ಹೂವಿನ ಹಡಗಲಿ

ಜಿಲ್ಲಾ ಮಟ್ಟದ ಏಡ್ಸ್‌ ಜಾಗೃತಿಗೆ ಹಡಗಲಿಯಲ್ಲಿ ಬೈಕ್ ರಾಲಿ

ಜಿಲ್ಲಾ ಮಟ್ಟದ ಏಡ್ಸ್‌ ಜಾಗೃತಿಗೆ ಹಡಗಲಿಯಲ್ಲಿ ಬೈಕ್  ರಾಲಿ


ಲೋಕದರ್ಶನ ವರದಿ 

        ಹೂವಿನಹಡಗಲಿ ಅ.27:  ಸಾರ್ವಜನಿಕರಲ್ಲಿ ಎಚ್‌ಐವಿ-ಏಡ್ಸ್‌ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲಾ ಏಡ್ಸ್‌ ನಿಯಂತ್ರಣ ಸೊಸೈಟಿ, ತಾಲೂಕು ಆರೋಗ್ಯ ಅಧಿಕಾರಿಗಳು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳು ಹಾಗೂ ಆರಕ್ಷಕ ಇಲಾಖೆ ಸಹಯೋಗದಲ್ಲಿ ಪಟ್ಟಣದಲ್ಲಿ ಮಂಗಳವಾರ ಎಚ್ ಐ ವಿ ಏಡ್ಸ್‌ ತಡೆಗಟ್ಟುವ ಕುರಿತಂತೆ ಜನರ ಜಾಗೃತಿ ಬೈಕ್ ರಾಲಿ ನಡೆಯಿತು. ತಾಲೂಕು ಆರೋಗ್ಯ ಅಧಿಕಾರಿ ಡಾ. ಅಶೋಕ್ ಹಸಿರು ನಿಶಾನೆ ತೋರಿಸುವ ಮೂಲಕ ಬೈಕ್ ರಾಲಿಗೆ ಚಾಲನೆ ನೀಡಿದರು.

        ಬಳಿಕ ಮಾತನಾಡಿ, ’ಎಚ್‌ಐವಿ-ಏಡ್ಸ್‌ ತಡೆಗಟ್ಟುವಿಕೆ ಹಾಗೂ ರೋಗದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದರು.ಪಿಎಸ್‌ಐ ವಾಸು ಮಾತನಾಡಿ ಬೈಕ್ ಓಡಿಸುವಾಗ ಅಪಘಾತ ಸಂಭವಿಸಿದಾಗ ತಲೆಗೆ ನೇರ ಪೆಟ್ಟು ಬೀಳದಂತೆ ಹೆಲ್ಮೆಟ್ ತಡೆಯುತ್ತದೆ.ಜತೆಗೆ  ತೀವ್ರವಾದ ಆಘಾತದಿಂದ ಮೆದುಳಿಗೆ ಆಗುವ ಆಂತರಿಕ ರಕ್ತಸ್ರಾವ ಮತ್ತು ಜೀವಕ್ಕೆ ಅಪಾಯ ತಡೆಯುತ್ತದೆ ಎಂದರು.

           ಕೂಡ್ಲಿಗಿ ಐಸಿಟಿಸಿ ಆಪ್ತಸಮಾಲೋಚಕ   ಮರುಳರಾಧ್ಯಾ ಪ್ರಾಸ್ತಾವಿಕ ಮಾತನಾಡಿದರು. ಕ್ಷೇತ್ರ ಕಾರ್ಯಕ್ರಮ ವ್ಯವಸ್ಥಾಪಕ ಬೀರಬ್ಬಿ ಮಹೇಶ್ ,ಐಸಿಟಿಸಿ ಕೌನ್ಸಿಲರ್ ಟೀ ವೀರೇಶ್ ಅವರು ಬೈಕ್ ರಾಲಿ  ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ತಾಲೂಕಿನ ಕೇಂದ್ರ ಕೇಂದ್ರ ಬ್ಯಾಂಕ್ ನೌಕರರು ಹಾಗೂ ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕಿನ ಐಸಿಟಿಸಿ ಆಪ್ತಸಮಾಲೋಚಕರು ಭಾಗವಹಿಸಿದ್ದರು. 


ಸುದ್ದಿ ಓದಿ