ವಿಜಯಪುರ

ನವೆಂಬರ್ 1ರಂದು ಗಂಡಭೇರುಂಡ ರಾಜ್ಯೋತ್ಸವ

ನವೆಂಬರ್ 1ರಂದು ಗಂಡಭೇರುಂಡ ರಾಜ್ಯೋತ್ಸವ

ವಿಜಯಪುರ 31 ;  ರಾಷ್ಟ್ರೀಯ ಸಂಶೋಧನಾ ವೇದಿಕೆ ವಿಜಯಪುರ ಹಾಗೂ ಗಂಡಭೇರುಂಡ ರಾಜ್ಯೋತ್ಸವ ಸಮಿತಿ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಇಂಡಿ ರಸ್ತೆಯ ಪುರಾತನ ಕೋಟೆಯಲ್ಲಿರುವ ಕನ್ನಡ ನಾಡಿನ ರಾಜಮನೆತನ ರಾಷ್ಟ್ರಕೂಟರ ರಾಜ್ಯ ಲಾಂಛನ ಗಂಡಭೇರುಂಡ ಪಕ್ಷಿಯ ಐತಿಹಾಸಿಕ ಉಬ್ಬು ಶಿಲ್ಪದ ಮುಂಭಾಗದಲ್ಲಿ ನವೆಂಬರ್ 1ರಂದು ಬೆಳಿಗ್ಗೆ 8:30 ಗಂಟೆಗೆ ಗಂಡಭೇರುಂಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಸಂಶೋಧನಾ ವೇದಿಕೆಯ ವಿಜಯಪುರ ಜಿಲ್ಲಾಧ್ಯಕ್ಷ ಲಾಯಪ್ಪ ಇಂಗಳೆ, ಗಂಡಭೇರುಂಡ ರಾಜ್ಯೋತ್ಸವ ಸಮಿತಿಯ ಪ್ರಮುಖರಾದ ವಿನೋದ ಖೇಡ, ಜಗದೇವ ಸೂರ್ಯವಂಶಿ, ಬಲಭೀಮ ಸಾಳುಂಕೆ, ಅನಿಲ ಇಕ್ಕಡೆ, ಗುರುಲಿಂಗಪ್ಪಗೌಡ ಪಾಟೀಲ,ಕಲ್ಲಪ್ಪ ಶಿವಶರಣ,ರಂಜಾನ್ ಶೇಖ, ಗಣೇಶ ರಣದೇವಿ, ಚಂದ್ರಶೇಖರ ಹೊಸಮನಿ ವಿನೋದ ಸಾಳುಂಕೆ,ಪ್ರದೀಪ ಚಲವಾದಿ, ಮಹೇಶ ಮುಧೋಳ ಮಹಾದೇವ ಪವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕಲ್ಯಾಣ ಚಾಲುಕ್ಯರು ಮತ್ತು ದೇವಗಿರಿ ಯಾದವರು  ಲಾಂಛನವಾಗಿ ಬಳಸಿರುವ ಗಂಡಭೇರುಂಡವನ್ನು ಕರ್ನಾಟಕ ರಾಜ್ಯ ಸರಕಾರ ಅಧಿಕೃತ ಲಾಂಛನವಾಗಿ ಬಳಸುತ್ತಿದೆ. ಐತಿಹಾಸಿಕ ಮಹತ್ವ ಪಡೆದಿರುವ ಲಾಂಛನದ ಪರಿಸರ ಸ್ವಚ್ಛವಾಗಿಡಲು ಮತ್ತು ಸಂರಕ್ಷಣೆ ಮಾಡುವ ಉದ್ದೇಶದಿಂದ ಆಚರಣೆ ಮಾಡುತ್ತಿರುವ ಗಂಡಭೇರುಂಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಮುಖಂಡರು, ಇತಿಹಾಸ ಸಂಶೋಧಕರು, ಸಾಹಿತಿಗಳು ಮತ್ತು ಕಲಾವಿದರು ಭಾಗವಹಿಸಲಿದ್ದಾರೆ.ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.  


ಸುದ್ದಿ ಓದಿ