ಬೈಲಹೊಂಗಲ

ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ


ಬೈಲಹೊಂಗಲ 26:  ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಮುಖ್ಯ ಶಿಕ್ಷಕರಾದ ಎನ್‌.ಆರ್‌.ಠಕ್ಕಾಯಿ ಮಾತನಾಡಿ ರಾಮಾಯಣದಂತಹ ಮಹಾಕಾವ್ಯ ರಚನೆ ಮಾಡಿದ ವಾಲ್ಮೀಕಿ ಅವರ ಜೀವನ ಮತ್ತು ಆದರ್ಶಗಳು ಎಲ್ಲರಿಗೂ ಪ್ರೇರಣೆಯಾಗಲಿ ಎಂದರು. ಕಾರ್ಯಕ್ರಮದಲ್ಲಿ ಎಸ್‌.ಡಿ.ಎಂ.ಸಿ ಅಧ್ಯಕ್ಷರಾದ ವಿನಾಯಕ ಬಡಿಗೇರ, ಸದಸ್ಯರಾದ ರಾಮು ಮೆಕ್ಕೇದ, ದುಂಡಪ್ಪ ಮಡಿವಾಳರ, ಶಿಕ್ಷಕರಾದ ಜಗದೀಶ ನರಿ, ಪ್ರವೀಣ ಗುರುನಗೌಡರ, ಶಿವಾನಂದ ಬಳಿಗಾರ, ಹೇಮಲತಾ ಪುರಾಣಿಕ, ಗಾಯತ್ರಿ ತುರಾದಿ, ಸಿಬ್ಬಂದಿಗಳಾದ ಜ್ಯೋತಿ ಅಳಗೋಡಿ, ಮಹಾದೇವಿ ಸೊಗಲದ, ಗಂಗವ್ವ ಅಳಗೋಡಿ, ಹಳೆಯ ವಿದ್ಯಾರ್ಥಿಗಳಾದ ಅಭಿಷೇಕ ಶಿಂಧೆ, ಅನಿಲ ಶೀಗಿಹಳ್ಳಿಮಠ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಮನ್ವಿ ಗಡಾದ ಸ್ವಾಗತಿಸಿ ವಂದಿಸಿದರು. 


ಸುದ್ದಿ ಓದಿ