ತಾಯಿಯ ಋಣ ಬಹುದೊಡ್ಡದು, ಒಂದು ಜನ್ಮದಲ್ಲಿ ತೀರಿಸಲಾಗದು: ಜಗದ್ಗುರು ಕೊಟ್ಟೂರು ಬಸವಲಿಂಗ ಶ್ರೀಗಳು
ಬಳ್ಳಾರಿ. ಅ. 4 : ಮಠಗಳನ್ನು ನಿರ್ಮಾಣ ಮಾಡಿ ಪ್ರವಚನ ಮಾಡುವ ಉದ್ದೇಶ ಭಕ್ತರಲ್ಲಿ ಸನ್ಮಾರ್ಗ ದಾರಿಯಲ್ಲಿ ನಡೆಯಲಿಕ್ಕೆ, ಮಾನವನಿಗೆ ತನ್ನ ದೇಹ ಬುದ್ಧಿ ಮತ್ತು ಪ್ರಕೃತಿ ನಿಜವಾದ ಸಂಪತ್ತುಗಳಾಗಿವೆ. ಪ್ರಸ್ತುತ ದಿನಮಾನಗಳಲ್ಲಿ ಮನುಷ್ಯರಿಗೆ ಶಾಂತಿ ನೆಮ್ಮದಿ ಸಮಾಧಾನಗಳೇ ಮುಖ್ಯವಾಗಿ ನಮ್ಮ ಹೃದಯದಲ್ಲಿ ಸಮಾಧಾನವಿರಬೇಕು, ಮತ್ತು ಪ್ರಕೃತಿ ಮಾತೆಗೆ ಸಮನಾಗಿರುವ ತಾಯಿಯ ಋಣ ದೊಡ್ಡದು ಅದೊಂದು ವ್ಯಕ್ತಿತ್ವ. ತಾಯಿ ಋಣ ಎಷ್ಟು ಕೊಟ್ಟರು ತೀರಿಸಲಾಗದಂತ ಬಹುದೊಡ್ಡ ತಾಯಿತನ ತಾಯಿಯನ್ನು ಗೌರವಿಸಬೇಕು ತಾಯ್ತನವನ್ನು ಹೆಚ್ಚಿಸಬೇಕು ಅಂತ ಮಹತ್ಕಾರ್ಯವೇ ಈ ಉಡಿ ತುಂಬುತಚಿ ಕಾರ್ಯಕ್ರಮವಾಗಿದೆ ಎಂದು ಜಗದ್ಗುರು ಕೊಟ್ಟೂರು ಶ್ರೀಗಳು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು. ನಗರದ ಕೊಟ್ಟೂರು ಸ್ವಾಮಿ ಮಠದಲ್ಲಿ ಶ್ರೀ ಮಠದಿಂದ ಹಮ್ಮಿಕೊಳ್ಳಲಾಗಿದ್ದ 1111 ತಾಯಂದಿರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ತಮ್ಮ ಆಶೀರ್ವಚನದಲ್ಲಿ ಕೊಟ್ಟೂರು ಶ್ರೀ ಬಸವಲಿಂಗ ಪ್ರಭು ಸ್ವಾಮಿಗಳು ತಿಳಿಸುತ್ತಾ ಇಂದಿನ ದಿನಮಾನಗಳಲ್ಲಿ ಮನೆಯ ಹಿರಿಯರು ಮಕ್ಕಳಿಗೆ ಸಂಬಂಧಗಳ ಬೆಲೆ ತಿಳಿಸಬೇಕಾದ ಅಗತ್ಯವಿದೆ ತಂದೆಯ ತಾಯಿ ಅಜ್ಜಿ ಅಜ್ಜ ಎನ್ನುವ ಸಂಸ್ಕಾರ ಸನ್ಮಾರ್ಗಗಳಲ್ಲಿ ನಡೆಯಲು ಮನೆಯ ಹಿರಿಯರ ಜವಾಬ್ದಾರಿ ಬಹುದೊಡ್ಡದಾಗಿದೆ. ಎಂದು ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಶ್ರೀ ನಿರಂಜನ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿಸಿ, ಆಶೀರ್ವಚನ ನೀಡಿದರು. ಬಳ್ಳಾರಿ ನಗರದ ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠ ಆವರಣದಲ್ಲಿ ನಡೆದ ಎರಡು ದಿನದ ಕಾರ್ಯಕ್ರಮಗಳಾಗಿರುವ ಪೂಜಾ ಹಾನಗಲ್ ಕುಮಾರ ಶಿವಯೋಗಿಗಳ 109ನೇ ಹಾಗೂ ಪೂಜ್ಯ ಜಗದ್ಗುರು ಡಾಕ್ಟರ್ ಸಂಗನಬಸವ ಮಹಾಸ್ವಾಮಿಗಳ 88ನೇ ಜಯಂತೋತ್ಸವದ ಅಂಗವಾಗಿ ಪ್ರವಚನ ಮಂಗಳ ಮಹೋತ್ಸವ. ಮತ್ತು ಸೋಮಸಮುದ್ರದಿಂದ ಶ್ರೀಧರ ಗಡ್ಡೆ ಮತ್ತು ಬಳ್ಳಾರಿಯ ಶ್ರೀಮಠದವರಿಗೆ ಪಾದಯಾತ್ರೆ. ಶ್ರೀ ಜಗದ್ಗುರು ಕೊಟ್ಟೂರೇಶ್ವರ ರಥೋತ್ಸವ. ಜೊತೆಗೆ 1111 ಮುತ್ತೈದೆಯರಿಗೆ ಉಡಿತುಂಬುವ ಸಮಾರಂಭ ಪೂಜ್ಯರ ಭಾವಚಿತ್ರ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಎರಡನೇ ದಿನದ ಕಾರ್ಯಕ್ರಮದ ತಾಯಿಯ ಋಣ ಉಪನ್ಯಾಸವನ್ನು ದ್ರಾಕ್ಷಾಯಿಣಿ ಜಿ. ಮಠದ ಗಂಗಾವತಿ ಇವರು ಉಪನ್ಯಾಸ ನೀಡಿ ನಮ್ಮ ಕಾಯಕವೇ ಕೈಲಾಸ ಸತ್ಯ ಶುದ್ಧ ಕೆಲಸಗಳೇ ಕೈಲಾಸವಾಗಬೇಕು. ಸಮಾಜದಲ್ಲಿ ಅನ್ನದಾಸೋಹ ಜ್ಞಾನ ದಾಸೋಹ ಕಾಯಕ ನಮ್ಮಲ್ಲಿರಬೇಕು. ವೇದಿಕೆಯಲ್ಲಿ ಕಂಬರಚೇಡು ಕಲ್ಯಾಣ ಸ್ವಾಮಿ, ಮಾಜಿ ನಗರ ಶಾಸಕ ಜಿ ಸೋಮಶೇಖರ ರೆಡ್ಡಿ, ದರೂರು, ಸೋಮಸಮುದ್ರ, ಕುರುಗೋಡು, ಶ್ರೀಧರ ಗಡ್ಡೆ, ಬೂದುಗುಪ್ಪ, ಶಾಖಾ ಮಠದ ಪೂಜ್ಯರು ಪಾಲ್ಗೊಂಡಿದ್ದರು.ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಯನ್ನು ಶ್ರೀ ಮಠದ ಶರಣಯ್ಯ ಸ್ವಾಮಿ ಮಾತನಾಡಿದರು. ನಿರೂಪಣೆಯನ್ನು ಭುವನಶ್ರೀ ನೆರವೇರಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಗೊಗ್ಗ ಚೆನ್ನಬಸವರಾಜ ಹೊಸಪೇಟೆ. ಪಲ್ಲೆದ ಪಂಪಾಪತಿ, ಡಾ. ಕೆ. ಎಂ .ಮಹೇಶ್ವರ ಸ್ವಾಮಿ, ಶ್ರೀ ಡಾ. ಎಸ್. ಜೆ .ವಿ. ಮಹಿಪಾಲ್, ಎಚ್. ಎಮ್. ಗುರುಸಿದ್ಧ ಸ್ವಾಮಿ, ಮಸೀದಿಪುರ ಸಿದ್ದರಾಮನಗೌಡ, ಎಸ್. ಮಲ್ಲನಗೌಡ, ಡಾ. ಎಸ್ ಉಮಾಮಹೇಶ್ವರಿ, ಡಾ ರೇಣುಕಾ ಮಂಜುನಾಥ, ಎಸ್. ಸುರೇಖಾ ಮಲ್ಲನಗೌಡ, ಬಿಕೆ ಅನ್ನಪೂರ್ಣಮ್ಮ, ಡಾ. ಭಾಗ್ಯಲಕ್ಷ್ಮಿ, ಪಲ್ಲೆದ್ ಮೈತ್ರಿ, ಸಿದ್ದರಾಮ ಕಲ್ಮಠ, ಎಸ್. ಗುರುಲಿಂಗನಗೌಡ, ಬಳ್ಳಾರಿ ಸೋಮಸಮುದ್ರ ಶ್ರೀಧರ ಗಡ್ಡೆ, ಶಿರವಾರ, ಕಪ್ಗಲ್ಲು, ಕೋಳೂರು, ಮದಿರೆ, ಕುರುಗೋಡು, ಬೂದುಗುಪ್ಪ, ದರೂರು, ಸಿರಿಗೇರಿ, ಹಾಗೂ ಎಲ್ಲಾ ಗ್ರಾಮಗಳ ಗುರುಹಿರಿಯರು ಮತ್ತು ಸಮಸ್ತ ಸದ್ಭಕ್ತರು ಸಕಲ ಸದ್ಭಕ್ತರು ಪಾಲ್ಗೊಂಡಿದ್ದರು.ಕಾರ್ಯಕ್ರಮದಲ್ಲಿ ಸಂಗೀತ ಬಳಗ ಕಲಾವಿದರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀ ಮಠದಿಂದ ಸಕಲ ಭಕ್ತರಿಗೆ ಪ್ರಸಾದ ವ್ಯವಸ್ಥೆ ನೆರವೇರಿಸಲಾಯಿತು.