ಸಮುದಾಯದ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು
ದಾಂಡೇಲಿ 23 ಸಮುದಾಯವೊಂದರ ಸಾಂಪ್ರದಾಯಿಕ ಬೆಳವಣಿಗೆಯಲ್ಲಿ ಮಹಿಳೆಯರ ಬೆರೆಯುವಿಕೆ ಅತ್ಯವಶ್ಯಕವಾಗಿದ್ದು ಇದರಿಂದ ಸರ್ವತೋಮಕ ಅಭಿವೃದ್ದಿಗೆ ಸಹಾಯವಾಗುತ್ತದೆ. ಎಂದು ಸ್ಥಳೀಯ ಬಿ.ಎಸ್.ಎನ್ ಎಲ್ ನಿವೃತ್ತ ವಿಭಾಗೀಯ ಅಭಿಯಂತರಾದ ಯಶೋದಾ ಶಾನಭಾಘ ನುಡಿದರು.
ಅವರು ಸೋಮವಾರ ಸಂಜೆ ಇಲ್ಲಿಯ ಹವ್ಯಕ ಮಂಡಳದ ಸಭಾಭವನದಲ್ಲಿ ಬೆಂಗಳೂರಿನ ಅಖಿಲ ಹವ್ಯಕ ಮಾಹಾಸಭಾ ಅವರು ಹಮ್ಮಿಕೊಂಡ ಹವ್ಯಕ ಮಹಿಳ ವೇದಿಕೆಯನ್ನು ದೀಪ ಬೆಳಗಿಸುವುದರ ಮೂಲಕ ಉದ್ಗಾಟಿಸಿ ಮಾತನಾಡಿದರು.
ಸ್ಥಳೀಯವಾಗಿ ಹ್ಯವಕ ಮಹಿಳೆಯರು ನಾಲ್ಕು ದಶಕಗಳಿಂದಲೂ ಚೇತನಾ ಮಹಿಳಾ ಘಟಕದ ಅಡಿಯಲ್ಲಿ ಕಾರ್ಯೋನ್ಮುಖರಾಗಿರುತ್ತಿದ್ದು ವಿವಿಧ ಸಾಂಸ್ಕೃತಿಕ ಹಾಗೂ ಇತರೆ ಚಟುವಟಿಕೆಗಳನ್ನು ಹಮ್ಮಿಕೊಂಡು ಮಹಿಳೇಯರಲ್ಲಿ ಹುದುಗಿದ ಪ್ರತಿಭೆಯನ್ನು ಹೊರತರಲು ಅನುಕೂಲವಾಗಿದೆ.
ಎಂದು ನುಡಿದ ಯಶೋದಾ ಇದರಿಂದ ಇಂದು ಉದ್ಘಾಟಿಸಲ್ಪಟ್ಟ ಹವ್ಯಕ ಮಹಿಳ ವೇದಿಕೆಗೆ ಪೂರಕವಾಗಿದೆ. ಎಂದು ತಿಳಿಸಿದರು. ಸಮಾರಂಭದ ಅಧ್ಯಕ್ಷರಾದ ಅಖಿಲ ಹವ್ಯಕ ಮಹಾಸಭಾ ನಿರ್ದೇಶಕ ವಿದ್ವಾನ ಗೋಪಾಲ ಕೃಷ್ಣ ಬಟ್ಟ ಹಂಡ್ರೆಮನೆ ಅವರು ಮಾತನಾಡಿ ಹವ್ಯಕ ಮಹಿಳೆಯರಲ್ಲಿ ಇರುವ ಕೌಶಲ್ಯಗಳ ಕುರಿತಂತೆ ವಿಷ್ಲೇಶಿಸಿದರು.
ಅಖಿಲ ಹವ್ಯಕ ಮಹಾಸಭಾ ನಿರ್ದೇಶಕರಾದ ಪ್ರಶಾಂತ ಹೆಗಡೆ, ಚೇತನಾ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ಗಾಂವಕರ, ಜೊಯಿಡಾ ಪ್ರಾಂತದ ಹವ್ಯಕ ಮಹಿಳಾ ವೇದಿಕೆ ಸಂಚಾಲಕಿ ಸುಜಾತಾ ದಾನಗೇರಿ ವೇದಿಕೆಯಲ್ಲಿ ಉಪಸ್ತಿತರಿದ್ದರು. ಕಾವ್ಯಾಬಟ್ಟ ಗೀತಾ ದಾನಗೇರಿ ಸುಧಾ ದಬಗಾರ ಮುಂತಾದರವು ಸಂದರ್ಭಕ್ಕನುಚಿತವಾಗಿ ಮಾತನಾಡಿದರು.