ಬಳ್ಳಾರಿ

ಎಫ್ ಐ ಆರ್ ವಿರೋಧಿಸಿ ಬಿಜೆಪಿ ಪ್ರತಿಭಟನೆ ಪೊಲೀಸರಿಂದ ಬಂದನ

ಎಫ್ ಐ ಆರ್ ವಿರೋಧಿಸಿ ಬಿಜೆಪಿ ಪ್ರತಿಭಟನೆ ಪೊಲೀಸರಿಂದ ಬಂದನ


ಬಳ್ಳಾರಿ. ಅ. 05:  ಎಸ್ ಐ ಆರ್ ಅಕ್ರಮದ ಕುರಿತು ಅರ್ಜಿ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರ ಮೇಲೆ ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿ ನಗರದ ರಾಯಲ್ ಸರ್ಕಲ್ ನಲ್ಲಿ ಇಂದು ಭಾರತೀಯ ಜನತಾ ಪಕ್ಷ ಬಳ್ಳಾರಿ ಜಿಲ್ಲಾ ಘಟಕದ ವತಿಯಿಂದ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು. ಈ ಪ್ರತಿಭಟನೆಯಲ್ಲಿ  ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ನಾಯ್ಡು ಮಾತನಾಡಿ, ಮತದಾರರ ಪರಿಸ್ಕೃತ ಪಟ್ಟಿಯಲ್ಲಿ ಒಂದೇ ಹೆಸರು ಹಲವು ಬಾರಿ ಮುದ್ರಣ ಗೊಂಡಿದ್ದನ್ನು ವಿರೋಧಿಸಿ ನಮ್ಮ ಪಕ್ಷದ ಪಾಲಿಗೆ ಸದಸ್ಯ ಮೋತ್ಕಾರ್ ಶ್ರೀನಿವಾಸ್ ಚುನಾವಣಾ ಅಧಿಕಾರಿಗಳಿಗೆ ಪರೀಶೀಲಿಸುವಂತೆ ಅರ್ಜಿ ಸಲ್ಲಿಸಿದ್ದರು ಇದೇ ದೊಡ್ಡ ಅಪರಾಧವೆಂಬಂತೆ ಅವರ ಮೇಲೆ ನಗರದ ಎರಡು ಪೊಲೀಸ್ ಠಾಣೆಗಳಲ್ಲಿ ಎಫ್ ಐ ಆರ್  ದಾಖಲಿಸಲಾಗಿದೆ ಇದು ಅಕ್ರಮದ ಬಗ್ಗೆ ಅಪಸ್ವರ ಎತ್ತುವುದನ್ನು ತಡೆಯುವುದು ಉದ್ದೇಶವಾಗಿದೆ , ಇದು ರಾಜ್ಯ ಸರ್ಕಾರದ ಪಿತೂರಿ ಎಂದು ಆರೋಪಿಸಿದರು. ಇದನ್ನು ವಿರೋಧಿಸಿ ಇಂದು ನಮ್ಮ ಪಕ್ಷದಿಂದ ಶಾಂತಿಯುತ ಪ್ರತಿಭಟನೆಯನ್ನು ನಡೆಸುವ ಬೇಡಿ ಪೊಲೀಸರು ಅಧಿಕಾರಿಗಳ ಮತ್ತು ಸರ್ಕಾರದ ಮಾತು ಕೇಳಿ ನಮ್ಮನ್ನು ನೂಕು ನುಗ್ಗಲು ಮಾಡಿ ಪಕ್ಷದ ಹಲವರನ್ನು ತಿಳಿಸಲಾಗಿದೆ ಕಾಂಗ್ರೆಸ್ ಸರ್ಕಾರದಲ್ಲಿ ನ್ಯಾಯ ಕೇಳುವುದು ಸಹ ಕಷ್ಟವಾಗಿದೆ, ಇದೊಂದು ಪ್ರತಿಭಟನೆ ಮತ್ತು ಹೋರಾಟವನ್ನು ಹತ್ತಿಕ್ಕುವ ಕುತಂತ್ರವಾಗಿದೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು. ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಕರೆದೊಯ್ಯುವಾಗ ನೂಕು ನುಗ್ಗಲು ಉಂಟಾಗಿ ಕೆಲವರಿಗೆ ತರಚು ಗಾಯಗಳಾಗಿವೆ. ಈ ಪ್ರತಿಭಟನೆಯಲ್ಲಿ  ಹನುಮಂತಪ್ಪ ಗುರುಲಿಂಗನಗೌಡ ಗಣಪಾಲ ಐನಾಥ ರೆಡ್ಡಿ ಅರುಣ ಕಾಮಿನೆನಿ, ಪುಷ್ಪ ಸುನಂದಾ ಹಿರೇಮಠ, ಉಜ್ವಲ ಶ್ರೀಧರ್ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ