ಇಂಡಿ

ಇಂಡಿಯಲ್ಲಿ ಮಧ್ವಾಚಾರ್ಯರ ಜಯಂತಿ ಆಚರಣೆ

ಇಂಡಿಯಲ್ಲಿ ಮಧ್ವಾಚಾರ್ಯರ ಜಯಂತಿ ಆಚರಣೆ


ಲೋಕದರ್ಶನ ವರದಿ 

ಇಂಡಿ 21: ಜಗದ್ಗುರು ಮಧ್ವಾಚಾರ್ಯರ ಜಯಂತಿಯನ್ನು ಇಂಡಿ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಜಗದ್ಗುರು ಮಧ್ವಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ವಿಶೇಷ ಪೂಜೆ ಸಲ್ಲಿಸಿ ಅರ್ಥಪೂರ್ಣವಾಗಿ  ಆಚರಿಸಲಾಯಿತು. ಭಾರತೀಯ ದಾರ್ಶನಿಕ ಮತ್ತು ಆಧ್ಯಾತ್ಮಿಕ ಪರಂಪರೆಯಲ್ಲಿ ಅತ್ಯಂತ ಮಹತ್ವದ ದಿನವಾಗಿದೆ.

ವೈಷ್ಣವ ತತ್ತ್ವಶಾಸ್ತ್ರದ ಪ್ರಮುಖ ಸ್ತಂಭಗಳಲ್ಲಿ ಒಂದಾದ ದ್ವೈತ ಸಿದ್ಧಾಂತ (ತತ್ವವಾದ)ವನ್ನು ಜಗತ್ತಿಗೆ ನೀಡಿದ ಮಹಾನ್ ದಾರ್ಶನಿಕರು   ಮಧ್ವಾಚಾರ್ಯರು ಕ್ರಿ.ಶ. 13 ನೇ ಶತಮಾನದಲ್ಲಿ (ಸುಮಾರು 1238 ರಲ್ಲಿ) ಉಡುಪಿ ಸಮೀಪದ ಪಾಕಜೆ (ಪೇಜಾವರ) ಎಂಬಲ್ಲಿ ಜನಿಸಿದರು. ಇವರ ತಂದೆ ಮಧ್ಯಮಗೇಹ ಭಟ್ಟ ಮತ್ತು ತಾಯಿ ವೇದವತಿ. ಇವರಿಗೆ ನಾಮಕರಣದ ಸಂದರ್ಭದಲ್ಲಿ ’ವಾಸುದೇವ’ ಎಂದು ಹೆಸರಿಡಲಾಗಿತ್ತು.

ನಂತರದ ದಿನಗಳಲ್ಲಿ ಆಧ್ಯಾತ್ಮಿಕ ಸಾಧನೆ ಮತ್ತು ಸನ್ಯಾಸ ಸ್ವೀಕರಿಸಿದಾಗ ಇವರಿಗೆ ’ಪೂರ್ಣಪ್ರಜ್ಞ’ ಹಾಗೂ ’ಆನಂದತೀರ್ಥ’ ಎಂಬ ನಾಮಧೇಯಗಳು ಬಂದವು. ಇವರ ತತ್ವಪ್ರಚಾರದ ಶಕ್ತಿಯಿಂದ ಇವರನ್ನು’ ಮಧ್ವಾಚಾರ್ಯ’ರೆಂದು ಕರೆಯಲಾಯಿತು. ಈ ಸಂದರ್ಭದಲ್ಲಿ  ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಬ್ರಾಹ್ಮಣ ಸಮಾಜದ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ