ಜೆಡಿಎಸ್ ಪಟ್ಟಿ ಪರೀಶೀಲನೆಗೆ ಅರ್ಜಿ, ಹೆಸರು ಡೀಲೀಟ್ ಮಾಡಲು ಅಲ್ಲ: ಶ್ರೀನಿವಾಸ್ ಮೊತ್ಕರ್
ಬಳ್ಳಾರಿ. ಅ. 04 : ನಗರದ ತಾಳೂರು ರಸ್ತೆಯ ನನ್ನ ವಾರರ್ಡ್ ಮತ್ತು ನಗರದಲ್ಲಿನ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಅನುಮಾನವಿರುವ ಮತದಾರರ ಕುರಿತು ಪರೀಶೀಲನೆ ಮಾಡಲು ನನ್ನ ಲೆಟರ್ ಪ್ಯಾಡಿನಲ್ಲಿ ಅರ್ಜಿ ಸಲ್ಲಿಸಿದ್ದೇನೆ ಹೊರತು ಅವರ ಹೆಸರುಗಳನ್ನು ಮತದಾರ ಪಟ್ಟಿಯಿಂದ ರದ್ದುಗೊಳಿಸಲು ಅಲ್ಲ ಎಂದು ಪಾಲಿಕೆ ಸದಸ್ಯ ಶ್ರೀನಿವಾಸ್ ಮೋತ್ಕರ್ ಸ್ಪಷ್ಟಪಡಿಸಿದರು. ನಗರದ ವಾಜಪೇಯಿ ಬಡಾವಣೆಯಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಭಾನುವಾರದಂದು ನಡೆಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೇ ಹೆಸರು ಹಲವು ಬಾರಿ ಮರು ಸೇರೆ್ಡಗೊಂಡಿರುವುದರಿಂದ ಅನುಮಾನಗೊಂಡು ಪರೀಶೀಲನೆ ಮಾಡಲು ಬಿ ಎಲ್ ಎ ಆಗಿ ಅರ್ಜಿ ಸಲ್ಲಿಸಿದ್ದೇನೆ ಹೊರತು, ಯಾವುದೇ ಸಮುದಾಯದ ಜನಾಂಗದ ಹೆಸರುಗಳನ್ನು ಮತದಾರ ಪಟ್ಟಿಯಿಂದ ರದ್ದು ಪಡಿಸಲು ಒತ್ತಾಯಿಸಿಲ್ಲ ಆದರೂ ಸಹ ರಾಜಕೀಯ ದ್ವೇಷದಿಂದ ನಗರ ಶಾಸಕರು ಮತ್ತು ಇತರರು ನನ್ನ ಮೇಲೆ ನಗರದ ಬ್ರೂಸ್ ಪೇಟೆ ಮತ್ತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿದ್ದಾರೆ ಇದು ರಾಜಕೀಯ ಪ್ರೇರಿತವಾಗಿದೆ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದರು. ಈಗಾಗಲೇ ಈ ಚುನಾವಣೆಯ ಕುರಿತು ಜಿಲ್ಲೆಯ ಎಲ್ಲಾ ನಾಯಕರು ಪಕ್ಷದ ಪದಾಧಿಕಾರಿಗಳು ಒಂದು ಸುತ್ತಿನ ಪ್ರಚಾರವನ್ನು ಮುಗಿಸಿದ್ದಾರೆ ನಾಮಪತ್ರ ಸಲ್ಲಿಸಿದ ತಕ್ಷಣ ಜೆಡಿಎಸ್ ನಾಯಕರ ಒಡಗೂಡಿ ಚುನಾವಣಾ ಕೆಲಸವನ್ನು ಮಾಡಲಾಗುವುದು ಎಂದು ಹೇಳಿದರು. ಮಾಜಿ ಶಾಸಕ ಸೋಮಶೇಖರ ರೆಡ್ಡಿ ಮಾತನಾಡಿ, ಅನುಮಾನ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದರಿಂದ ನಮ್ಮ ಪಾಲಿಕೆ ಸದಸ್ಯ ಶ್ರೀನಿವಾಸ್ ಅವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ, ಮುಂದೆ ಆ ಠಾಣೆಯ ಮುಂದೆ ಪಕ್ಷದ ವತಿಯಿಂದ ಜಿಡಿ ವಿರೋಧಿಸಿ ಪ್ರತಿಭಟನೆಯನ್ನು ನಡೆಸಲಾಗುವುದು ಎಂದರು.