ಕಂಪ್ಲಿ

ಡಿ.ಮೌನೇಶ್‌ಗೆ ಯೋಗ ರತ್ನ ಪ್ರಶಸ್ತಿ ಪ್ರಧಾನ

ಡಿ.ಮೌನೇಶ್‌ಗೆ ಯೋಗ ರತ್ನ ಪ್ರಶಸ್ತಿ ಪ್ರಧಾನ

ಲೋಕದರ್ಶನ ವರದಿ 

         ಕಂಪ್ಲಿ 29:  ಬೆಂಗಳೂರಿನಲ್ಲಿ ನಡೆದ ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಸಂಸ್ಥೆಯ ರಾಷ್ಟ್ರೀಯ ಯೋಗ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಂಪ್ಲಿಯ ಪತಂಜಲಿ ಯೋಗ ಸಮಿತಿಯ ತಾಲೂಕು ಪ್ರಭಾರಿ, ಯೋಗ ಪಟು ಡಿ.ಮೌನೇಶ್ ಇವರಿಗೆ ಭಾನುವಾರ ಯೋಗ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

         ವಿಶ್ವಕರ್ಮ ಸಮಾಜ ಪ್ರಧಾನ ಕಾರ್ಯದರ್ಶಿ ಹಾಗೂ ಪತಂಜಲಿ ಯೋಗ ಸಮಿತಿಯ ತಾಲೂಕು ಪ್ರಭಾರಿ, ಯೋಗ ಪಟು ಆಗಿ ಯೋಗದಲ್ಲಿ ಸಾಕಷ್ಟು ಸೇವೆಯನ್ನು ಸಲ್ಲಿಸುತ್ತಾ ಬಂದಿರುವುದನ್ನು ಗುರುತಿಸಿ, ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಸಂಸ್ಥೆಯು ಯೋಗ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ನಂತರ ಪ್ರಶಸ್ತಿ ಸ್ವೀಕರಿಸಿ ಡಿ.ಮೌನೇಶ್ ಮಾತನಾಡಿ,

           ಜೀವನದುದ್ದಕ್ಕೂ ಯೋಗ ಸೇರಿದಂತೆ ನಾನಾ ರಂಗದಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರಲಾಗಿದೆ. ಈ ಸೇವೆಯನ್ನು ಗುರುತಿಸಿ, ನಮಗೆ ಯೋಗ ರತ್ನ ಪ್ರಶಸ್ತಿ ನೀಡಿರುವುದು ಖುಷಿಯ ಜೊತೆಗೆ ಇನ್ನಷ್ಟು ಸೇವಕರಿಗೆ ಇಂತಹ ಪ್ರಶಸ್ತಿಗಳು ಲಭಿಸಲಿ ಎಂದರು.  


ಸುದ್ದಿ ಓದಿ