ಉಪಲೋಕಾಯುಕ್ತ ಬಿ.ವೀರಪ್ಪ ಅವರಿಂದ ಬುಡಾ, ಸ್ಮಾರ್ಟ ಸಿಟಿ ಕಚೇರಿಗೆ ಭೇಟಿ ಪರಿಶೀಲನೆ
ಬೆಳಗಾವಿ.ಅ.29: ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಗುರುವಾರ(ಅ.29)
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಹಾಗೂ ಸ್ಮಾರ್ಟ ಸಿಟಿ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ನೀಡಿ ಸಿಬ್ಬಂದಿಗಳ ಹಾಜರಾತಿ, ನಗದು ವಹಿ, ಚಲನವಲನ ವಹಿಗಳನ್ನು ಮಾಹಿತಿ ಪಡೆದು ಪರಿಶೀಲಿಸಿದ ಅವರು ಪ್ರಾಧಿಕಾರದಿಂದ ಅನುಮತಿಸಲಾದ ಹೊಸ ಲೇ ಔಟ್ ಗಳಲ್ಲಿ ರಸ್ತೆ, ವಿದ್ಯುತ್ ಸಂಪರ್ಕ, ಒಳಚರಂಡಿ ವ್ಯವಸ್ಥೆ ಮಾಡಿಸಿದರ ಮಾಹಿತಿ ಪಡೆದು ಅವುಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲು ಸೂಚಿಸಿದರು.
ಪ್ರಾಧಿಕಾರದಿಂದ ಲಿಸ್ ಗೆ ನೀಡಿದ ಸಿ.ಎ. ಸೈಟಗಳ ಮಾಹಿತಿ ಸೇರಿದಂತೆ ವಿವಿಧ ಕಡತಗಳನ್ನು ಪರಿಶೀಲಿಸಿದರು.
ತದನಂತರ ಸ್ಮಾರ್ಟ ಸಿಟಿ ಕಚೇರಿಗೆ ಭೇಟಿ ನೀಡಿದ ಅವರು ಕಚೇರಿಯ ಸಿಬ್ಬಂದಿಗಳ ಹಾಜರಾತಿ, ಚಲನ ವಲನವಹಿಗಳ ಮಾಹಿತಿ ಪರಿಶೀಲಿಸಿದ ಅವರು ಕಚೇರಿಯ ಪ್ರತಿಯೊಬ್ಬ ಸಿಬ್ಬಂದಿ ನಗದು ವಹಿಗಳಲ್ಲಿ ಬಳಗ್ಗೆ ಹಾಗೂ ಸಾಯಂಕಾಲ ನಮೂದಿಸಬೇಕು.
ಸ್ಮಾರ್ಟ ಸಿ.ಟಿ. ವತಿಯಿಂದ ಕೈಗೊಳ್ಳಲಾದ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಪಡೆದ ಅವರು ತಮ್ಮ ಕಚೇರಿಯ ರಸ್ತೆ ಹಾಗೂ ಆವರಣವನ್ನು ದುರಸ್ತಿ ಪಡಿಸಿಕೊಳ್ಳಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಉಪನಿಬಂಧಕರಾದ ಅರವಿಂದ, ಲೋಕಾಯುಕ್ತ ಎಸ್.ಪಿ. ಪ್ರಸನ್ನ ದೇಸಾಯಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್.ಶಿವಕುಮಾರ್, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಜಿಲ್ಲಾಪಂಚಾಯತ ಯೋಜನಾ ನಿರ್ದೆಶಕ ರವು ಬಂಗಾರಪ್ಪನವರ, ಪಾಲಿಕೆ ಆಯುಕ್ತ ಎಂ.ಕಾರ್ತಿಕ , ಬುಡಾ ಆಯುಕ್ತರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.