ಸಾರ್ವಜನಿಕ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ: ಅಶೋಕ ಮನಗೂಳಿ
ಲೋಕದರ್ಶನ ವರದಿ
ಇಂಡಿ 31: ತಾಲ್ಲೂಕಿನ ತಾಂಬಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಂಬಾ ಗ್ರಾಮದ ಗ್ರಾಮ ಸರ್ಕಾರಿ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಸಿಂದಗಿ ಮತಕ್ಷೇತ್ರದ ಶಾಸಕರಾದ ಅಶೋಕ ಮನಗೂಳಿ ಅವರು ಸಸಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ಮಾತನಾಡಿದ ಶಾಸಕರು ಸಾರ್ವಜನಿಕ ಕೆಲಸಗಳನ್ನು ತ್ವರಿತ ಗತಿಯಲ್ಲಿ ಸಂಬಂಧಿಸಿ ಅಧಿಕಾರಿಗಳು ಕೆಲಸ ಮಾಡಿ ಕೊಡಬೇಕು.
ಪ್ರಜಾಸೇವ ಆಂದೋಲನ ಜನಸ್ಪಂದನ ಕಾರ್ಯಕ್ರಮದಲ್ಲಿ ಬಂದ ಅರ್ಜಿಗಳನ್ನು ಇಪ್ಪತ್ತೊಂದು ದಿನಗಳ ಒಳಗಾಗಿ ಅವರ ಸಮಸ್ಯೆಗಳಿಗೆ ತಕ್ಷಣ ಪರಿಹರಿಸಿ ಅವರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಹೇಳಿದರು. ಪ್ರಜಾಸೇವೆ ಆಂದೋಲನ ಜನಸ್ಪಂದನ ಎಂಬುದು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಆಡಳಿತಾತ್ಮಕವಾಗಿ ಅವುಗಳಿಗೆ ತ್ವರಿತ ಪರಿಹಾರ ಒದಗಿಸಲು ಸರ್ಕಾರ ಅಥವಾ ವಿವಿಧ ಸಾಮಾಜಿಕ ಸಂಸ್ಥೆಗಳು ಹಮ್ಮಿಕೊಳ್ಳುವ ಒಂದು ಮುಖ್ಯವಾದ ಜನಪರ ಕಾರ್ಯಕ್ರಮವಾಗಿದೆ.
ಸಾರ್ವಜನಿಕರು ತಮ್ಮ ಪಡಿತರ ಚೀಟಿ, ಪಿಂಚಣಿ, ಕಂದಾಯ ಇಲಾಖೆಯ ದಾಖಲೆಗಳು, ಮೂಲಸೌಕರ್ಯ (ರಸ್ತೆ, ದೀಪ, ನೀರು) ಸೇರಿದಂತೆ ಹಾಗೂ ಇತರ ದೂರುಗಳನ್ನು ನೇರವಾಗಿ ಶಾಸಕರ ಗಮನಕ್ಕೆ ತಂದರು, ಅರ್ಜಿಗಳನ್ನು ಪರೀಶೀಲಿಸಿ, ಸಂಬಂದ ಪಟ್ಟ ಅಧಿಕಾರಿಗಳ ಮೂಲಕ ಸಾಧ್ಯವಿದ್ದಷ್ಟು ದೂರುಗಳಿಗೆ ಸ್ಥಳದಲ್ಲೇ ಆಡಳಿತಾತ್ಮಕವಾಗಿ ತ್ವರಿತ ಪರಿಹಾರ ಒದಗಿಸಿದರು. ಈ ಸಂದರ್ಭದಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯಡಿಲ್ಲಿ ಅಂಗವಿಕಲರ ಯೋಜನೆಯ ಅಡಿಯಲ್ಲಿ ಹಾಗೂ ವಿಧಾನ ವೇತ ನ ಸೇರಿದಂತೆ ಫಲಾನುಭವಿಗಳಿಗೆ ಮಂಜೂರಾತಿ ಆದೇಶಗಳನ್ನು ನೀಡಿದರು.