ಬೆಳಗಾವಿ

ಉದ್ದೇಶಿತ ಹುಬ್ಬಳ್ಳಿ ಸಿಕಂದರಾಬಾದ-ಹುಬ್ಬಳ್ಳಿ ವಂದೇ ಭಾರತ ರೈಲು ಗದಗಕ್ಕೆ ನಿಲುಗಡೆಗೆ ಗಣೇಶಸಿಂಗ್ ಬ್ಯಾಳಿ ಆಗ್ರಹ

ಉದ್ದೇಶಿತ ಹುಬ್ಬಳ್ಳಿ ಸಿಕಂದರಾಬಾದ-ಹುಬ್ಬಳ್ಳಿ ವಂದೇ ಭಾರತ ರೈಲು ಗದಗಕ್ಕೆ ನಿಲುಗಡೆಗೆ ಗಣೇಶಸಿಂಗ್ ಬ್ಯಾಳಿ ಆಗ್ರಹ
Ganesha Singh Byali demands a stop at Gadag for the proposed Hubballi–Secunderabad–Hubballi Vande Bh

ಲೋಕದರ್ಶನ ವರದಿ 


ಬೆಟಗೇರಿ  25:  ನೈರುತ್ಯ ರೇಲ್ವೆ ಇಲಾಖೆಯವರು ಹೊಸದಾಗಿ ಹುಬ್ಬಳ್ಳಿ-ಸಿಕಂದ್ರಾಬಾದ ಹುಬ್ಬಳ್ಳಿ ವಂದೆ ಭಾರತ ರೈಲು ಪ್ರಾರಂಭಿಸಲು ಉದ್ದೇಶಿಸಿದ್ದು ಸ್ವಾಗತಾರ್ಹ ಎಂದು ಗಣೇಶಸಿಂಗ್ ಬ್ಯಾಳಿ ಸಂತಸ ವ್ಯಕ್ತಪಡಿಸಿದ್ದಾರೆ. 

ಆದರೆ ಅದರಲ್ಲಿ ಗದಗ ಪ್ರಯಾಣಿಕರಿಗೆ ತೀವ್ರ ಅನಾನುಕೂಲ ವಾಗುವುದು ಈ ರೈಲು ಮಧ್ಯಾಹ್ನ 2.30 ಗಂಟೆಗೆ ಹುಬ್ಬಳ್ಳಿಯಿಂದ ಬಿಟ್ಟರೆ ಹೊಸಪೇಟೆಗೆ 5.30ಕ್ಕೆ ತಲುಪುವದು ಅದರಂತೆ ಹೊಸಪೇಟೆ ಬಿಟ್ಟರೆ ಹುಬ್ಬಳ್ಳಿಗೆ ತಲುಪುವುದು ಹುಬ್ಬಳ್ಳಿಯಿಂದ ಮಧ್ಯಾನ 2.30ಕ್ಕೆ ಈ ರೈಲುಹೊಸಪೇಟೆ, ಬಳ್ಳಾರಿ, ಗುಂಟಕಲ್ಲ, ಕರ್ನೂಲ,

ಮೆಹಬೂನಗರ ಮೂಲಕ ಸಿಕಂದ್ರಾಬಾದ  ರಾತ್ರಿ. 10.30ಕ್ಕೆ ತಲುಪುವುದು ಆದರೆ ಗದಗ ರೈಲು ನಿಲ್ದಾಣ ಜಕ್ಷನ್ ಇದ್ದು ಇಲ್ಲಿ ಈ ರೈಲು ನಿಲುಗಡೆ ಇಲ್ಲದಿರುವದರಿಂದ ನಮ್ಮ ಭಾಗದ ಪ್ರಯಾಣಿಕರಿಗೆ ತೀವ್ರ ಅನ್ಯಾಯವಾಗುವದೆಂದು ಗಣೇಶಸಿಂಗ್ ಬ್ಯಾಳಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ವಿಷಯ ತೀವ್ರ ಗಂಭೀರವಾಗಿದ್ದು ನಮ್ಮ ಭಾಗದ ಲೋಕಸಭ ಸದಸ್ಯರು ಮುತುವರ್ಜಿವಹಿಸಿ ಗದಗ ನಿಲ್ದಾಣಕ್ಕೆ ನಿಲುಗಡೆ ದೊರಕಿಸಿ ಪ್ರಯಾಣಿಕರಿಗೆ ಅನುಕೂಲ ಒದಗಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ. 

ನಮ್ಮ ಮನವಿಗೆ ಸ್ಪಂದಿಸದೇ ಹೋದಲ್ಲಿ ರೇಲ್ವೆ ಇಲಾಖೆ ಅಧಿಕಾರಿಗಳ ವಿರುದ್ಧ ತೀವ್ರವಾದ ಉಗ್ರ ಹೋರಾಟ ಕೈಕೊಳ್ಳಲಾಗುವದೆಂದು ಬೆಟಗೇರಿ ರೇಲ್ವೆ ಹೋರಾಟ ಸಮಿತಿ ಪರವಾಗಿ ಸಮಿತಿ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ  ಎಚ್ಚರಿಸಿದ್ದಾರೆ ಹೋರಾಟಕ್ಕೆ ಅವಕಾಶ ಮಾಡಿಕೊಡಬಾರದೆಂದು ಮನವಿ ಮಾಡಿದ್ದಾರೆ. 


ಸುದ್ದಿ ಓದಿ