ಬೆಳಗಾವಿ

ರಂಗದೋಳಿ ಗುತ್ತಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ನೂತನ ಮೂರ್ತಿ ಲೋಕಾರೆ​‍್ಣಗೊಳಿಸಿದ ಲಕ್ಷ್ಮೀ ಹೆಬ್ಬಾಳಕರ್

ರಂಗದೋಳಿ ಗುತ್ತಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ನೂತನ ಮೂರ್ತಿ ಲೋಕಾರೆ​‍್ಣಗೊಳಿಸಿದ ಲಕ್ಷ್ಮೀ ಹೆಬ್ಬಾಳಕರ್


ಬೆಳಗಾವಿ 25 : ಬೆಳಗಾವಿ ಜಿಲ್ಲೆಯ ರಂಗದೋಳಿ ಗುತ್ತಿ ಗ್ರಾಮದಲ್ಲಿ ಮಹಾಕಾವ್ಯ ರಾಮಾಯಣದ ಸೃಷ್ಟಿಕರ್ತ, ಆದಿಕವಿ ಮಹರ್ಷಿ ವಾಲ್ಮೀಕಿ ಅವರ ನೂತನ ಮೂರ್ತಿಯನ್ನು ಮಾಜಿ ಸಚಿವೆ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಭಾನುವಾರ ಲೋಕಾರೆ​‍್ಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ್ ಅವರು, ಮಹರ್ಷಿ ವಾಲ್ಮೀಕಿ ಅವರು ಕೇವಲ ರಾಮಾಯಣದ ಕರ್ತೃಗಳಲ್ಲ, ಮಾನವೀಯ ಮೌಲ್ಯಗಳು, ಧರ್ಮ, ನ್ಯಾಯ, ತ್ಯಾಗ, ಕರ್ತವ್ಯ ಪ್ರಜ್ಞೆ ಹಾಗೂ ಆದರ್ಶ ಬದುಕಿನ ಸಂದೇಶ ಸಾರಿದ ಮಹಾನ್ ಋಷಿಗಳು. ಅವರ ಜೀವನ ಮತ್ತು ಸಾಹಿತ್ಯ ಇಂದಿಗೂ ಸಮಾಜಕ್ಕೆ ದಾರೀದೀಪವಾಗಿವೆ. ರಾಮಾಯಣದ ಮೂಲಕ ಮಾನವ ಸಂಬಂಧಗಳ ಮಹತ್ವ, ಕುಟುಂಬದ ಮೌಲ್ಯಗಳು, ಸತ್ಯನಿಷ್ಠೆ ಹಾಗೂ ಧರ್ಮದ ಹಾದಿಯಲ್ಲಿ ನಡೆಯುವ ಪ್ರೇರಣೆಯನ್ನು ಅವರು ಜಗತ್ತಿಗೆ ನೀಡಿದ್ದಾರೆ ಎಂದು ಹೇಳಿದರು.

ಮಹರ್ಷಿ ವಾಲ್ಮೀಕಿ ಅವರ ಬದುಕು ನಮಗೆ ಒಂದು ಮಹತ್ವದ ಸಂದೇಶ ನೀಡುತ್ತದೆ. ಬದಲಾವಣೆ ಮತ್ತು ಆತ್ಮಪರಿವರ್ತನೆಯ ಮೂಲಕ ಪ್ರತಿಯೊಬ್ಬರೂ ಉನ್ನತ ಸಾಧನೆ ಮಾಡಬಹುದು. ವ್ಯಕ್ತಿಯ ಹಿನ್ನೆಲೆಗಿಂತ ಆತನ ಗುಣ, ಸಾಧನೆ ಹಾಗೂ ಸಮಾಜಕ್ಕೆ ನೀಡುವ ಕೊಡುಗೆ ಮುಖ್ಯ ಎಂಬುದನ್ನು ವಾಲ್ಮೀಕಿ ಅವರ ಜೀವನ ನಮಗೆ ತಿಳಿಸುತ್ತದೆ. ಅವರ ಆದರ್ಶಗಳನ್ನು ಕೇವಲ ಜಯಂತಿ, ಉತ್ಸವಗಳಿಗೆ ಸೀಮಿತಗೊಳಿಸದೆ, ನಮ್ಮ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ವಿಶೇಷವಾಗಿ ಯುವಜನತೆ ಅವರ ಚಿಂತನೆಗಳಿಂದ ಸ್ಫೂರ್ತಿ ಪಡೆದು ಶಿಕ್ಷಣ, ಸಂಸ್ಕಾರ ಹಾಗೂ ಸಮಾಜಸೇವೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಅವರ ಮೂರ್ತಿ ಸ್ಥಾಪಿಸಿರುವುದು ಸಂತಸದ ಸಂಗತಿ. ಇಂತಹ ಸ್ಮಾರಕಗಳು ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಮಹಾನ್ ವ್ಯಕ್ತಿಗಳ ಕೊಡುಗೆಯನ್ನು ಪರಿಚಯಿಸುವ ಕೇಂದ್ರಗಳಾಗಬೇಕು. ಸಮಾಜದಲ್ಲಿ ಪರಸ್ಪರ ಗೌರವ, ಸಮಾನತೆ ಮತ್ತು ಸೌಹಾರ್ದತೆಯನ್ನು ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಬಾಳು ದೇಸೂರಕರ್, ಮನೋಹರ್ ಬೆಳಗಾಂವ್ಕರ್, ಅಶೋಕ್ ಮೂಕನವರ್, ಮಾರುತಿ ದಾಸನಟ್ಟಿ, ಸದೆಪ್ಪ ದಾಸನಟ್ಟಿ, ಕೆಂಚಪ್ಪ ಗಡ್ಕರಿ, ಯಲ್ಲನಾಯ್ಕ್‌, ಬಸವರಾಜ ಕುಂದರಗಿ, ಸದೆಪ್ಪ ಹರಿಜನ, ರಮೇಶ್ ತಳವಾರ, ಬಾಳಪ್ಪ ಪಾಟೀಲ, ಮಾರುತಿ ಗಡ್ಕರಿ, ಅಜಿತ್ ಮರೆಪ್ಪನವರ, ಗುಡದಪ್ಪ, ಸಂಜು ಹೊಸಳ್ಳಿ, ಅಜಯ ಚಿನ್ನಿಕುಪ್ಪಿ, ಮಹೇಶ್ ನಾಯಿಕ್, ನಿಂಗಪ್ಪ ತಲ್ಲೂರಿ, ರಾಜೇಶ್ ನಾಯ್ಕ್‌, ಮುತ್ತು ಹೊಸಕೋಟಿ, ಹೊಳೆಪ್ಪ ಪೂಜೇರಿ, ಸುಭಾಷ್ ಪೂಜೇರಿ, ನಾಗಪ್ಪ ಬುಡ್ರಿ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ