ಇಂಡಿ

ಕೃಷ್ಣಾ ಉಪಕಾಲುವೆ ಕೂಡಲೇ ನೀರು ಹರಿಸಲು ರೈತರ ಮನವಿ

ಕೃಷ್ಣಾ ಉಪಕಾಲುವೆ  ಕೂಡಲೇ ನೀರು ಹರಿಸಲು ರೈತರ ಮನವಿ

 ಇಂಡಿ  24: ಕೃಷ್ಣಾ ಮುಖ್ಯ ಕಾಲುವೆಯ ಉಪಕಾಲುವೆ ಕೂಡಲೇ ನೀರು ಹರಿಸುವಂತೆ ಆಗ್ರಹಿಸಿ, ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲರ ನೇತೃತ್ವದಲ್ಲಿ ನೂರಾರು ರೈತರು ಇಂಡಿ ತಹಶೀಲ್ದಾರ್ ಕಚೇರಿಯ ಎಸ್‌. ಡಿ.ವಡೆಯರ್ ಮೇಡಂಗೆ ಮನವಿ ಸಲ್ಲಿಸಿದರು.ಉಪಕಾಲುವೆ 23 ಸಾತಪೂರ ಮಾರ್ಗದಿಂದ ಬಳಗಾರ ಎಲ್‌.ಟಿ. ಮಾರ್ಗವಾಗಿ ಹಾದು ಹೋಗುತ್ತದೆ. ಈ ಕಾಲುವೆಗೆ ನೀರು ಹರಿಯದ ಕಾರಣ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಜನರು ಮತ್ತು ಜಾನುವಾರುಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 

ಆಲಮಟ್ಟಿ ಅಣೆಕಟ್ಟು ಸಂಪೂರ್ಣ ಭರ್ತಿಯಾಗಿದ್ದರೂ ನಮ್ಮ ಭಾಗದ ಜನರು ನೀರಿಗಾಗಿ ಪರದಾಡುವಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು, ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ರೈತರು ಮನವಿ ಮಾಡಿದರು.ಈ ಸಂದರ್ಭದಲ್ಲಿ ಮಾಜಿ ಪುರಸಭಾ ಸದಸ್ಯ ಸಿದ್ದು ಡಂಗಾ, ಶಿವಾನಂದ ಅಂಗಡಿ, ನಿಂಗಪ್ಪ ಗುಡ್ಲ, ನಾರಾಯಣ ರಾಠೋಡ, ಗಂಗಪ್ಪ ಗುಡ್ಲ, ದಾನಪ್ಪ ಲಿಗಾಡೆ, ಅರ್ಜುನ್ ಚೌವ್ಹಾಣ್, ಸುಭಾಷ ರಾಠೋಡ, ಅದೃಶಪ್ಪ ವಾಲಿ, ಕಾಂತು ಜಾದವ್, ವಿಶ್ವನಾಥ ಕಟ್ಟಿಮನಿ, ಶಾಂತಪ್ಪ ಹದರಿ, ರಮೇಶ್ ರಾಠೋಡ, ಬಸಸಿದ್ಧ ಪೂಜಾರಿ, ಬಸವರಾಜ ತೇಲಸಂಗ, ಕೃಷ್ಣಾ ಗುಡ್ಲ, ಪಂಡಿತ ಜಾದವ್, ಗುರ​‍್ಪ ಕುಂಬಾರ, ಶಿವಪ್ಪ ಹದರಿ, ಅನೀಲ ಜಾದವ್, ರವಿ ಕೆಂಗಾರ, ಸಂಜು ಬಿಲಕರ ಹಾಗೂ ರಮೇಶ ದಿಕ್ಸಂಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ