ಶಾರ್ಟ್ ಸರ್ಕಿಟ್ : 5ಎಕರೆ ಕಬ್ಬು ಬೆಂಕಿಗೆ ಆಹುತಿ
ಲೋಕದರ್ಶನ ವರದಿ
ಹೂವಿನಹಡಗಲಿ 27: ವಿದ್ಯುತ್ ಶಾರ್ಟ್ ರ್ಕಿಟ್ ನಿಂದ ಐದು ಎಕರೆ ಕಬ್ಬು ಬೆಳೆ ಬೆಂಕಿಗೆ ಆಹುತಿಯಾದ ಘಟನೆ ತಾಲ್ಲೂಕಿನ ದೇವಗೊಂಡನಹಳ್ಳಿ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ.ಪಟ್ಟಣದ ನಿವಾಸಿ, ಶಿಕ್ಷಕ ಹೊಂಬಾಳೆ ಕೊಟ್ರೇಶ ಅವರಿಗೆ ಸೇರಿದ ಕಬ್ಬಿನ ಗದ್ದೆ ಬೆಂಕಿಗೆ ಆಹುತಿಯಾಗಿದೆ. ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುಷ್ಟರಲ್ಲಿ ಅಪಾರ ಪ್ರಮಾಣದ ಕಬ್ಬು ಹಾಗೂ ಹನಿ ನೀರಾವರಿ ಸಲಕರಣೆ, ವಿದ್ಯುತ್ ತಂತಿ ಸುಟ್ಟು ಭಸ್ಮವಾಗಿದೆ.’ಕಳೆದ ವಾರ ಕಾರ್ಮಿಕರು ಕಬ್ಬು ಕಟಾವು ಆರಂಭಿಸಿದ್ದು, ಕಾರ್ಖಾನೆ ಬಂದ್ ಆಗಿದ್ದರಿಂದ ಕಾರ್ಮಿಕರು ಒಂದೇ ದಿನಕ್ಕೆ ವಾಪಾಸ್ ಹೋಗಿದ್ದರು.150 ಟನ್ ನಷ್ಟು ಕಬ್ಬು, ಹನಿ ನೀರಾವರಿ ಪೈಪ್ ಸುಟ್ಟಿದ್ದು, ಅಂದಾಜು ?10 ಲಕ್ಷ ನಷ್ಟವಾಗಿದೆ’ ಎಂದು ಹೊಂಬಾಳಿ ಕೊಟ್ರೇಶ ಅಳಲು ತೋಡಿಕೊಂಡರು.