ಬೈಲಹೊಂಗಲ

ಬೆಳಗಾವಿಯಲ್ಲಿ ರಾಜ್ಯೋತ್ಸವ ಕವಿಗೋಷ್ಠಿ: ಅಡವಿ ಸಿದ್ದೇಶ್ವರ ಮಠದಲ್ಲಿ ಕವಿಗಳಿಂದ ಕಾವ್ಯ ವಾಚನ

ಬೆಳಗಾವಿಯಲ್ಲಿ ರಾಜ್ಯೋತ್ಸವ ಕವಿಗೋಷ್ಠಿ: ಅಡವಿ ಸಿದ್ದೇಶ್ವರ ಮಠದಲ್ಲಿ ಕವಿಗಳಿಂದ ಕಾವ್ಯ ವಾಚನ


            ಬೈಲಹೊಂಗಲ  23:  ಪಟ್ಟಣದ  ದೊಡ್ಡಕೆರೆ ಹತ್ತಿರದ ಶ್ರೀ ಅಡವಿ ಸಿದ್ದೇಶ್ವರ ಮಠ, ಅನುಭವ ಮಂಟಪ, ಮಲಪ್ರಭಾ ಸಾಹಿತ್ಯ ಬಳಗ, ಬೈಲಹೊಂಗಲ ಹಾಗೂ ಡಾ. ಹೊತ್ತಿಗಿಮಠ ಕಣ್ಣಿನ ಆಸ್ಪತ್ರೆ ಬೈಲಹೊಂಗಲ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯೋತ್ಸವ ಕವಿಗೋಷ್ಠಿ ಜರುಗಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ವೀರಭದ್ರ ಕೌದಿ ಅವರು ವಹಿಸಿದ್ದರು. ಪ್ರ

          ಸ್ತುತ ದಿನಮಾನಗಳಲ್ಲಿ ಕಾವ್ಯದ ಮಹತ್ವವನ್ನು ತಿಳಿಸುತ್ತಾ ಕಾವ್ಯವನ್ನು ಹೇಗೆ ಸ್ವೀಕರಿಸಬೇಕು ಎಂಬುದನ್ನು ತಿಳಿಸಿದರು.ಮುಖ್ಯ ಅತಿಥಿಗಳಾಗಿದ್ದ ಆಶುಕವಿ ಶಿವಪ್ರಸಾದ ಹುಲೆಪ್ಪನವರಮಠ ಅವರು ಬಳಗದ ಎಲ್ಲ ಪದಾಧಿಕಾರಿಗಳ ಕಾರ್ಯಕ್ಷಮತೆ ಮತ್ತು ಅವರ ಕಾವ್ಯದ ವೈಶಿಷ್ಟ್ಯತೆಯನ್ನು ಪ್ರಸ್ತುತಪಡಿಸಿದರು.

                ಕೇಂದ್ರ ಬಸವ ಸಮಿತಿಯ ಹಿರಿಯ ನಿರ್ದೇಶಕರು, ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಯುವ ಬರಹಗಾರರು ಆಳವಾದ ಸಾಹಿತ್ಯ ಅಧ್ಯಯನದಿಂದ ಉತ್ತಮ ಕಾವ್ಯ ರಚನೆ ಮಾಡಬಹುದು ಎಂದರು. ಗೋದಾವರಿ ಪಾಟೀಲ(ಸವದಿ) ಅವರಿಗೆ ಅವರ ತಂದೆಯವರು ವಿಜಯಪುರ ಸೈನಿಕ ಶಾಲೆಯ,ಕಿತ್ತೂರ ಬಾಲಕಿಯರ ವಸತಿ ಶಾಲೆಯ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ನೀಡಿ ಸಾವಿರಾರು ವಿದ್ಯಾರ್ಥಿಗಳಿಗೆ ದಾರೀದೀಪವಾದ ಸೋ.ಫ.ಪಾಟೀಲ ಅವರ ಕುರಿತು ಗ್ರಂಥ ಹೊರತರಲು ಆಗ್ರಹಿಸಿದರು.  

                 ಪದ್ಮಶ್ರೀ ಫೌಂಡೇಶನ್ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲ್ಲೂಕು ಘಟಕದ ಅಧ್ಯಕ್ಷರಾದ ಎನ್‌.ಆರ್‌.ಠಕ್ಕಾಯಿ ಅವರು ಕಾವ್ಯಕ್ಕೆ ಮನಸ್ಸು ಅರಳಿಸುವ, ನೋವು ಶಮನಗೊಳಿಸುವ, ಆನಂದ ನೀಡುವ ಶಕ್ತಿ ಇದೆ ಎಂದರು. ಖ್ಯಾತ ನೇತ್ರ ತಜ್ಞ ವೈದ್ಯರಾದ ಡಾ.ಮಹೇಶ್ವರ ಎಸ್‌.ಹೊತ್ತಿಗಿಮಠ ಅವರು ಮಾತನಾಡಿ ಕನ್ನಡ ನಾಡು,ನುಡಿ,ಸಾಹಿತ್ಯ, ಸಂಸ್ಕೃತಿಯ ಸಂವರ್ಧನೆಗೆ ಅಡವಸಿದ್ದೇಶ್ವರ ಮಠದ ಸಂಪೂರ್ಣ ಸಹಕಾರವಿದೆ ಎಂದರು.

                ಶಿವಪ್ರಸಾದ ಹುಲೆಪ್ಪನವರಮಠ, ಪ್ರೊ. ಬಸವಲಿಂಗ ಮುದೆಣ್ಣವರ, ಈಶ್ವರ ಬೆಣ್ಣಿ, ಸವಿತಾ ಪಾಟೀಲ, ಪಿ.ಎಮ್‌.ನಿಕ್ಕಮ್ಮನವರ, ಗೋದಾವರಿ ಪಾಟೀಲ, ಸಿದ್ದು ನೇಸರಗಿ, ಸರಸ್ವತಿ ಬನ್ನಿಗಿಡದ, ಪ್ರಕಾಶ ಮರಿತಮ್ಮನವರ, ಕುಮಾರ ಕಡೇಮನಿ, ಮಹಾಂತೇಶ ಮುದಕನಗೌಡರ, ಸಾವಿತ್ರಿ ಹೊತ್ತಿಗಿಮಠ,  ಚಂದ್ರಶೇಖರ ಕೊಪ್ಪದ, ಶ್ರೀಶೈಲ ಹೆಬ್ಬಳ್ಳಿ, ಡಾ.ಮಲ್ಲಿಕಾರ್ಜುನ ಛಬ್ಬಿ, ಶಂಕರೆಪ್ಪ ಹಳಂಗಳಿ, ಶ್ರೇಯಸ್ ಕುಮಾರ ದೇವಮಾನೆ ಕವನ ವಾಚಿಸಿದರು.

                ಕಾರ್ಯಕ್ರಮದಲ್ಲಿ ತಾಲೂಕು ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಕವಿ ಡಾ.ಮಲ್ಲಿಕಾರ್ಜುನ ಛಬ್ಬಿಯವರನ್ನು ಪದ್ಮಶ್ರೀ ಫೌಂಡೇಶನ್ ವತಿಯಿಂದ ಸತ್ಕರಿಸಲಾಯಿತು.ಕುಮಾರ ಕಡೇಮನಿ ಹಾಗೂ ಮಹಾಂತೇಶ ಮುದಕನಗೌಡರ ಇವರು ಭಾವಗಾಯನ ಪ್ರಸ್ತುತ ಪಡಿಸಿದರು. ಕವಿ,ಸಾಹಿತಿ ಶ್ರೀಶೈಲ ಹೆಬ್ಬಳ್ಳಿ ಸ್ವಾಗತಿಸಿದರು. ಕವಿ, ಸಂಶೋಧಕ ಡಾ. ಮಲ್ಲಿಕಾರ್ಜುನ ಶಿವಪ್ಪ ಛಬ್ಬಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗೋದಾವರಿ ಪಾಟೀಲ ವಂದಿಸಿದರು. ಸಾವಿತ್ರಿ ಹೊತ್ತಿಗಿಮಠ ನಿರೂಪಿಸಿದರು. 


ಸುದ್ದಿ ಓದಿ