ಬೆಳಗಾವಿ

ರನ್ನ ಬೆಳಗಲಿಯಲ್ಲಿ ಕರೆಮ್ಮಾದೇವಿ ಜಾತ್ರಾ ಮಹೋತ್ಸವ ;ಧರ್ಮದ ಹಾದಿಯಲ್ಲಿ ಬದುಕನ್ನು ರೂಪಿಸಿಕೊಳ್ಳಿ: ಮಹಾಲಿಂಗಪ್ಪ ಗುಂಜಿಗಾವಿ

ರನ್ನ ಬೆಳಗಲಿಯಲ್ಲಿ ಕರೆಮ್ಮಾದೇವಿ ಜಾತ್ರಾ ಮಹೋತ್ಸವ ;ಧರ್ಮದ ಹಾದಿಯಲ್ಲಿ ಬದುಕನ್ನು ರೂಪಿಸಿಕೊಳ್ಳಿ: ಮಹಾಲಿಂಗಪ್ಪ ಗುಂಜಿಗಾವಿ
Karemmadevi Jatra Mahotsava at Ranna Belagali: Shape your life along the path of righteousness — Mah

ರನ್ನಬೆಳಗಲಿ 24 : ಪಟ್ಟಣದ ಸದಾಶಿವ ನಗರದ ಭಜಂತ್ರಿ ಗಲ್ಲಿಯಲ್ಲಿರುವ ಕರೆಮ್ಮಾದೇವಿ ದೇವಸ್ಥಾನದ ಆವರಣದಲ್ಲಿ ಪ್ರಥಮ ಬಾರಿಗೆ ಶ್ರೀದೇವಿ ಜಾತ್ರಾ ಮಹೋತ್ಸವ ಶುಕ್ರವಾರ ಭಕ್ತಿಭಾವದಿಂದ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಸೇನಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಗುಂಜಿಗಾವಿ ಮಾತನಾಡಿ, ಯುವ ಸಮುದಾಯ ಧರ್ಮದ ಹಾದಿಯಲ್ಲಿ ಬದುಕನ್ನು ರೂಪಿಸಿಕೊಳ್ಳಬೇಕು. ಉತ್ತಮ ಮೌಲ್ಯಗಳನ್ನು ಬೆಳೆಸಿಕೊಂಡು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಹೊರಹೊಮ್ಮಬೇಕು. ದುಶ್ಚಟಗಳಿಂದ ದೂರವಿದ್ದು, ಸಮಾಜದ ಏಳಿಗೆಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು. ಮುಖಂಡ ಪಂಡಿತ ಪೂಜಾರಿ ಮಾತನಾಡಿ, ಪ್ರಥಮ ಬಾರಿಗೆ ಆಯೋಜಿಸಿರುವ ಜಾತ್ರಾ ಮಹೋತ್ಸವವು ಪ್ರತಿ ವರ್ಷ ನಿರಂತರವಾಗಿ ನಡೆಯುವಂತಾಗಲಿ. ಜಾತ್ರೆಗಳಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಕಾರ್ಯವೂ ನಡೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು. ಸಮಾಜ ಸೇವಕ ಜಾಪರ್ ಗದ್ಯಾಳ ಮಾತನಾಡಿ, ಸೈನಿಕರು ಮತ್ತು ರೈತರನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಸೈನ್ಯಕ್ಕೆ ಸೇರಲು ಬಯಸುವ ಯುವಕರಿಗೆ ಉಚಿತವಾಗಿ ದೈಹಿಕ ಸಾಮರ್ಥ್ಯ ಪರೀಕ್ಷೆಯ ತರಬೇತಿ ನೀಡಲಾಗುತ್ತಿದ್ದು, ಯುವಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಹಸಿದವರಿಗೆ ಅನ್ನ ನೀಡುವುದು ಪುಣ್ಯದ ಕಾರ್ಯವಾಗಿದ್ದು, ದಾನಿಗಳ ಸಹಕಾರದೊಂದಿಗೆ ಈ ಸೇವಾ ಕಾರ್ಯವನ್ನು ಮುಂದುವರಿಸಿಕೊಂಡು ಬರುತ್ತಿದ್ದೇನೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ರಾಜಕುಮಾರ ಕಾಳೆ, ಪಟ್ಟಣ ಪಂಚಾಯಿತಿ ಸದಸ್ಯರಾದ ಪ್ರವೀಣ ಪಾಟೀಲ, ನೀಲಕಂಠ ಸೈದಾಪುರ, ಮುತ್ತಪ್ಪ ನಾಯಕ, ಪತ್ರಕರ್ತ ರಾಘವೇಂದ್ರ ನೀಲಣ್ಣವರ, ಸೈನಿಕರಾದ ಪರಮಾನಂದ ಕೌಜಲಗಿ ಹಾಗೂ ಪ್ರಕಾಶ ಕ್ವಾನ್ಯಾಗೋಳ ಸೇರಿದಂತೆ ಸ್ಥಳೀಯರಾದ ತಿಮ್ಮಣ್ಣ ಪಾಟೀಲ, ಕೃಷ್ಣಾ ಕಡಪಟ್ಟಿ, ಲಕ್ಕಪ್ಪ ಸ. ಭಜಂತ್ರಿ, ರಾಘವೇಂದ್ರ ಭಜಂತ್ರಿ, ಲಕ್ಕಪ್ಪ ಕ. ಭಜಂತ್ರಿ, ಪರಶು ಭಜಂತ್ರಿ, ರಾಜು ಭಜಂತ್ರಿ, ಪರಸಪ್ಪ ಬೆಳವಣಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ