ಹೂವಿನ ಹಡಗಲಿ

ಕಬ್ಬಿಗೆ ಪ್ರಾದೇಶಿಕವಾರು ಬೆಲೆ ನಿಗದಿಗೆ ಆಕ್ಷೇಪ

ಕಬ್ಬಿಗೆ ಪ್ರಾದೇಶಿಕವಾರು ಬೆಲೆ ನಿಗದಿಗೆ ಆಕ್ಷೇಪ


ಹೂವಿನಹಡಗಲಿ 26 : ಕಬ್ಬು ಬೆಳೆಗೆ ಪ್ರಾದೇಶಿಕ ಬೆಲೆ ನಿಗದಿ ಮಾಡದೇ ರಾಜ್ಯದಾದ್ಯಂತ ಏಕರೂಪ ಬೆಲೆ ನಿಗದಿಪಡಿಸಬೇಕು’ ಎಂದು ಹೊಳಲು ಗ್ರಾಮದ ರೈತ ಕೋಡಬಾಳ ಚಂದ್ರ​‍್ಪ ಒತ್ತಾಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬಿಗೆ ಪ್ರಾದೇಶಿಕವಾರು ಬೆಲೆ ನಿಗದಿಪಡಿಸದೇ ರಾಜ್ಯದಾದ್ಯಂತ ಏಕರೂಪದ ಬೆಲೆ ನಿಗದಿಪಡಿಸಬೇಕು.

ಈ ಭಾಗದ ಮೈಲಾರ ಶುಗರ್ಸ, ವಿಜಯನಗರ ಶುಗರ್ಸ, ಶಾಮನೂರು ಶುಗರ್ಸ್‌ ಕಾರ್ಖಾನೆಗಳು ಕಬ್ಬು ಇಳುವರಿ ನೆಪದಲ್ಲಿ ಮನ ಬಂದಂತೆ ಬೆಲೆ ನಿಗದಿಪಡಿಸಿ ರೈತರನ್ನು ಶೋಷಣೆ ಮಾಡುತ್ತಿದ್ದಾರೆ. ಎಂದು ಆರೋಪಿಸಿದರು.ಅ.26 ರಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರೆದಿರುವ ಕಬ್ಬು ಬೆಳೆಗಾರರ ಸಭೆಯಲ್ಲಿ ಏಕರೂಪ ಬೆಲೆ ನಿಗದಿಪಡಿಸುವಂತೆ ಮನವಿ ಸಲ್ಲಿಸಲಾಗುವುದು. 


ಸುದ್ದಿ ಓದಿ