ನೀಡಿದರು. 

ಇದೇ ಸಂದರ್ಭದಲ್ಲಿ ಡಾ. ತಹಮೀನಾ ನಿಗಾರ್ ಸುಲ್ತಾನಾ ಕೋಲಾರ ಮಾತನಾಡಿ, ವಿದ್ಯಾರ್ಥಿನಿಯರು ಆತ್ಮವಿಶ್ವಾಸ ಬೆಳೆಸಿಕೊಳ್ಳುವುದರ ಜೊತೆಗೆ ವಿಭಾಗದಲ್ಲಿರುವ ತಂತ್ರಜ್ಞಾನಗಳನ್ನು ಸಮರ​‍್ಕವಾಗಿ ಕಲಿತು ಉತ್ತಮ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದರು. 

ಡಾ. ಸಂದೀಪ್ ನಾಯಕ್ ಮಾತನಾಡಿ, ವಿದ್ಯಾರ್ಥಿನಿಯರು ಕಲಿಕೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಇಂಟರ್ನೆಟ್ ಯುಗದಲ್ಲಿ ಇತರರನ್ನು ಅವಲಂಬಿಸದೆ ಸ್ವಯಂ ಕಲಿಕೆಯ ಮೂಲಕ ಹೊಸ ತಂತ್ರಜ್ಞಾನಗಳನ್ನು ತಿಳಿದುಕೊಳ್ಳಬೇಕು. ಪ್ರತಿ ಹಂತದಲ್ಲಿಯೂ ಸೃಜನಶೀಲ ಕಲಿಕೆಗೆ ಆದ್ಯತೆ ನೀಡಬೇಕು ಎಂದರು. 


ಸುದ್ದಿ ಓದಿ