ನ.7ರಂದು ಡಾ.ಬೆಟಗೇರಿ ಕೃಷ್ಣಶರ್ಮರ ದಿವ್ಯ ಸ್ಮರಣೋತ್ಸವ
ಲೋಕದರ್ಶನ ವರದಿ
ಬೆಟಗೇರಿ 05: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನ.7ರಂದು ಸ್ಥಳೀಯ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ, ಗ್ರಾಮ ಪಂಚಾಯತಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಹಾಲು ಉತ್ಪಾದಕರ ಸಹಕಾರಿ ಸಂಘ ಹಾಗೂ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ಮತ್ತು ಡಾ.ಬೆಟಗೇರಿ ಕೃಷ್ಣಶರ್ಮರ ದಿವ್ಯ ಸ್ಮರಣೋತ್ಸವ ಸಮಾರಂಭ ಹಾಗೂ ಮುಕ್ತ ಸಾಮೂಹಿಕ ನೃತ್ಯ ಸ್ಪರ್ಧೆಗಳು ಜರುಗಲಿದೆ.
ನ.7ರಂದು ಸಂಜೆ 6ಗಂಟೆಗೆ ಸ್ಥಳೀಯ ಗಜಾನನ ವೇದಿಕೆ ಮೇಲೆ ಡಾ.ಬೆಟಗೇರಿ ಕೃಷ್ಣಶರ್ಮರ ದಿವ್ಯ ಸ್ಮರಣೋತ್ಸವ ಸಮಾರಂಭ ಜರುಗಲಿದೆ. ಸುಣಧೋಳಿ ಅಭಿನವ ಶಿವಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ, ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಉದ್ಘಾಟನೆ ನೆರವೇರಿಸಲಿದ್ದಾರೆ. ಬೆಟಗೇರಿ ಕರವೇ ಗ್ರಾಮ ಘಟಕದ ಅಧ್ಯಕ್ಷ ಈರಣ್ಣ ಬಳಿಗಾರ ಅಧ್ಯಕ್ಷತೆ ವಹಿಸಲಿದ್ದು, ಬೆಳಗಾವಿ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಪ್ರತಿಷ್ಠಾನ ಸದಸ್ಯ ಡಾ.ಎಚ್.ಬಿ.ಕೋಲಕಾರ, ಸ್ಥಳೀಯ ರಂಗಭೂಮಿ ಹಿರಿಯ ಕಲಾವಿದ ಈಶ್ವರಚಂದ್ರ ಬೆಟಗೇರಿ, ಗೋಕಾಕ ಕಸಾಪ ಅಧ್ಯಕ್ಷೆ ಭಾರತಿ ಮದಭಾಂವಿ, ಸ್ಥಳೀಯ ವಿವಿಡಿ ಸರ್ಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಗೌರವಾನ್ವಿತ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಗೋಕಾಕ ತಾಲೂಕಾ ಗ್ರಾಪಂ ಆಡಳಿತಾಧಿಕಾರಿ, ತಾಲೂಕಾ ಪಶು ವೈದ್ಯಾಧಿಕಾರಿ ಡಾ.ಮೋಹನ ಕಮತ, ಸ್ಥಳೀಯ ಗ್ರಾಪಂ ಪಿಡಿಒ ಶಿವಾನಂದ ಪತ್ತಾರ, ಪಿಕೆಪಿಎಸ್ ಅಧ್ಯಕ್ಷ ಬಸವಂತ ಕೋಣಿ, ಹಾಉಸಸಂಘದ ಅಧ್ಯಕ್ಷ ಸಿದ್ಧೇಶ್ವರ ಕುರಬೇಟ ಮುಖ್ಯಅತಿಥಿಗಳಾಗಿ, ಕಲ್ಲೋಳ್ಳಿ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ಸುರೇಶ ಹನಗಂಡಿ ಉಪನ್ಯಾಸಕರಾಗಿ ಆಗಮಿಸಲಿದ್ದಾರೆ. ಮುಕ್ತ ಸಾಮೂಹಿಕ ನೃತ್ಯ ಸ್ಪರ್ಧೆಗಳ ಕಾರ್ಯಕ್ರಮ ಸಂಜೆ 8:30 ಗಂಟೆಗೆ ನಡೆಯಲಿದೆ. ಸ್ಥಳೀಯ ಕನ್ನಡ ಪರ ಹೋರಾಟಗಾರರು, ಸಾಹಿತಿ-ಶರಣರು, ಗಣ್ಯರು, ಗ್ರಾಪಂ ಹಾಗೂ ವಿವಿಧ ಸಂಘ, ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು, ಯುವಕರು, ಕರವೇ ಪದಾಧಿಕಾರಿಗಳು, ಸದಸ್ಯರು, ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸ್ಥಳೀಯ ಕರವೇ ಅಧ್ಯಕ್ಷ ಈರಣ್ಣ ಬಳಿಗಾರ ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.