ಅಡವಿ ಮಲ್ಲನಕೇರಿ: ಶ್ರೀದೇವಿ ಪುರಾಣ ಪ್ರವಚನ
ಹೂವಿನಹಡಗಲಿ ಅ.23: ತಾಲೂಕಿನ ಅಡವಿಮಲ್ಲನಕೇರಿ ಗ್ರಾಮದಲ್ಲಿ ದಸರಾ ಹಬ್ಬ ನಿಮಿತ್ತ 9ದಿನಗಳು ದೇವಿ ಮಹಾತ್ಮೆ ಮತ್ತು ಪುರಾಣ ಪ್ರವಚನ ನಡೆಯಿತು.ಪ್ರತಿವರ್ಷದಂತೆ ಈ ವರ್ಷವೂ ಕೂಡ ಭಕ್ತ (ಶಿಷ್ಯಂದಿರರಿಂದ ) ಶ್ರೀದೇವಿಗೆ ಪೂಜೆ ಹೋಳಿಗೆ ಪ್ರಸಾದ ನಡೆಯುತ್ತದೆ. ಹಲವಾರು ಭಕ್ತರು ಗಂಗಾಧರ ಗುರುಸ್ವಾಮಿಗಳ ಪುರಾಣ ನಂತರ ಹೋಳಿಗೆ ,ಅನ್ನಸಂತರೆ್ಣ ನಡೆಯಿತು.ಕೊನೆ ದಿನ ಮಹಿಳೆಯರು ಮುತೈದೆಯಿರಿಗೆ ಉಡಿ ತುಂಬುವ ಕಾರ್ಯಕ್ರಮ, ಬನ್ನಿ ಮಹಾಕಾಳಮ್ಮ ದೇವರಿಗೆ ಪೂಜಾ ಪುನಸ್ಕಾರ, ಮುತೈದೆಯರಿಂದ ಗಂಗಮ್ಮಳಿಗೆ ಪೂಜೆ ಸಲ್ಲಿಸುವುದು ಈ ದೇವಿ ಪುರಾಣದ ವಿಶೇಷವಾಗಿದೆ.ಶ್ರೀ ವೇದ ಗಂಗಾಧರ ಗುರುಸ್ವಾಮಿ ಮಾತನಾಡಿ, ನಾವು ಈಗಾಗಲೇ ಆದಿಶಕ್ತಿಯ ಪುರಾಣ 40ವರ್ಷಗಳು ತುಂಬಿವೆ. ನಾವು ಏನೇ ಬಿಟ್ಟರೂ ನಮ್ಮ ಸಂಸ್ಕೃತಿ, ಆಚಾರ, ವಿಚಾರ, ಪೂಜಾ ಪುನಸ್ಕಾರಗಳನ್ನು ಯಾವತ್ತೂ ಮರೆಯಬಾರದು ಇಂದಿನ ಪೀಳಿಗೆ ಬರಿ ಮೊಬೈಲ್ ನಲ್ಲಿ ಮುಳಿಗಿದೆ ಇದು ನಿಜಕ್ಕೂ ದೊಡ್ಡ ದುರಂತವೆ ಸರಿ ಇದರಿಂದ ಹೊರಬರಬೇಕೆಂದರೆ ನಮ್ಮ ಧಾರ್ಮಿಕ ಆಚರಣೆ ಪದ್ಧತಿ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.ಈ ವೇಳೆ ಗ್ರಾಮಸ್ಥರು, ಮಹಿಳೆಯರು, ಭಕ್ತರು, ಮತ್ತು ಮಕ್ಕಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.