ಬಳ್ಳಾರಿ

ರೋಗವನ್ನು ಆರಂಭ ಹಂತದಲ್ಲಿ ಪತ್ತೆ ಹಚ್ಚಿದರೆ ಗುಣಮುಖವಾಗುವ ಸಾಧ್ಯತೆ ಹೆಚ್ಚಿರಲಿದೆ : ಜಿ ಸೋಮಶೇಖರ ರೆಡ್ಡಿ

ರೋಗವನ್ನು ಆರಂಭ ಹಂತದಲ್ಲಿ ಪತ್ತೆ ಹಚ್ಚಿದರೆ ಗುಣಮುಖವಾಗುವ ಸಾಧ್ಯತೆ ಹೆಚ್ಚಿರಲಿದೆ  :  ಜಿ ಸೋಮಶೇಖರ ರೆಡ್ಡಿ

ಬಳ್ಳಾರಿ, ಅ.4: ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಹೆಚ್ಚಿನ ಕಾಳಜಿ ವಹಿಸಬೇಕು ಯಾವುದೇ ರೋಗವನ್ನು ಆರಂಭಿಕ ಹಂತದಲ್ಲಿಯೇ  ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಅನೇಕ ಗಂಭೀರ ಕಾಯಿಲೆಗಳನ್ನು  ತಡೆಗಟ್ಟಬಹುದು.ಸಾರ್ವಜನಿಕರಿಗೆ ಉಚಿತವಾಗಿ ತಜ್ಞ ವೈದ್ಯರ ಸೇವೆ ದೊರೆಯುವ ಇಂತಹ ಶಿಬಿರಗಳು ಜನರಿಗೆ ಉಪಯುಕ್ತವಾಗಿವೆ. ಶಿಬಿರದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಮಾಜಿ ನಗರ ಕ್ಷೇತ್ರ ಶಾಸಕ ಜಿ ಸೋಮಶೇಖರ ರೆಡ್ಡಿ  ಕರೆ ನೀಡಿದರು.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸೇವಾ ಮೇರಾ ಯೋಗದಾನ ಹಾಗೂ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಸಾರ್ವಜನಿಕರ ಆರೋಗ್ಯದ ಕಾಳಜಿಯಿಂದ ನಗರದ 13ನೇ ವಾರ್ಡ್ನ ಮಿಲ್ಲರ​‍್ೇಟೆಯ ರೂಪನಗುಡಿ ನಾರ​‍್ಪ ಬೀದಿಯಲ್ಲಿ  ಭಾನುವಾರ ಉಚಿತ ಸಮಗ್ರ ಆರೋಗ್ಯ ತಪಾಸಣಾ ಶಿಬಿರವನ್ನು  ಉದ್ಘಾಟಿಸಿ ಅವರು ಮಾತನಾಡಿದರು.ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ, ಶಸ್ತ್ರಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀರೋಗ, ಮಕ್ಕಳ ಆರೋಗ್ಯ, ದಂತ, ಕಣ್ಣು, ಮೂಳೆ ಮತ್ತು ಸಂಧಿ, ನೋವು ನಿರ್ವಹಣೆ ಹಾಗೂ ಸೋನಾಲಜಿ ಸೇರಿದಂತೆ ವಿವಿಧ ವಿಭಾಗಗಳ ತಜ್ಞ ವೈದ್ಯರು ಭಾಗವಹಿಸಿ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿದರು. ವೈದ್ಯಕೀಯ ತಪಾಸಣೆಯ ಬಳಿಕ ಅಗತ್ಯವಿರುವವರಿಗೆ ಸೂಕ್ತ ಸಲಹೆ ಹಾಗೂ ಚಿಕಿತ್ಸಾ ಮಾರ್ಗದರ್ಶನ ನೀಡಲಾಯಿತು.ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ವೈದ್ಯಕೀಯ ಸಲಹೆಯೊಂದಿಗೆ ಅಗತ್ಯವಿರುವವರಿಗೆ ಉಚಿತ ಓಷಧಿಗಳನ್ನು ವಿತರಿಸಲಾಯಿತು. ವೈದ್ಯಕೀಯವಾಗಿ ಅಗತ್ಯವಿರುವ ತುರ್ತು ಶಸ್ತ್ರಚಿಕಿತ್ಸೆಗಳಿಗೆ ಅರ್ಹತೆ ಹಾಗೂ ವೈದ್ಯರ ನಿರ್ಧಾರದ ಆಧಾರದ ಮೇಲೆ ಉಚಿತ ಶಸ್ತ್ರಚಿಕಿತ್ಸಾ ನೆರವು ಒದಗಿಸುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು. ಈ ವೈದ್ಯಕೀಯ ಶಿಬಿರವನ್ನು  ವೈದ್ಯರಾದ ಡಾ. ಸುಂದರ್, ಡಾ. ಅರುಣಾ ಕಾಮಿನೆನಿ, ಡಾ. ರೇಣುಕಾ ಮಂಜುನಾಥ್, ಡಾ. ಜಗದೀಶ್, ಡಾ. ಅಭಿಷೇಕ್, ಡಾ. ಶ್ರೀಕಾಂತ್, ಡಾ. ಅಶ್ವಿನಿ, ಡಾ. ರಮೇಶ್, ಡಾ. ಸಂಗೀತಾ, ಡಾ. ರಾಘವೇಂದ್ರ, ಡಾ. ಪ್ರಣಿತಾ ಹಾಗೂ ಡಾ. ಸಂಗೀತಾ ಕಟ್ಟಿಮನಿ ಸೇರಿದಂತೆ ವಿವಿಧ ವಿಭಾಗಗಳ ತಜ್ಞ ವೈದ್ಯರು  ನಡೆಸಿಕೊಟ್ಟರು. ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಿಲ್ಲರ​‍್ೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಾರ್ವಜನಿಕರು  ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಸಾರ್ವಜನಿಕರ ಆರೋಗ್ಯದ ಕಾಳಜಿಯಿಂದ ಇಂತಹ ಉಚಿತ ಆರೋಗ್ಯ ಸೇವಾ ಕಾರ್ಯಕ್ರಮಗಳನ್ನು ಮುಂದುವರಿಸಲಾಗುವುದು ಎಂದು ಆಯೋಜಕ ಹುಂಡೇಕರ್ ರಾಜೇಶ್  ತಿಳಿಸಿದರು.ಈ ಕಾರ್ಯಕ್ರಮದಲ್ಲಿ ವಾರ್ಡಿನ ಮುಖಂಡರಾದ, ವೆಂಕಟೇಶ, ಮಂಜುನಾಥ್, ಬಸವರಾಜ್ ಕುಂಬಿ, ರುದ್ರೇಶ್ , ಕಿರಣ್ , ಮನೋಜ್ , ವಿನಯ್ , ಅಭಿಷೇಕ್, ರಾಮಕೃಷ್ಣ, ಮೋಹನ್,ಸ್ವಾಮಿ ನಾಯಕ್, ಗಾದಿಲಿಂಗ, ದುರ್ಗಪ್ಪ, ರವಿ ಅಪ್ಪು, ರಾಮಾಂಜನಿ, ರಮಾಲಿ ನಾಯಕ್, ಎಲ್ಲಪ್ಪ, ಫೈಜಾನ್, ಪವನ್ ಕುಮಾರ್, ವೀರೇಶ್, ದಸ್ತಗಿರಿ, ಬಸವರಾಜ್, ಮಿಥುನ್ ಕುಮಾರ್, ಕೇದಾರನಾಥ್, ಗೋವಿಂದ ನಾಯಕ್, ರಾಮಕೃಷ್ಣ, ಶೇಖರ್, ಇಮಾಮ್ ಹುಸೇನ್, ಮಬ್ಬು, ಸುರೇಶ್ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು, ವೈದ್ಯಕೀಯ ಸಿಬ್ಬಂದಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. 


ಸುದ್ದಿ ಓದಿ