ವಿಜಯಪುರ

ಆಲಮೇಲದಲ್ಲಿ ರೈತರು ರಾಜ್ಯ ರಸ್ತೆ ತಡೆದು ಪ್ರತಿಭಟನೆ ಆಲಮೇಲ ಸಂಪೂರ್ಣ ಬಂದ

ಆಲಮೇಲದಲ್ಲಿ  ರೈತರು ರಾಜ್ಯ ರಸ್ತೆ ತಡೆದು  ಪ್ರತಿಭಟನೆ ಆಲಮೇಲ ಸಂಪೂರ್ಣ ಬಂದ
Farmers in Alamela staged a protest by blocking a state highway; Alamela observed a complete shutdow

ಲೋಕದರ್ಶನ ವರದಿ 

         ಆಲಮೇಲ 31 : ಪಟ್ಟಣ ಸೇರಿದಂತೆ ತಾಲೂಕಿನ ವಿವಿದ ಗ್ರಾಮಗಳಲ್ಲಿ ಕಬ್ಬನ ದರ 5.500 ರು ದರ್ ನಿಗದಿ ಮಾಡಿ ಕಬ್ಬಿನ ಕಾರ್ಖನೆ ಪ್ರಾರಂಬಿಸಿ  ಎಂದು ಕಬ್ಬಿನ ಕಿಚ್ಚು ಅಕ್ರೊಶ ವ್ಯಕ್ತಪಡಿಸಿ  

ಸರಕಾರಕ್ಕೆ  ಒತ್ತಾಯಿಸಿ ಜೈ ಜವಾನ್ ಜೈ ಕಿಸನ್ ಎಂದು  ಘೋಷಿತ ಪ್ರತಿಭಟಿಸಿದರು; 

         ಪಟ್ಠಣದಲ್ಲಿ ರೈತರು ಹಲಗಿ ಹಚ್ಚಿ   ಜೈ ಜವನ್ ಘೋಷಣೆ ಮಾಡುತ್ತ ಬಸ್ಸ್‌ ನಿಲ್ದಾಣ ವೃತದಲ್ಲಿ  ಸಾವಿರಾರು ರೈತರು  ವಾಹನಗಳು ಸಂಚರಿಸಲು ಕಡಿವಾಣ ಹಾಕಿ  ರಾಜ್ಯ ಸರಕಾರದ ವಿರುದ್ದ ಘೋಷಣೆ ಕೂಗಿ  ಅಕ್ರೋಶ ವ್ಯಕ್ತಪಡಿಸಿದ ವಿವಿದ ಸಘಟನೆಗಳು ಬಳಿಕ ರೈತರ ಪ್ರತಿಭಟನೆಗೆ ಬೆಂಲಿಸಿದರು;                     ಪಟ್ಟಣದ ವ್ಯಾಪರಸ್ಥರು ಅಂಗಡಿಗಳು ಬಂದ ಮಾಡಿ ರೈತರ  ಪ್ರತಿ ಭಟನೆಯಲ್ಲಿ ಬಾಗವಹಿಸಿದರು   ಬಸ್ಸುಗಳ ವಾಹನಗಳ ಸಂಚಾರ  ಬಂದದಿಂದ ಸಾರ್ವಜನಿಕರು ಪರದಾಡಿದರು  ಕಬ್ಬಿನ ಕಿಚ್ಚು  ಎಲ್ಲಾ ಕಡೆ ಪಸರಿಸಿದು ಸುಡು ಬಿಸಿಲು ಲೆಕ್ಕಸದೆ ರೈತರು ಸಂಪೂರ್ಣ ಬಂದ ಮಾಡಿ  ಪ್ರತಿಭಟಸಿದರು.

             ಆಲಮೇಲದಿಂದ- ದೇವಣಗಾಂವ  ಮಾರ್ಗ ಮದ್ಯದ ಕುರಬತಹಳ್ಳಿಗ್ರಾಮ ಮದನಹಳ್ಳಿ ಗ್ರಾಮದ ರೈತರು ರಾಜ್ಯ ಹೆದ್ದಾರಿ ಬಂದ ಮಾಡಿ  ಕಬ್ಬಿಗೆ 5,500 ದರ ನಿಗದಿ ಮಾಡಲು ಸರಕಾರಕ್ಕೆ ಒತ್ತಾಯಿಸಿ  ಉಗ್ರವಾಗಿ ಸರಕಾರ ಮತ್ತು ಕಾರ್ಖನೆ ವಿರುದ್ದ ಘೋಷಣೆ ಮಾಡಿ ಪ್ರತಿಭಟಿಸಿದರು;  ಕಬ್ಬು ಬೆಳೆಗಾರರ ಅಕ್ರೋಷ ಮುಗಿಲು ಮುಟ್ಟಿತ್ತು;   

       ರೈತ ಮುಖಂಡ ಶಶಿದರ ನಾಯ್ಕೊಡಿ ರಾಜು ಮೇತ್ರಿ  ರಾಚಪ್ಪ ದೇಸಯಿ ದೇವಪ್ಪಗೌಡ ಪಾಟೀಲ ರಾಜು ವಡ್ಡರ  ಖಾದೀರಬಾಷ್ಯ ವಾಲಿಕರ ವಿಜುಗೌಡ ಪಾಟೀಲ  ಅಪ್ಪಾರಾಯ ಕುಲಕರ್ಣಿ ಬಾಬು ಸಾಹುಕರ  ಶ್ರೀಮಂತ ಬಿರಾದಾರ   ಮಹೇಶ ಹೂವಿನಹಳ್ಳಿ ವಿದ್ಯಾದರ ಮಠ ಯಲ್ಲಪ ಜೇರಟಗಿ ಮಹಾಂತೇಶ ಕತ್ತಿ  ಪ್ರಭು ಕ್ಷೇತ್ರಿ  ಯಶವಂತರಾಯ ಗೌಡ ರೂಗಿ ಸೇರಿದಂತೆ ರೈತ ಮುಖಂಡರು ಮಾತನಾಡಿದರು ;

           ಕುರಬತಹಳ್ಳಿ ಕಡಣಿ ಗುಂದಗಿ ನಾಗರಹಳ್ಳಿ ವಿಭೂತಿಹಳ್ಳಿ ರಾಮನಹಳ್ಳಿ ಹೂವಿನಹಳ್ಳಿ  ತಾಲೂಕಿನ ವಿವಿದ ಗ್ರಾಮದ ರೈತರು  ಬಾಗವಹಿಸಿ ಪ್ರತಿಭಟಿಸಿದರು;  ಇಲ್ಲಿನ ಪೋಲಿಸ ರು ಸೂಕ್ತ ಬಂದೊಬಸ್ತ ಏರಿ​‍್ಡಸಿದರು. 


ಸುದ್ದಿ ಓದಿ