ಹೈದರಾಲಿ ಹುಲಿಯಾದರೇ ಟಿಪ್ಪು ಸುಲ್ತಾನ್ ಹೆಬ್ಬುಲಿ : ನ್ಯಾಯವಾದಿ ದಾನೇಶ ಅವಟಿ
ಲೋಕದರ್ಶನ ವರದಿ
ವಿಜಯಪುರ 23: ಭಾರತದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲಿ. ಕನ್ನಡ ನಾಡು ನುಡಿಯ ಅಸ್ಮಿತೆಗೆ. ಭಾರತಮಾತೆಯ ಸ್ವಾತಂತ್ರ್ಯಕ್ಕೆ,ತಂದೆ ಹೈದರಾಲಿ ಹುಲಿಯಂತೆ, ಮಗ ಟಿಪ್ಪುಸುಲ್ತಾನ್ ಹೆಬ್ಬುಲಿಯಂತೆ ಬ್ರಿಟಿಷರ ವಿರುದ್ಧ ಹೋರಾಡಿ, ದೇಶಪ್ರೇಮ ಸಮಾನತೆ, ತ್ಯಾಗ ಬಲಿದಾನದಿಠ ಅಜರಾಮರರಾಗಿದ್ದಾರೆ ಎಂದು ನ್ಯಾಯವಾದಿ ದಾನೇಶ ಅವಟಿ ನುಡಿದರು.
ನಗರದ ಹೊರವಲಯ ಬುರಣಾಪುರ ರಸ್ತೆಯ ಬಸವನಗರದಲ್ಲಿ ರವಿವಾರ ದಿನಾಂಕ 22-11-2026 ರಂದು ಸಾಯಂಕಾಲ 4 ಗಂಟೆಗೆ ಸ್ವಾತಂತ್ರ್ಯಪ್ರೇಮಿ. ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ ಅವರ 276 ನೆಯ ಜನ್ಮ ಜಯಂತಿಯನ್ನು ಜ್ಯೋತಿ ಬೆಳಗಿಸಿ, ಟಿಪ್ಪು ಸುಲ್ತಾನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಉದ್ಘಾಟಿಸಿ.
ಮಾತನಾಡಿದ ಅವರು ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ ಟಿಪ್ಪು ಸುಲ್ತಾನ್ ನಾಲ್ಕುಬಾರಿ ನಿರ್ಣಾಯಕ ಯುದ್ಧಗಳನ್ನು ಮಾಡಿ ತಮ್ಮವರ ಮೋಸದಿಂದ ಯುದ್ಧ ಮಾಡುತ್ತ ರಣರಂಗದಲ್ಲಿ ಹುತಾತ್ಮರಾದರು. ಯುದ್ದ ನಿಪುಣತೆ, ರಾಜತಾಂತ್ರಿಕಾತೆ, ವಿದೇಶೀನೀತಿಯಿಂದ ಹೆಸರು ವಾಸಿಯಾಗಿದ್ದರು, ಪ್ರಯೋಗಶೀಲ ರಾಜರಾಗಿದ್ದ ಅವರು ಹಲವಾರು ನೂತನ ಯೋಜನೆಗಳನ್ನು ಆಡಳಿತದಲ್ಲಿ ಜಾರಿಗೆ ತಂದರು.
ಕೃಷಿ. ನೀರಾವರಿ. ಕೈಗಾರಿಕೆ ವ್ಯಾಪಾರ, ಉದ್ಯೋಗಗಳಲ್ಲಿ ಅಭಿವೃದ್ಧಿ, ಯುದ್ದದಲ್ಲಿ ಕ್ಷಿಪಣಿಗಳ ಬಾಂಬುಗಳ ಬಳಕೆ, ಬಡವರ, ದೀನ ದಲಿತರ, ಮಹಿಳೆಯರ ಮಕ್ಕಳ ಹಕ್ಕುಗಳ ಪ್ರತಿಪಾದಕರಾಗಿದ್ದರು. ಸರ್ವಧರ್ಮಗಳ ಸಹಿಷ್ಣುತಾವಾದಿ ಯಾಗಿದ್ದು, ಅನೇಕ ಹಿಂದೂ ದೇವಾಲಯ ಗಳ ರಕ್ಷಣೆ, ಜೀರ್ಣೋದ್ಧಾರ ಕೈಗೊಂಡರು. ಅವರ ಆದರ್ಶ ತ್ಯಾಗ ಬಲಿದಾನ ಸ್ಪೂರ್ತಿದಾಯಕ ಎಂದರು.
ಇನ್ನೋರ್ವ ಅತಿಥಿ ಉಪನ್ಯಾಸಕರಾದ ಲಾಲಸಾಬ ನಧಾಪ ಮಾತನಾಡಿ, ಟಿಪ್ಪು ಸುಲ್ತಾನ್ ಅವರ ಬಗ್ಗೆ ಕೆಲವರು ನಿತ್ಯ ಅಪಮಾನಿಸುವ, ಅಪಪ್ರಚಾರ ಮಾಡುವ ಮೂಲಕ ಟಿಪ್ಪು ಸುಲ್ತಾನ್ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತಿದ್ದಾರೆ. ಇದು ಬುದ್ಧ, ಬಸವ, ಮಹಾತ್ಮ ಗಾಂಧೀಜಿ, ಅಂಬೇಡ್ಕರ ರ ಮೊದಲುಗೊಂಡು ಎಲ್ಲರನ್ನೂ ಅವಮಾನಿಸುವ ಕುತಂತ್ರ ಕಾರ್ಯ ಹಿಂದಿನ ಕಾಲದಲ್ಲಿ ಮಾಡಿದ್ದು, ಅದನ್ನು ಈಗಲೂಮಾಡುತ್ತಿದ್ದಾರೆ.
ದೇಶಭಕ್ತ, ನಾಡು ನುಡಿ ರಕ್ಷಕ, ದೇಶಕ್ಕೆ ಯುದ್ಧ ಕ್ಷಿಪಣಿ, ರೇಷ್ಮೆ, ನಿರಾವರಿ. ಅಣೆಕಟ್ಟು. ಉಳುವನೇ ಭೂಒಡೆಯ, ಮಹಿಳೆಯರ ಹಕ್ಕುಗಳ ರಕ್ಷಕರಾದ ಹಜರತ್ ಟಿಪ್ಪು ಸುಲ್ತಾನ್ ಅವರ ಜಯಂತಿಯನ್ನು ಆಚರಣೆ ಮಾಡಲು ಅಡ್ಡಿಪಡಿಸುತ್ತಿರುವುದು ದುರ್ದೈವದ ಸಂಗತಿ,ಇಂಥವರಿಗೆ ಮುಂದಿನ ದಿನಗಳಲ್ಲಿ ಸಾರ್ವಜನಿಕರು, ಟಿಪ್ಪು ಸುಲ್ತಾನವರ ಅಭಿಮಾನಿಗಳು ತಕ್ಕ ಉತ್ತರ ನೀಡುತ್ತಾರೆ ಎಂದರು.
ಟಿಪ್ಪು ಸುಲ್ತಾನ್ ಸೇನೆಯ ಜಿಲ್ಲಾಧ್ಯಕ್ಷರಾದ ಅನ್ವರ್ ಭಾಷಾ ಮುಜಾವರ ಅವರು ಮಾತನಾಡಿ, ಇಲಿಯಾಗಿ ನೂರು ವರ್ಷ ಬದುಕುವುದಕ್ಕಿಂತ ಹುಲಿಯಾಗಿ ಮೂರು ವರ್ಷ ಬದುಕುವುದೇ ಬದುಕಿನ ಸಾರ್ಥಕತೆ ಎಂದು ನುಡಿದ ಟಿಪ್ಪು ಸುಲ್ತಾನ್ ಅವರ ಕೆಚ್ಚೆದೆಯ ನುಡಿ, ಪ್ರತಿಯೊಬ್ಬ, ದೇಶಪ್ರೇಮಿ ಭಾರತೀಯರ ಆದರ್ಶವಾಗಬೇಕು.
ನಾಡು ನುಡಿ ರಕ್ಷಣೆ ಪ್ರತಿಯೊಬ್ಬರ ಉಸಿರಾಗಬೇಕು, ಟಿಪ್ಪು ಸುಲ್ತಾನ್ ಅವರ ದೇಶ ಪ್ರೇಮ, ಆದರ್ಶ ವ್ಯಕ್ತಿತ್ವ. ಹೋರಾಟಮಯ ಜೀವನ. ತ್ಯಾಗ ಬಲಿದಾನವನ್ನು ನಾವು ಸದಾ ಕಾಲ ಸ್ಮರಿಸಬೇಕು. ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸಾದ, ಭವ್ಯ ಭಾರತ, ಸಮೃದ್ಧ ಭಾರತ, ಶಕ್ತಿಯುತ ಭಾರತವನ್ನು ನಾವು ಕಟ್ಟದೇ ಹೋದರೆ ಬದುಕಿದ್ದು ಸತ್ತಂತೆ, ಕಾರಣ ಟಿಪ್ಪು ಸುಲ್ತಾನ್ ಅವರ ಸ್ಮರಣೆಗೆ, ಜಯಂತಿ ಆಚರಣೆ ನಮ್ಮೆಲ್ಲರಿಗೆ ಸ್ಫೂರ್ತಿ ಯಾಗಲಿ. ಶ್ರದ್ಧೆ ಶಾಂತಿ, ಸೌಹಾರ್ಧತೆ ಮೂಲಕ ಎಲ್ಲರೂ ಸೇರಿ ಅವರ ಜಯಂತಿ ಆಚರಿಸೋಣ ಎಂದು ಕರೆ ನೀಡಿದರು.