ಬೈಲಹೊಂಗಲ

ಕಾವ್ಯಭೂಮಿ ಪ್ರಕಾಶನದಿಂದ ಯೋಗ ರತ್ನ ಡಾ. ಸಂತೋಷ ಗುರೂಜಿ ಅವರಿಗೆ ಸನ್ಮಾನ

ಕಾವ್ಯಭೂಮಿ ಪ್ರಕಾಶನದಿಂದ ಯೋಗ ರತ್ನ ಡಾ. ಸಂತೋಷ ಗುರೂಜಿ ಅವರಿಗೆ ಸನ್ಮಾನ



           ಬೈಲಹೊಂಗಲ 17 : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ  ಮಲ್ಲಮ್ಮನ ಬೆಳವಡಿ ಗ್ರಾಮದ  ಗಣ್ಯ ಮನೆತನದ ಯೋಗ ಶಿಕ್ಷಕ, ಉಪನ್ಯಾಸಕ, ಸಾಹಿತಿ ಹಾಗೂ ಭಾರತೀಯ ಸಂಸ್ಕೃತಿ ವಿದ್ಯಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರಾದ ಡಾ. ಸಂತೋಷ ಶಂಕರೆಪ್ಪ ಯಕ್ಕುಂಡಿ  ಅವರು ಬೆಂಗಳೂರಿನ ರೋಟರಿ ಕ್ಲಬ್ ಹಾಗೂ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ  ಸಂಸ್ಥೆ ಮತ್ತು ಅಮೆರಿಕ ಯೋಗ ಯೂನಿವರ್ಸಿಟಿ ಆಫ್ ಅಮೆರಿಕ ಇವರು ಪ್ರದಾನ ಮಾಡಿದ ರಾಷ್ಟ್ರಮಟ್ಟದ ಯೋಗ ರತ್ನ ಪ್ರಶಸ್ತಿಗೆ ಭಾಜನರಾದ   ಪ್ರಯುಕ್ತ ಬೈಲಹೊಂಗಲ ಪಟ್ಟಣದ ಗ್ಯಾಲಾಕ್ಸಿ ಗಾರ್ಡನದ ಸಭಾಂಗಣದಲ್ಲಿ ಕಾವ್ಯ ಭೂಮಿ ಪ್ರಕಾಶನದಿಂದ ಕವಿ,ಕಥೆಗಾರ, ವಿಮರ್ಶಕ, ಸಂಶೋಧಕರು ಬೈಲಹೊಂಗಲ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಮಲ್ಲಿಕಾರ್ಜುನ ಶಿವಪ್ಪ ಛಬ್ಬಿಯವರು ಸನ್ಮಾನಿಸಿ, ಅಭಿನಂದಿಸಿ, ಗೌರವಿಸಿದರು.

            ಖ್ಯಾತ ಉದ್ದಿಮೆದಾರರಾದ ಮಹಾಂತೇಶ ಎಸ್‌.ಪಾಟೀಲ ಅವರು ಮಾತನಾಡಿ, ಡಾ. ಸಂತೋಷ ಗುರೂಜಿಯವರು  ಕಳೆದ 24 ವರ್ಷಗಳಿಂದ ಯೋಗ ಕ್ಷೇತ್ರದಲ್ಲಿ  20,000ಗಳಿಗಿಂತ ಹೆಚ್ಚಿನ ಜನರಿಗೆ ಯೋಗ ತರಬೇತಿಯನ್ನು ನೀಡಿರುವರು  ಅವರು ಬಾಲ್ಯದಲ್ಲಿ ಕಡು ಬಡತನದ ಕುಟುಂಬದಲ್ಲಿ ಜನಿಸಿದರೂ ಸಹಿತ ಖ್ಯಾತ ಚಿತ್ರ ಕಲಾವಿದ, ಸಾಹಿತಿ ಎಂ.ಪಿ. ಕಳಸದ ಇವರ ಮಾರ್ಗದರ್ಶನ ಸಿಕ್ಕಿರುವುದರಿಂದ ತಮ್ಮ ಯೌವ್ವನದ ವಯಸ್ಸಿನಲ್ಲಿ ತಮ್ಮ ಸಂಪೂರ್ಣ ಗಮನವನ್ನು ಶಿಕ್ಷಣದ ಮೇಲೆ ಕೇಂದ್ರೀಕರಿಸಿ ಭಾರತೀಯ ಗ್ರಾಮ ವಿಕಾಸ ಹಾಗೂ ಸ್ಫೂರ್ತಿದಾಯಕ ನಾಯಕತ್ವ ರೂಪಿಸುವ ಮಹಾವಿದ್ಯಾಲಯ ಬಿ.ಎ. ತತ್ಸಮಾನ ಪದವಿಯಲ್ಲಿ ಪ್ರಥಮ ರ್ಯಾಂಕ್, ಎಂ.ಎ. ತತ್ವಶಾಸ್ತ್ರ ಪದವಿಯಲ್ಲಿ ಸುವರ್ಣ ಪದಕ, ಡಿಪ್ಲೋಮಾ ಯೋಗ ಸ್ಟಡೀಸ್ ನಲ್ಲಿ ಡಿಸ್ಟಿಂಕ್ಷನ್, 2026 ರಲ್ಲಿ ಅನುಭಾವಿಗಳಾಗಿ  ಚೆನ್ನಬಸವಣ್ಣನವರು ಮತ್ತು ಸಂತ ಶಿಶುನಾಳ ಶರೀಫರು ಒಂದು ತೌಲನಿಕ ಅಧ್ಯಯನ ಎಂಬ ವಿಷಯದ ಮೇಲೆ ಮಹಾ ಪ್ರಬಂಧವನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಸಲ್ಲಿಸಿ ಪಿಎಚ್‌.ಡಿ ಪದವಿಯನ್ನು ಪಡೆದಿರುವವರಾಗಿರುತ್ತಾರೆ.  


ಸುದ್ದಿ ಓದಿ