ಬೇವಿನಕೊಪ್ಪ : ವಿವಿಧ ಸಾಧಕರಿಗೆ ಸನ್ಮಾನ
ಬೈಲಹೊಂಗಲ 25 : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಬೇವಿನಕೊಪ್ಪ ಆನಂದಾಶ್ರಮದಲ್ಲಿ ವಿವಿಧ ಸಾಧಕರನ್ನು ಸತ್ಕರಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಶ್ರೀ ಮೋಹನ ಬಸನಗೌಡ ಪಾಟೀಲ ಮಾತನಾಡಿ, ಬೇವಿನಕೊಪ್ಪ ಆನಂದಾಶ್ರಮವು ನಾಡಿನ ಸಾಧಕರನ್ನು ಗುರುತಿಸಿ ಸತ್ಕರಿಸುತ್ತಿರುವದು ಶ್ಲಾಘನೀಯ ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲ್ಲೂಕಿನ ಅಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಮಾತನಾಡಿ, ಆನಂದಾಶ್ರಮ ಸಮಾಜಮುಖಿ ಕಾರ್ಯಗಳಿಂದ ಹೆಸರಾಗಿದೆ ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ,ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲ್ಲೂಕಿನ ಅಧ್ಯಕ್ಷರಾದ ಎನ್.ಆರ್.ಠಕ್ಕಾಯಿ, ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ, ಹಿರಿಯ ಪತ್ರಕರ್ತ ಚನ್ನಮಲ್ಲಪ್ಪ ಯಲ್ಲಪ್ಪ ಮೆಣಸಿನಕಾಯಿ, ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ನಬಿಸಾಬ ಇಮಾಮಹುಸೇನ ಖುದ್ದುನವರ ಅವರಿಗೆ ಯೋಗ ರತ್ನ ಪ್ರಶಸ್ತಿ ವಿಭೂಷಿತರಾದ ಸಂತೋಷ ಶಂಕರೆಪ್ಪ ಯಕ್ಕುಂಡಿ (ಬೆಳವಡಿ), ಆಶ್ರಮದ ಸೇವಾರ್ಥಿಗಳಾದ ಗೋರೆಸಾಬ ನದಾಫ, ರವಿ ಪೂಜೇರಿ ಸನ್ಮಾನಿಸಿ, ಆಭಿನಂದಿಸಿದರು.