KBMPS ಶಾಲೆಯಲ್ಲಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಣೆ
ಇಂಡಿ 23: ಇಲ್ಲಿನ KBMPS ಶಾಲೆಯಲ್ಲಿ ವೀರ ವನಿತೆ ಕಿತ್ತೂರು ರಾಣಿ ಚನ್ನಮ್ಮ ಅವರ ಜಯಂತಿಯನ್ನು ಗೌರವಪೂರ್ವಕವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಪ್ರಭಾರ ಮುಖ್ಯ ಗುರುಗಳಾದ ಎಸ್. ಜಿ. ಜೋತಗೊಂಡ ಅವರು ವಿದ್ಯಾರ್ಥಿಗಳಿಗೆ ಕಿತ್ತೂರು ರಾಣಿ ಚನ್ನಮ್ಮ ಅವರ ಜೀವನ, ಸಾಧನೆ, ಧೈರ್ಯ, ಸಾಹಸ ಹಾಗೂ ಬ್ರಿಟಿಷರ ವಿರುದ್ಧ ನಡೆಸಿದ ವೀರೋಚಿತ ಹೋರಾಟದ ಕುರಿತು ಮಾಹಿತಿ ನೀಡಿದರು. ರಾಣಿ ಚನ್ನಮ್ಮ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ತೋರಿದ ಧೈರ್ಯ, ದೇಶಪ್ರೇಮ ಮತ್ತು ತ್ಯಾಗದ ಗುಣಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎಸ್. ಬಿ. ಕಲ್ಲೋಳಿ, ಎಸ್. ಡಿ. ಪಾಟೀಲ್, ಎಸ್. ಎಸ್. ಬಿರಾದಾರ್, ಎಸ್. ಬಿ. ವಡ್ಡರ್ ಹಾಗೂ ಎಸ್. ಎನ್. ಕೋಳೆಕರ ಉಪಸ್ಥಿತರಿದ್ದರು.