ಚಿಂತಕರ ಚಾವಡಿಗೆ ಚಿಂತಕರನ್ನು ಆಯ್ಕೆ ಮಾಡಲು ಅತಿ ಹೆಚ್ಚು ಮತದಾನ ಮಾಡಿದ ಹಾವೇರಿ ಜಿಲ್ಲೆಯ ಪ್ರಜ್ಞಾವಂತರಿಗೆ ಧನ್ಯವಾದ ಹೇಳಿದ ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ
ರಾಣೇಬೆನ್ನೂರು 24 : ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನ 23 ರ ಶುಕ್ರವಾರ ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಗಳು ಸೇರಿದಂತೆ ಸುಮಾರು 4 ಜಿಲ್ಲೆಗಳಲ್ಲಿ ಅತ್ಯಂತ ಬಿರುಸಿನಿಂದ ಜರುಗಿತು. ಕ್ಷೇತ್ರಾದ್ಯಂತ ಒಟ್ಟು 97,400 ಮತದಾರರಿದ್ದು, ಈ ಪೈಕಿ 70,994 ಪ್ರಜ್ಞಾವಂತ ಪದವೀಧರ ಮತದಾರರು ತಾವು ಹಕ್ಕನ್ನು ಚಲಾಯಿಸುವ ಮುಖಾಂತರ ಶೇ. 78.71 ರಷ್ಟು ಅತಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುವ ನಿಜವಾದ ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯಕ್ಕೆ ಹತ್ತಿರವಾಗಿರುವುದು ಅದರಲ್ಲೂ ನಮ್ಮ ಹಾವೇರಿ ಜಿಲ್ಲೆಯಲ್ಲಿ ಶೇ. 78.71 ರಷ್ಟು ಅಧಿ ಪ್ರಮಾಣದಲ್ಲಿ ಮತದಾನ ಮಾಡಿ ಇಡೀ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿಯೇ ಅತೀ ಹೆಚ್ಚು ಪ್ರಜ್ಞಾವಂತರು ಎನ್ನುವುದನ್ನು ಸಾಬೀತುಪಡಿಸಿಸದ್ದು ಆ ಮೂಲಕ ಹಾವೇರಿ ಜಿಲ್ಲೆಗೆ ಉತ್ತಮ ಹೆಸರನ್ನು ತಂದುಕೊಟ್ಟ ಜಿಲ್ಲೆಯ ಪ್ರಜ್ಞಾವಂತ ಪದವೀಧರ ಮತದಾರರಿಗೆ ರೈತ ಮುಖಂಡ, ಪ್ರಗತಿಪರ ಚಿಂತಕ ರವೀಂದ್ರಗೌಡ ಎಫ್. ಪಾಟೀಲ ಧನ್ಯವಾದ ಹೇಳಿದ್ದಾರೆ.
ನಿನ್ನೆ ಸಂಜೆ 4 ಗಂಟೆಯ ನಂತರ ಮತದಾನ ಮುಗಿದ ಮೇಲೆ ತಾಲೂಕಿನ ಹಲಗೇರಿ ಮತದಾನ ಕೇಂದ್ರದ ಹತ್ತಿರ ಮತ ಜಮಾಯಿಸಿದ ಮತದಾರರನ್ನು ಮತ್ತು ಮುಖಂಡರನ್ನುದ್ದೇಶಿಸಿ ಮಾತನಾಡಿದ ಅವರು ಎಂದು ನೂರಕ್ಕೆ ನೂರರಷ್ಟು ಮತದಾನ ಆಗುತ್ತದೆಯೋ ಅಂದು ಮಾತ್ರ ನಿಜವಾದ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದಂತೆ ಪ್ರಜಾಪ್ರಭುತ್ವದ ಆಶಯವೇ ಆದಾಗಿದ್ದು ಆ ವ್ಯವಸ್ಥೆ ಜಾರಿಗೆ ಬರಬೇಕಾದರೆ ಮತದಾರರು ಪ್ರಜ್ಞಾವಂತರಾಗಬೇಕೆಂದ ಅವರು ವಿಧಾನ ಪರಿಷತ್ತಿಗೆ ಇನ್ನೊಂದು ಹೆಸರೆ ಬುದ್ದ್ದಿವಂತರ, ವಿಚಾರವಂತರ ಕ್ಷೇತ್ರ ಹೊಸ ಹೊಸ ವಿಚಾರಗಳನ್ನು ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ಚರ್ಚಿಸಿ ಸರಕಾರಕ್ಕೆ ಶಿಪಾರಸ್ಸು ಮಾಡುವ ವಿಧಾನಪರಿಷತ್ ಚಿಂತಕರ ಚಾವಡಿ ಎಂದೇ ಹೆಸರಾಗಿದೆ.
ಈ ಸಂದರ್ಭದಲ್ಲಿ ಕೆಎಂಎಫ್ ಹಾವೇರಿ ಒಕ್ಕೂಟದ ಅಧ್ಯಕ್ಷರಾದ ಮಂಜನಗೌಡ ಪಾಟೀಲ, ಯಲ್ಲಪ್ಪರಡ್ಡಿ ರಡ್ಡೇರ, ಸೋಮಣ್ಣ ಮಾಳಗಿ, ಶಿದ್ದಪ್ಪ ಕನ್ನಪ್ಪಳವರ, ಶಿವಾನಂದ ಕನ್ನಪ್ಪಳವರ, ಕರೇಗೌಡ ಬಾಗೂರು, ಕರಬಸಪ್ಪ ಕೂಲೇರ, ಶಿವಪುತ್ರ್ಪ ಮಲ್ಲಾಡದ, ಸಣ್ಣತಮ್ಮಪ್ಪ ಬಾರ್ಕಿ, ಶೇಖಪ್ಪ ಬಾರ್ಕಿ, ಬಸಪ್ಪ ಆಲದಕಟ್ಟಿ, ಗಣೇಶ ದೇವರಮನಿ, ಪಿ.ಎಸ್. ಸಾಂತನವರ, ಸುರೇಶ ಬಾನುವಳ್ಳಿ, ಮಳ್ಳಪ್ಪ ನಿಂಗಜ್ಜನವರ, ಮಂಜಯ್ಯ ಬಾವಡಿ, ರಂಗಪ್ಪ ಆಡಿನವರ, ಭರಮಣ್ಣ ಕೊರಕಲಿ, ಹನುಮಂತಪ್ಪ ಬಾಲದಹಳ್ಳಿ, ರಾಜು ದೊಡ್ಡಮನಿ, ಆರಿ್ಡ. ಹೊಂಬರಡಿ, ತಿಮ್ಮರಡ್ಡಿ ಜಂಗಂಡೇರ, ಕಾಂತೇಶ ಬಣಕಾರ, ರಮೇಶರಡ್ಡಿ ಗೋಡಿಹಾಳ ಶೇಖಪ್ಪ ಬತ್ತಿಕೊಪ್ಪ ಇನ್ನು ಮುಂತಾದವರು ಉಪಸ್ಥಿತರಿದ್ದರು.