ಕಾಗವಾಡ

ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರ; ಮೊಬೈಲ ಬಿಡಿ, ಪುಸ್ತಕ ಓದಿ ಭವಿಷ್ಯ ರೂಪಿಸಿಕೊಳ್ಳಿ: ಅಡಿವೇಶ ಇಟಗಿ ಅಭಿಮತ..!

ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರ; ಮೊಬೈಲ ಬಿಡಿ, ಪುಸ್ತಕ ಓದಿ ಭವಿಷ್ಯ ರೂಪಿಸಿಕೊಳ್ಳಿ: ಅಡಿವೇಶ ಇಟಗಿ ಅಭಿಮತ..!
Children's Personality Development Camp; Adivesha Itagi's advice: "Put aside your mobile phones, rea

ಲೋಕದರ್ಶನ ವರದಿ 

          ಕಾಗವಾಡ 22 : ವಿದ್ಯಾರ್ಥಿಗಳು ಮೊಬೈಲ ವ್ಯಸನದಿಂದ ಮುಕ್ತರಾಗಿ ಪುಸ್ತಕ ಓದಿ, ಶಿಕ್ಷಣ ಹಾಗೂ ಸೃಜನಾತ್ಮಕ ಚಟುವಟಿಕೆಗಳತ್ತ ಗಮನಹರಿಸಿ, ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಅಡಿವೇಶ ಇಟಗಿ ಹೇಳಿದರು. 

             ಅವರು, ಶುಕ್ರವಾರ ದಿ. 20 ರಂದು ಕಾಗವಾಡ ಮತಕ್ಷೇತ್ರದ ಮಲಾಬಾದ ಗ್ರಾಮದ ವಿಮೋಚನಾ ವಸತಿ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಕಾಗವಾಡ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಕ್ಕಳಿಗೆ ವ್ಯಕ್ತಿತ್ವ ವಿಕಸನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

           ಕರ್ನಾಟಕ ಬಾಲವಿಕಾಸ ಅಕಾಡೆಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಸರ್ಕಾರ ತಮ್ಮ ಮನೆ ಮನೆಗೆ ಯೋಜನೆಗಳನ್ನು ತಲುಪಿಸುತ್ತಿದೆ. ತಾವು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. 

              ಮಲಾಬಾದ ವಿಮೋಚನಾ ವಸತಿ ಶಾಲೆಯ ಅಧ್ಯಕ್ಷ ಬಸವಪ್ರಭು ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಿಗೆ ಬಾಲ್ಯದಲ್ಲಿ ತಮ್ಮ ಶಿಕ್ಷಣ ಹೇಗಿರಬೇಕು. ಸ್ಪರ್ದಾತ್ಮಕ ಯುಗದಲ್ಲಿ ಯಾವ ರೀತಿ ವಿದ್ಯಾರ್ಥಿಗಳು ಜೀವನ ರೂಪಿಸಿಕೊಳ್ಳಬೇಕು ಎಂದು ಸ್ಪೂರ್ಥಿದಾಯಕ ನುಡಿಗಳನ್ನು ಹೇಳಿದರು. 

          ಬೆಳಗಾವಿ ಜಿಲ್ಲಾ ಬಾಲವಿಕಾಸ ಅಕಾಡೆಮಿ ಸದಸ್ಯ ದುಂಡಪ್ಪ ಪಾಟೀಲ ಮಾತನಾಡಿ, ಕಾರ್ಯಕ್ರಮದ ಮುಖ್ಯ ಉದ್ದೇಶಗಳನ್ನು ತಿಳಿಸಿದರು. ಮತ್ತು ಸರ್ಕಾರ ಜಾರಿಗೊಳಿಸಿರುವ ಯೋಜನೆಗಳ ಮಾಹಿತಿ ಹಾಗೂ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು. 

               ಈ ವೇಳೆ ಸಿಡಿಪಿಒ ಸಂಜೀವಕುಮಾರ ಸದಲಗಿ, ನಿವೃತ್ತ ಶಿಕ್ಷಕ ರಾಮಣ್ಣ ಗೂಗವಾಡ, ಮುಖಂಡ ಉಮೇಶ ಪಾಟೀಲ, ವಿಮೋಚನಾ ಪ್ರೌಡ ಶಾಲೆ ಮಲಾಬಾದ ಮುಖ್ಯೋಪಾದ್ಯಯ ಬಿ.ಟಿ. ಅವಟಿ, ಸಂಪನ್ಮೂಲ ವ್ಯಕ್ತಿಗಳಾದ ಮಹಾಂತೇಶ ಕುಳ್ಳೊಳ್ಳಿ, ಎಂ.ಎಸ್‌. ಕುಲಕರ್ಣಿ, ಸರಿತಾ ಮಾಳಿ ಹಾಗೂ ಕಛೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 


ಸುದ್ದಿ ಓದಿ