ಬೆಳಗಾವಿ

ರೈತ ಮುಖಂಡರ ಬಿಡುಗಡೆಗೆ ಆಗ್ರಹಿಸಿ ಹಳ್ಳೂರಿನಲ್ಲಿ ರೈತರ ಪ್ರತಿಭಟನೆ

ರೈತ ಮುಖಂಡರ ಬಿಡುಗಡೆಗೆ ಆಗ್ರಹಿಸಿ ಹಳ್ಳೂರಿನಲ್ಲಿ ರೈತರ ಪ್ರತಿಭಟನೆ


        ಹಳ್ಳೂರ 05:  ಬೆಳಗಾವಿಯಲ್ಲಿ ರೈತ ಮುಖಂಡರನ್ನು ಬಂದಿಸಿದ್ದಕ್ಕೆ ಹಳ್ಳೂರ ಗ್ರಾಮದ ಗುಬ್ಬಿ ಬಸ್ ಸ್ಟ್ಯಾಂಡ್ ನಲ್ಲಿ ಮುಧೋಳ ನಿಪ್ಪಾಣಿ ರಾಜ್ಯ ಹೆದ್ದಾರಿ ಬಂದ ಮಾಡಿ ಸರಕಾರದ ವಿರುದ್ಧ ದಿಕ್ಕಾರ ಕೂಗಿದರು.          

     ಮುಖಂಡ ದುಂಡಪ್ಪ ಕೊಂಗಾಲಿ ಮಾತನಾಡಿ ರೈತರ ಅನ್ನ ತಿಂದು ರೈತರಿಗೆ ಮೊಸ ಮಾಡುತ್ತಿರುವ ಸರಕಾರಕ್ಕೆ ಧಿಕ್ಕಾರ. ರೈತರು ಬೆಳೆದ ಕಬ್ಬಿಣ ನಿಗದಿತ ಬೆಲೆಗೆ ಹೋರಾಟ ಮಾಡುತ್ತಿರುವವರನ್ನು ಬೆಳಗಾವಿಯಲ್ಲಿ ರೈತ ಮುಖಂಡರನ್ನು ಬಂದಿಸಿದನ್ನು  ಖಂಡಿಸುತ್ತೇವೆ ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.          

                    ರೈತ ಮುಖಂಡರಾದ ಬಾಳಪ್ಪಾ ಬಾಗೊಡಿ, ಶಿವಪ್ಪಾ ಲೋಕನ್ನವರ ಮಾತನಾಡಿ ಚುನಪ್ಪ ಪೂಜೇರಿ,ಶಶಿಕಾಂತ ಗುರೂಜಿ ನೇತೃತ್ವದಲ್ಲಿ ನಡೆದ ರೈತ ಚಳುವಳಿಯನ್ನು ಹತ್ತಿಕ್ಕಲು ನಡೆಸುತ್ತಿರುವ ಕುತಂತ್ರ , ನಿಮ್ಮ್‌ ನೀಚ ಬುದ್ಧಿ ಬಿಟ್ಟು ರೈತ ಮುಖಂಡರನ್ನು ಕೂಡಲೇ ಬಿಡುಗಡೆ ಮಾಡಬೇಕು, ಇಲ್ಲವಾದಲ್ಲಿ ರಾಜ್ಯದ ತುಂಬೆಲ್ಲ  ಕೆಟ್ಟ ಪರಿಸ್ಥಿತಿ ಬಂದಿತು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.     

               ಈ ಸಮಯದಲ್ಲಿ  ಲಕ್ಷ್ಮಣ ಕತ್ತಿ. ರಂಗಪ್ಪ ಕದಂ.ಶಂಕರ ಅಂಗಡಿ.ಪ್ರದೀಪ ಪಾಲಬಾಂವಿ.ಲಕ್ಷ್ಮಣ ಶಿವಾಪುರ. ಲಕ್ಷ್ಮಣ್ ಸಪ್ತಸಾಗರ. ಗುರುನಾಥ್ ಬೋಳನವರ. ಸಿದ್ದು ತೇರದಾಳ. ಈರ​‍್ಪ ಕಮಲದಿನ್ನಿ. ಶಿವಪ್ಪ ಉಳ್ಳಾಗಡ್ಡಿ. ಕಲ್ಲಪ್ಪ ಕುಲಿಗೋಡ. ಪ್ರಶಾಂತ್ ಪಾಲಬಾವಿ. ಲಕ್ಷ್ಮಣ್ ಹುಲ್ಯಾಳ.  ಸೇರಿದಂತೆ ನೂರಾರು ರೈತ ಬಾಂಧವರಿದ್ದರು. 


ಸುದ್ದಿ ಓದಿ