ಬೆಳಗಾವಿ

ಇಂಚಲದ ಡಾ.ಶಿವಾನಂದ ಭಾರತಿ ಶ್ರೀಗಳಿಗೆ ಸದ್ಭಕ್ತರಿಂದ ಭಕ್ತಿಯ ತುಲಾಭಾರ. ಜಾನಪದ ಕಲಾಮೇಳ

ಇಂಚಲದ ಡಾ.ಶಿವಾನಂದ ಭಾರತಿ ಶ್ರೀಗಳಿಗೆ ಸದ್ಭಕ್ತರಿಂದ ಭಕ್ತಿಯ ತುಲಾಭಾರ. ಜಾನಪದ ಕಲಾಮೇಳ
A 'Tulabhara' (weighing ceremony) offered with devotion by followers to Dr. Shivananda Bharati Sri o

ಹಾರೂಗೇರಿ 24 : ದೇಹ ಬಿಟ್ಟ ಮೇಲೂ ಹೆಸರಿದ್ದರೆ ಮಾತ್ರ ಅದು ಬದುಕು. ಹುಟ್ಟಿದರೆ ಸಾವಿಲ್ಲದಂತೆ ಬದುಕಬೇಕು. ನಾನು, ನನ್ನದು ಎಂಬುದನ್ನು ಸೋಲಿಸಬೇಕು. ಎಲ್ಲವೂ ಭಗವಂತನದು ಎಂದುಕೊಳ್ಳಬೇಕೆಂದು ಬೀದರ ಚಿದಂಬರಾಶ್ರಮದ  ಡಾ.ಶಿವಕುಮಾರ ಮಹಾಸ್ವಾಮಿಗಳು ಹೇಳಿದರು. ಇಲ್ಲಿನ  ಚನ್ನವೃಷಭೇಂದ್ರ ದೇವರಕೊಂಡಜ್ಜನವರ ಲೀಲಾಮಠದಲ್ಲಿ ನಡೆಯುತ್ತಿರುವ 43ನೇ ವೇದಾಂತ ಪರಿಷತ್ ಜಾತ್ರಾಮಹೋತ್ಸವದ 3ನೇ ದಿನವಾದ ಶನಿವಾರ ಆಶೀರ್ವಚನ ನೀಡಿದ ಅವರು ಬದುಕು ಬಹಳ ಬೆಲೆಯುಳ್ಳದ್ದು. ತಿಳಿ, ಅರಿ, ವಿಚಾರ, ಭಾವನೆ, ಬುದ್ಧಿ ಮನುಷ್ಯನಲ್ಲಿರಬೇಕು. ನನ್ನದಲ್ಲವೆಂಬುದು ಶಾಂತಿ, ಸುಖ, ಸಂತೋಷದ ಮಾರ್ಗವಾಗಿದೆ. ಇಲ್ಲಿ ನಮ್ಮದೆನೂ ಇಲ್ಲ, ಜಗತ್ತಿನ ಮಾಲೀಕರೂ ನಾವಲ್ಲ, ಭಗವಂತನಿದ್ದಾನೆ ಎಂದರು. 

  ಪರಮಾನಂದವಾಡಿಯ  ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ ಆಶೀರ್ವಚನ ನೀಡುತ್ತ ಭಕ್ತಿಗೆ ಭಯವಿಲ್ಲ. ಭಕ್ತಿಯ ಭಾವವೇ ಮುಕ್ತಿ. ಪೂಜೆ, ಪುನಸ್ಕಾರಗಳಿಗಿಂತ ಮಾತು, ನಡವಳಿಕೆಯಿಂದ ಅಂತರಂಗವನ್ನು ಪರಿವರ್ತಿಸಿಕೊಳ್ಳಬೇಕೆಂದರು.  ದಿವ್ಯ ಸಾನಿಧ್ಯ ವಹಿಸಿದ್ದ ಸದ್ಗುರು  ಡಾ.ಶಿವಾನಂದ ಭಾರತಿ ಮಹಾಸ್ವಾಮೀಜಿ ಆಶೀರ್ವಚನ ನೀಡುತ್ತ ಹುಟ್ಟು ಸಾವಿನ ನಡುವಿನ ಪರೋಪಕಾರ, ಧರ್ಮಸೇವೆ ಶಾಶ್ವತವಾಗಿ ಉಳಿಯುತ್ತದೆ. ಪರಹಿತವನ್ನು ಕಾಪಾಡುವ, ಮನಸ್ಸಿನಲ್ಲಿ ಶುದ್ಧ ಭಕ್ತಿ, ಭಾವನೆ, ಸತ್ಯ, ವಿನಯತೆ ಇರುವವರಿಗೆ ಭಗವಂತ ಒಲಿಯುತ್ತಾನೆ. ಆಗ ಬದುಕು ಬೆಳಗುತ್ತದೆ ಎಂದರು.  ಹಂಪಿ ಹೇಮಕೂಟದ  ವಿದ್ಯಾನಂದ ಭಾರತಿ ಸ್ವಾಮೀಜಿ, ಮಾತೋಶ್ರೀ ಅನುಸೂಯಾ ತಾಯಿ,  ಸಚ್ಚಿದಾನಂದ ಸ್ವಾಮೀಜಿ, ಮಾತೋಶ್ರೀ ನೀಲಮ್ಮ ತಾಯಿ,  ಶಿವಾನಂದ ಸ್ವಾಮೀಜಿ,  ನಿಂಗಾನಂದ ಸ್ವಾಮೀಜಿ, ಹುಮಾಯುನ ಇಬ್ರಾಹಿಂ ಸಾಹೇಬರು,  ಮಲ್ಲೇಶ್ವರ ಶರಣರು, ಬಿ.ಎಂ.ಮುಜಾವರ ಸಾಹೇಬರು ಆಶೀರ್ವಚನ ನೀಡಿದರು.  ಸದ್ಭಕ್ತರಾದ ಮಲ್ಲಪ್ಪ ರಾಮತೀರ್ಥ, ಗಜಪ್ಪ ದುಂಡಗಿ, ಮೈಸೂರಿನ ಜಯಶ್ರೀ ಖಿಲಾಲಿ, ಸಂತೋಷ ಗಸ್ತಿ, ಅಪ್ಪಾಸಾಬ ತಮದಡ್ಡಿ ಹಾಗೂ ಸಂಜೀವ ಗಸ್ತಿ ಡಾ.ಶಿವಾನಂದ ಭಾರತಿ ಶ್ರೀಗಳಿಗೆ ಭಕ್ತಿಯ ತುಲಾಭಾರ ನೆರವೇರಿಸಿದರು. ಮಾಜಿ ಶಾಸಕ ಬಿ.ಸಿ.ಸರಿಕರ, ವಿವೇಕರಾವ ಪಾಟೀಲ, ಡಿ.ಸಿ.ಸದಲಗಿ, ಎನ್‌.ಎಸ್‌.ಚೌಗಲಾ, ಚನ್ನಬಸಯ್ಯ ಮಠಪತಿ, ಬಿಇಒ ಬಸವರಾಜಪ್ಪ ಆರ್‌., ಜಿಲ್ಲಾ ನ್ಯಾಯಾಧೀಶ ವಿದ್ಯಾಧರ ಶಿರಹಟ್ಟಿ, ವಿಶ್ವನಾಥ ಬಂತಿ, ಶ್ರೀಕಾಂತ ಸದಲಗಿ, ಎಸ್‌.ಎ.ದಟವಾಡ, ಈರನಗೌಡ ಪಾಟೀಲ, ಶಿವಗೊಂಡ ಧರ್ಮಟ್ಟಿ, ವಿಠ್ಠಲರಾವ ಬಂತಿ, ಬಾಬು ಪರಮಗೌಡರ, ಲಾಲಸಾಬ ಜಮಾದಾರ, ಜಿನ್ನಪ್ಪ ಸುಬ್ಬಣ್ಣವರ, ರಾಜು ಕರ್ಣವಾಡಿ, ರಾಘವೇಂದ್ರ ದೇಶಪಾಂಡೆ, ಮಲ್ಲಿಕಾರ್ಜುನ ಮಠಪತಿ, ಸುಭಾಸ ಸಂಗನಗೌಡರ ಹಾಗೂ ಮೊದಲಾದ ಸದ್ಭಕ್ತರು ಉಪಸ್ಥಿತರಿದ್ದರು.  ಶ್ರೀಮಠದ ಕಾರ್ಯದರ್ಶಿ ಅಪ್ಪಾಸಾಬ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿ, ಮಂಗಲಗೀತೆ ಹಾಡಿದರು. 


ಸುದ್ದಿ ಓದಿ