ಅ. 24 ರಿಂದ ಗುರ್ಲಾಪೂರದಲ್ಲಿ ರೈತರ ಹೋರಾಟ ಪ್ರಾರಂಭ-ಶಶಿಕಾಂತ ಗುರೂಜಿ
ಲೋಕದರ್ಶನ ವರದಿ
ಗುರ್ಲಾಪೂರ 22 : ಕಬ್ಬಿನ ಬೆಲೆ ನಿಗದಿ ಹಾಗೂ ಸಕ್ಕರೆ ಕಾರ್ಖಾನೆಗಳ ಹಂಗಾಮು ಆರಂಭದ ಕುರಿತು ಚರ್ಚಿಸಲು ಗುರುವಾರ ಗುರ್ಲಾಪೂರದ ಪ್ರವಾಸಿ ಮಂದಿರದಲ್ಲಿ ರಾಜ್ಯ ರೈತ ಸಂಘದ ಮತ್ತ ಹಸೀರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ, ಗೌರಾಧ್ಯಕ್ಷ ಶಶಿಕಾಂತ ಗುರೂಜಿ ನೇತೃತ್ವದಲ್ಲಿ ಪೂರ್ವ ಭಾವಿ ಸಭೆಜರುಗಿತು
ಶಶಿಕಾಂತ ಗುರೂಜಿ ಮಾತನಾಡಿ, ಅ.26 ರಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರುಕರೆದಿರುವ ಸಭೆಗಿಂತ ಮುಂಚೆ ನಮ್ಮ ಹೋರಾಟಜೀವಂತ ಇರಬೇಕು. ಆ ಕಾರಣಕ್ಕೆ ಗುರ್ಲಾಪೂರ ಕ್ರಾಸದಲ್ಲಿ ಅ.23 ರಾತ್ರಿ ಪೆಂಡಾಲ ಹಾಕಲಾಗುವದು. ಅ.24 ರಂದು 50ಸಾವಿರ ಜನ, 25ರಂದು ಸುಮಾರು4-5ಲಕ್ಷ ಜನ, ಅ.26ರಂದು ಸುಮಾರು 7-8 ಲಕ್ಷಜನರೈತರು ಭಾಗಿಯಾಗುವ ನೀರೀಕ್ಷೆಇದೆ.
ಅ.26ರಂದು ನಡೆಯುವ ಸಭೆಗೆಚೂನಪ್ಪ ಪೂಜೇರಿ ನೇತೃತ್ವದಲ್ಲಿ 30-50ಜನ ರೈತರು ಹೋಗುವರು. ಆ ಸಭೆಯಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ಪ್ರತಿಟನ್‌ಗೆ ರೂ. 4,500/ಬಿಲ್ಲ ಘೋಷಣೆ ಮಾಡಬೇಕು. ಮುಖ್ಯಮಂತ್ರಿಗಳು ಎಸ್‌ಎಪಿ ಜಾರಿಗೆತಂದು ಪ್ರತಿಟನ್‌ಗೆ ರೂ. 1000/ ಕ್ಕಿಂತ ಹೆಚ್ಚಿಗೆ ಪ್ರೋತ್ಸಾಹಧನ ಕೋಡಬೇಕು. ಈ ಸಭೆಯಲ್ಲಿ ರೈತರ ಬೇಡಿಕೆಗಳ ಕುರಿತು ವಫಲವಾದಲ್ಲಿ. ಗುರ್ಲಾಪೂರಕ್ರಾಸ್‌ದಲ್ಲಿ ಹೋರಾಟ ನಿರಂತರವಾಗಿರುವದು.26 ರಿಂದಕರ್ನಾಟಕ ಸಂಪೂರ್ಣ ಬಂದ್‌ಗೆಕರೆಕೊಡಲಾಗುವದು.
ರಾಜ್ಯರೈತ ಸಂಘದ ಮತ್ತ ಹಸೀರು ಸೇನೆ ರಾಜ್ಯಾಧ್ಯಕ್ಷಚೂನಪ್ಪ ಪೂಜೇರಿ, ಗೌರಾಧ್ಯಕ್ಷ ಶಶಿಕಾಂತ ಗುರೂಜಿ ನೇತೃತ್ವದ ಬಣ ಎಂದೂಜಾತಿ, ಧರ್ಮ, ರಾಜಕೀಯ ಮಾಡುವುದಿಲ್ಲ. ಟಿಕೆ ಮಾಡುವವರು ಮಾಡಲಿ, ನಮ್ಮದೇನು ಅಭ್ಯಂತರವಿಲ್ಲ. ನಮ್ಮದು ಎನೇ ಇದ್ದರು ರೈತ ಬಂಧುಗಳ ಹಿತರಕ್ಷಣೆ ಮಾಡುವುದಾಗಿದೆ ಎಂದರು.
ರಾಜ್ಯರೈತ ಸಂಘದ ಮತ್ತ ಹಸೀರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಮಾತನಾಡಿ, ನ.26ಕ್ಕೆ ಎಮ್‌ಎಸ್‌ಪಿ ಕುರಿತುಕೇಂದ್ರ ಸರಕಾರದ ನಿರ್ಧಾರದ ನಂತರ ಮುಂದಿನ ಚರ್ಚೆ ಮಾಡಲಾಗುವದು. ಸ್ವಾಮಿನಾಥನ ಆಯೋಗದ ಜಾರಿಗಾಗಿ ಮುಂದಿನ 2027 ಅಕ್ಟೊಬರ್ 2 ಗಾಂಧಿ ಜಯಂತಿಯಂದು ಮಹಾರಾಷ್ಟ್ರದ ರಾಜು ಶೆಟ್ಟಿ ಸೇರಿದಂತೆ ವಿವಿಧ ರಾಜ್ಯಗಳ ಮುಖಂಡರು ಒಂದು ಜನರನ್ನು ಒಗ್ಗಟ್ಟಾಗಿ ಹೋರಾಟ ನಡೆಸಲಾಗುವದು ಎಂದರು.
ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ರೈತ ಮುಖಂಡರು ಹೋರಾಟದ ರೂಪರೇಶೆಗಳ ಕುರಿತು ಮಾತನಾಡಿದರು.