ಇಂಡಿಯಲ್ಲಿ ಚೆನ್ನಮ್ಮ ಪ್ರತಿಮೆ ಸ್ಥಾಪನೆಗೆ ಜನರ ಒತ್ತಾಯ
ಲೋಕದರ್ಶನ ವರದಿ
ಇಂಡಿ 22 : ಭವಿಷ್ಯದಲ್ಲಿ ಜಿಲ್ಲಾ ಕೇಂದ್ರವಾಗಬೇಕಿರುವ ಇಂಡಿ ನಗರದಲ್ಲಿ ಬಹುದಿನಗಳಿಂದ ವೀರರಾಣಿ ಕಿತ್ತೂರು ಚೆನ್ನಮ್ಮ ಪ್ರತಿಮೆ ಅನಾವರಣ ಆಗಿದೆ ನೆನೆಗುದಿಗೆ ಬಿದ್ದಿರುವ ನೂರೆಂಟು ಅನುಮಾನಗಳಿಗೆ ಕಾರಣವಾಗಿದೆ.
ಹೌದು ಕೆಲವು ವರ್ಷಗಳ ಹಿಂದೆಯೇ ಇಂಡಿ ನಗರದ ಹೃದಯ ಭಾಗದಲ್ಲಿರುವ ಮಿನಿ ವಿಧಾನಸೌಧದ ಆವರಣದಲ್ಲಿ ವೀರ ರಾಣಿ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಅದನ್ನು ಮತ್ತೆ ತಾಲೂಕು ಆಡಳಿತ ವತಿಯಿಂದ ಮತ್ತೆ ಆ ಪ್ರತಿಮೆಯನ್ನು ತೆರವುಗೊಳಿಸಲಾಯಿತು.
ಆ ಸಂದರ್ಭದಲ್ಲಿ ಆ ಸಮಾಜದ ಮುಖಂಡರಿಂದ ಕಿತ್ತೂರು ರಾಣಿ ಚೆನ್ನಮ್ಮ ಅವರ ಅಭಿಮಾನಿಗಳಿಂದ ಪ್ರತಿಭಟನೆ ಹಾಗೂ ಹೋರಾಟ ಮಾಡಲಾಯಿತು. ಆದರೂ ಕೂಡಾ ಇನ್ನೂ ವರಿಗೆ ಇಂಡಿ ನಗರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಅನಾವರಣ ಆಗಿದೆ
ಇರುವುದು ವಿಪರ್ಯಾಸವೇ ಸರಿ.ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಸಂಗ್ರಾಮದಲ್ಲಿ "ನನ್ನ ನೆಲ, ನನ್ನ ಜನ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ" ಎಂದು ಸಿಡಿದೆದ್ದ ಕರುನಾಡಿನ ಹೆಮ್ಮೆಯ ವೀರನಾರಿ ಕಿತ್ತೂರು ರಾಣಿ ಚೆನ್ನಮ್ಮ. ಕನ್ನಡಿಗರ ಸ್ವಾಭಿಮಾನ ಹಾಗೂ ಸಾಹಸದ ಸಂಕೇತವಾಗಿರುವ ಈ ಧೀರ ವನಿತೆಯ ಸ್ಮರಣಾರ್ಥ ವಿಜಯಪುರ ಜಿಲ್ಲೆಯ ಪ್ರಮುಖ ತಾಲ್ಲೂಕು ಕೇಂದ್ರವಾದ ಇಂಡಿ ನಗರದಲ್ಲಿ ಭವ್ಯ ವೃತ್ತ ಹಾಗೂ ಪ್ರತಿಮೆ ನಿರ್ಮಿಸಬೇಕೆಂಬುದು ದಶಕಗಳ ಬೇಡಿಕೆ.
ಆದರೆ, ಇಂದಿಗೂ ಇಂಡಿ ಪಟ್ಟಣದಲ್ಲಿ ರಾಣಿ ಚೆನ್ನಮ್ಮನವರ ಅಧಿಕೃತ ಪ್ರತಿಮೆ ತಲೆಎತ್ತದೆ ಇರುವುದು ಕೇವಲ ಒಂದು ನಿರ್ಮಾಣದ ವಿಳಂಬವಲ್ಲ, ಬದಲಾಗಿ ಸ್ಥಳೀಯ ಆಡಳಿತದ ಇಚ್ಛಾಶಕ್ತಿಯ ಕೊರತೆ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಸರ್ಕಾರದ ಘೋಷಣೆಗಳು ಮತ್ತು ಶಂಕುಸ್ಥಾಪನೆಗಳ ಕಾಗದದ ಹಡಗಿನಲ್ಲಿ ಚೆನ್ನಮ್ಮನವರ ಪ್ರತಿಮೆ ಇನ್ನೂ ನಡುನೀರಲ್ಲೇ ಉಳಿದಿರುವುದೇಕೆ ಎಂಬ ಪ್ರಶ್ನೆ ಇಂದು ಪ್ರತಿಯೊಬ್ಬ ಇಂಡಿಯ ಕನ್ನಡಿಗನ ಮನದಲ್ಲೂ ಮೂಡಿದೆ.