ಆರೋಗ್ಯ ರಕ್ಷಣೆ ಎಲ್ಲರ ಆದ್ಯ ಕರ್ತವ್ಯ: ಡಾ.ಕಾರ್ಚಿ
ತಾಳಿಕೋಟಿ 04 : ಆರೋಗ್ಯ ರಕ್ಷಣೆ ಎಲ್ಲರ ಕರ್ತವ್ಯವಾಗಿದ್ದು ಸುಖಿ ಜೀವನಕ್ಕೆ ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳಬೇಕು ಎಂದು ಹಿರಿಯ ವೈದ್ಯ ಡಾ.ವಿ.ಎಸ್.ಕಾರ್ಚಿ ಹೇಳಿದರು. ಅವರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದವರಿಗಾಗಿ ಸ್ಥಳೀಯ ರೋಟರಿ ಕ್ಲಬ್ ವತಿಯಿಂದ ಆಯೋಜಿಸಿದ್ದ ವಿಶೇಷ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಶನಿವಾರ ಮಾತನಾಡಿದರು. ಕಾನೂನು ಪಾಲನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಗಲು-ರಾತ್ರಿ ಎನ್ನದೇ ಶ್ರಮಿಸುವ ಪೊಲೀಸ್ ಸಿಬ್ಬಂದಿ ಹಾಗೂಅವರ ಪರಿವಾರದವರೂ ಆರೋಗ್ಯದಿಂದ ಇರಬೇಕು ಎಂಬ ಕಳಕಳಿಯಿಂದ ರೋಟರಿ ಸಂಸ್ಥೆಯು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದೆ ಎಂದರು. ರೋಟರಿ ಅಧ್ಯಕ್ಷ ಘನಶ್ಯಾಮ ಚವಾಣ, ಮಾತನಾಡಿ, ರೋಟರಿ ವತಿಯಿಂದ ವರ್ಷವೀಡೀ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಶಿಬಿರದಲ್ಲಿ 60ಕ್ಕು ಹೆಚ್ಚು ಪೊಲೀಸ್ ಸಿಬ್ಬ್ಮದಿ ಹಾಗೂ ಅವರ ಪರಿವಾರದವರು ಭಾಗವಹಿಸಿದ್ದರು.ಶಿಬಿರದಲ್ಲಿ, ಹಿರಿಯ ವೈದ್ಯ ಡಾ.ವಿ.ಎಸ್.ಕಾರ್ಚಿ, ಮಕ್ಕಳ ವೈದ್ಯ ಡಾ.ಆನಂದ ಭಟ್ , ಡಾ.ಎ.ಎ.ನಾಲಬಂದ, , ಪ್ರಸೂತಿ ತಜ್ಞೆಯರಾದ ಡಾ.ಗಂಗಾಂಬಿಕಾ ಪಾಟೀಲ, ಡಾ.ಶಾಂತಾ ಇಮ್ರಾಪುರ ದಂತ ವೈದ್ಯ ಡಾ.ಜಾಕೀರ ಅವಟಿ, ಮೊದಲಾದವರು ಭಾಗವಹಿಸಿ ಉಚಿತ ತಪಾಸಣೆ ನಡೆಸಿದರು. ರೋಟರಿಯನ್ ಅಶೋಕ ಬಳಗಾನೂರ ಸ್ವಾಗತಿಸಿ ನಿರ್ವಹಿಸಿದರು.