ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವ ಸಮಾರಂಭವರದಿ- ಎಂ.ಬಿ. ಘಸ್ತಿ
ಸಂಕೇಶ್ವರ 19: ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವದ ಪ್ರಯುಕ್ತವಾಗಿ ಇಂದು ಪೂಜಾ ಅಭಿಷೇಕ ಕಾರ್ಯಕ್ರಮಗಳು ಶಿವಾಜಿ ಸ್ಮಾರಕದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಹೂಮಾಲೆ ಹಾಕಿ ಛತ್ರಪತಿ ಶಿವಾಜಿ ಮಹಾರಾಜರ ಸೇವಾ ಸಂಘ ಸಂಕೇಶ್ವರ ಇವರು ಪೂಜಾ ಅಭೀಷೇಕ ಕಾರ್ಯಕ್ರಮವನ್ನು ನೆರವೇರಿಸಿದರು. ಈ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ರಾಜೇಂದ್ರ ಪಾಟೀಲ, ಸುನೀಲ ಅಣ್ಣಾಸಾಹೇಬ ಪರ್ವತರಾವ, ಅಮರ ನಲವಡೆ, ಅಪ್ಪಾ ಮೋರೆ, ಸುಭಾಷ ಕಾಸರಕರ, ಬಂಡು ಹತನೂರೆ, ವಿಕ್ರಮ ಕರನಿಂಗ, ದೀಲೀಪ ಹೊಸಮನಿ, ಜಯಪ್ರಕಾಶ ಕರಜಗಿ, ಪ್ರಮೋದ ಜಾಧವ, ಲಕ್ಷ್ಮಣ ಶೇಂಡೆ, ಜಯಪ್ರಕಾಶ ಸಾವಂತ, ಕುಮಾರ ಬಸ್ತವಾಡಿ, ದೀಪಕ ಭಿಸೇ, ಅವಿನಾಶ ನಲವಡೆ, ಬಂಡು ಸೂರ್ಯವಂಶಿ ಹಾಗೂ ಮೊದಲಾದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು, ನಾಳೆ ದಿ: 20 ರಂದು ಶಿವಾಜಿ ಸ್ಮಾರಕದಲ್ಲಿ ದೇಹದಾರ್ಢ್ಯ ಸ್ಪರ್ಧೆ ನಡೆಯುವುದು ಈ ಸ್ಪರ್ಧೆಯಲ್ಲಿ ಬೆಳಗಾವಿ ಮತ್ತು ಮಹಾರಾಷ್ಟ್ರದ ಕೊಲ್ಹಾಪೂರ ನಗರದ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ, ಈ ಸ್ಪರ್ಧೆಯನ್ನು ಕರ್ನಾಟಕ ಅಸೋಶಿಯೇಶನ ದೇಹದಾರ್ಢ್ಯ ಸಂಘದವರು ಏರಿ್ಡಸಿದ್ದಾರೆ.