ವಿಜಯಪುರ

ವಿಜಯಪುರ ವೇಟ್ಲಿಫ್ಟಿಂಗ್ನಲ್ಲಿ ಹಜಿಯಾಲಿ ಬಂದೇನವಾಜ್ಗೆ ಚಿನ್ನದ ಪದಕ

ವಿಜಯಪುರ ವೇಟ್ಲಿಫ್ಟಿಂಗ್ನಲ್ಲಿ ಹಜಿಯಾಲಿ ಬಂದೇನವಾಜ್ಗೆ ಚಿನ್ನದ ಪದಕ


             ವಿಜಯಪುರ 23 : ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯ 2026-27ನೇ ಸಾಲಿನ ಕ್ರೀಡಾಕೂಟದಲ್ಲಿ ವಿಜಯಪುರದ ಅನುದಾನರಹಿತ   ಗುರುದೇವ ಪ್ರಾಥಮಿಕ ಶಾಲೆ, ಅಥಾಲಟ್ಟಿ ಶಾಲೆಯ ವಿದ್ಯಾರ್ಥಿ ಹಜಿಯಾಲಿ ಬಂದೇನವಾಜ್ ಬಡಿಗೇರ ವೇಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ತಮ್ಮ ದಾಗಿಸಿಕೊಂಡಿದ್ದಾರೆ.

           ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯಪದವು ಸಮೀಪದ ಸರ್ವೋದಯ ಪ್ರೌಢಶಾಲೆಯಲ್ಲಿ ನಡೆದ 14/17 ವರ್ಷ ವಯೋಮಿತಿಯ 98 ಕೆ.ಜಿ. ಮೇಲ್ಪಟ್ಟ ವಿಭಾಗದ ವೇಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಸ್ಪರ್ಧೆಯಲ್ಲಿ ಸ್ನ್ಯಾಚ್ ವಿಭಾಗದಲ್ಲಿ 66 ಕೆ.ಜಿ. ಹಾಗೂ ಕ್ಲೀನ್ ಆ್ಯಂಡ್ ಜರ್ಕ್‌ ವಿಭಾಗದಲ್ಲಿ 94 ಕೆ.ಜಿ. ಭಾರ ಎತ್ತುವ ಮೂಲಕ ಒಟ್ಟು 160 ಕೆ.ಜಿ. ಭಾರ ಎತ್ತಿ ಪ್ರಥಮ ಸ್ಥಾನ ಗಳಿಸಿದ್ದಾರೆ.

          ಈ ಸಂದರ್ಭದಲ್ಲಿ ದಾದಾಸಾಹೇಬ ಬಾಗಾಯತ ಸಾಧಕನನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿ, ನ. 6ರಂದು ಪ್ರಕಟಿಸಲಾದ ಫಲಿತಾಂಶದ ಸರಣಿ ಸಂಖ್ಯೆ 1911ರಲ್ಲಿ ಅವರ ಸಾಧನೆ ದಾಖಲಾಗಿದೆ. ಗ್ರಾಮೀಣ ಭಾಗದ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯ ಈ ಸಾಧನೆ ಶಾಲೆ ಹಾಗೂ ವಿಜಯಪುರ ಜಿಲ್ಲೆಗೆ ಹೆಮ್ಮೆ ತಂದಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಿಜಯಪುರ ಜಿಲ್ಲೆಯ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ, ಕೋಚ್ ಚಂದ್ರಶೇಖರ ತಾರನಾಳ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು . 


ಸುದ್ದಿ ಓದಿ