ಮಹಲಿಂಗಪುರ

ಇಜ್ತೇಮಾ, ಹಿಂದೂ ಬಾಂಧವರ ಸಲಹೆ ಸೂಚನೆಗಳ ಪೂರ್ವಭಾವಿ ಸಭೆ ! ಮಾನವೀಯ ಮೌಲ್ಯಗಳ ಪ್ರವಚನ ಇಜ್ತೇಮಾ

ಇಜ್ತೇಮಾ, ಹಿಂದೂ ಬಾಂಧವರ ಸಲಹೆ ಸೂಚನೆಗಳ ಪೂರ್ವಭಾವಿ ಸಭೆ ! ಮಾನವೀಯ ಮೌಲ್ಯಗಳ ಪ್ರವಚನ ಇಜ್ತೇಮಾ
Ijtema – a preliminary meeting for suggestions and advice from Hindu brethren! Ijtema: A discourse

ಲೋಕದರ್ಶನ ವರದಿ 

          ಮಹಾಲಿಂಗಪುರ 23: ನವೆಂಬರ 29 ರವಿವಾರ ಮತ್ತು 30 ಸೋಮವಾರ ರಂದು ನಡೆಯಲಿರುವ ಜಿಲ್ಲಾ ಮಟ್ಟದ ಉಮೂಮಿ ಇಜ್ತೇಮಾ (ಪ್ರವಚನ ಸಮ್ಮೇಳನ) ಕಾರ್ಯಕ್ರಮದ ಯಶಸ್ವಿಗೆ ಮಹಾಲಿಂಗಪುರ ಪಟ್ಟಣದ ಹಿಂದೂ ಬಾಂಧವರ ಅಮೂಲ್ಯ ಸಲಹೆ ಸೂಚನೆಗಳ ಪೂರ್ವಭಾವಿ ಸಭೆ ನಡೆಯಿತು.

            ಸೋಮವಾರ ಮುಂಜಾನೆ ನೂರಾನಿ ಮಲ್ಲಾ (ತೋಟ) ದಲ್ಲಿ ಮುಸ್ಲಿಂ ಧರ್ಮ ಗುರುಗಳ ಸಮ್ಮುಖ ನಡೆದ ಈ ಶಾಂತಿ ಸಭೆಯಲ್ಲಿ ಮೌ.ಅಬ್ದುಲ್ ವಹಾಬಸಾಹಬ ಕಾಸ್ಮಿ ಅವರು 'ಇಜ್ತೆಮಾ' ಕುರಿತು ಪ್ರಾಸ್ತಾವಿಕವಾಗಿ ಮಾತನಾಡುತ್ತ, ಮಾನವೀಯ ಮೌಲ್ಯಗಳು ಜನಮಾನಸದಲ್ಲಿ ಗಟ್ಟಿಯಾಗಿ ಬೇರೂರಲು ಧರ್ಮ ಗುರುಗಳು ನೀಡುವ ಉಪದೇಶದ ಸಮ್ಮೇಳನವೆ ಇಜ್ತೇಮಾ.

             ಯಾವುದೆ ಒಂದು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಬೇಕಾದರೆ ಸರ್ವ ಧರ್ಮಗಳ ಸಹಕಾರ ಅಗತ್ಯ.ಆದ್ದರಿಂದ ಇಂದು ಸೇರಿರುವ ಹಿಂದೂ ಧರ್ಮದ ಎಲ್ಲ ವರ್ಗಗಳ ಮುಖಂಡರು ಮತ್ತು ಜನಸಾಮಾನ್ಯರು ಈ ಧರ್ಮ ಕಾರ್ಯದ ಯಶಸ್ವಿಗೆ ಕೈ ಜೋಡಿಸಬೇಕೆಂದು ವಿನಂತಿಸಿದರು.                      ತೇರದಾಳ ಮತ ಕ್ಷೇತ್ರದ ಮುಖಂಡರಾದ ಸಿದ್ದು ಕೊಣ್ಣೂರ ಮತ್ತು ಮಾಜಿ ಜಿಪಂ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ ಮಾತನಾಡಿ, ಇದು ಪಕ್ಷಾತೀತ ಮತ್ತು ಜಾತ್ಯತೀತ ಕಾರ್ಯಕ್ರಮ.ದೇವನ ಸಂದೇಶದ ಮುಂದೆ ಎಲ್ಲರೂ ಸಮಾನರು, ನಡೆಯುವ ಈ ಪುಣ್ಯ ಇಜ್ತೆಮಾಗೆ ನಾವೆಲ್ಲರೂ ಸಹಾಯ ಸಹಕಾರ ನೀಡುತ್ತೇವೆ ಎಂದು ಸಭೆಗೆ ಭರವಸೆ ನೀಡಿದರು. 

              ಪಟ್ಟಣದ ಪ್ರಮುಖರಾದ ಬಸನಗೌಡ ಪಾಟೀಲ್, ಯಲ್ಲನ್ನಗೌಡ ಪಾಟೀಲ್, ಶೇಖರ ಅಂಗಡಿ, ಈರಣ್ಣ ಹಲಗತ್ತಿ, ಮಲ್ಲಪ್ಪ ಭಾವಿಕಟ್ಟಿ, ಶ್ರೀಪಾದ ಗುಂಡಾ, ವಿಜಯಕುಮಾರ ಕುಳಲಿ ಮಾತನಾಡಿ, ಆರಂಭದಲ್ಲಿ ಸೂಫಿ ಸಂತ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಇಬ್ರಾಹಿಂ ಸುತಾರ ಅವರ ಗುಣಗಾನ ಮಾಡಿದರು.

                 ನಮ್ಮ ಊರಲ್ಲಿ ಜಾತಿಯ ಬೇಧವಿಲ್ಲ. ಹಿಂದೂ, ಆಗಲಿ ಮುಸ್ಲಿಂರಾಗಲಿ ನಾವೆಲ್ಲ ಸೇರಿಕ್ಕೊಂಡು ಉತ್ಸಾಹದಿಂದ ಕಾರ್ಯಕ್ರಮಗಳನ್ನು ಮಾಡುತ್ತೇವೆ. ಪಟ್ಟಣ ಶಾಂತಿಯ ತೋಟ. ಅನೇಕ ಉದಾಹರಣೆಗಳಿವೆ, ಸಿದ್ಧೇಶ್ವರ   ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಶ್ರೀಗಳು, ಬೀದರ ಶಿವಕುಮಾರ   ಮತ್ತು ಇನ್ನಿತರ ಶ್ರೀಗಳ ಪ್ರವಚನ ಸಂದರ್ಭದಲ್ಲಿ ಮುಸ್ಲಿಂ ಬಾಂಧವರ ಸೇವೆ ನಿಜಕ್ಕೂ ಅನನ್ಯ. ಈ ಕಾರ್ಯಕ್ರಮ ಮುಸ್ಲಿಂರದಲ್ಲ ನಮ್ಮದು.

             ಪರ ಊರಿನಿಂದ ಬರುವ ಜನತೆಗೆ ಕೊರತೆಯಾಗದಂತೆ ನಾವೂ ಸಹ ವಿವಿಧ ರೀತಿಗಳಲ್ಲಿ ಸಹಕಾರ ನೀಡುತ್ತೇವೆ. ಗುರು ಮಹಾಲಿಂಗೇಶ್ವರರ ಈ ಪುಣ್ಯ ಭೂಮಿಯಲ್ಲಿ ಮೇಲಿಂದ ಮೇಲೆ ಅಧ್ಯಾತ್ಮ ಚಿಂತನೆ ನಡೆಯುತ್ತಿರುವುದು ನಮ್ಮ ಪುಣ್ಯ ಎಂದರು. ಈ ಸಭೆಯಲ್ಲಿ ಪಟ್ಟಣದ ಸರ್ವ ಧರ್ಮಗಳ ಪ್ರಮುಖರು, ಜನಸಾಮಾನ್ಯರು ಪಾಲ್ಗೊಂಡು ಇಜ್ತೇಮಾ ಕುರಿತು ಹೆಮ್ಮೆ ವ್ಯಕ್ತಪಡಿಸಿ ಕಾರ್ಯಕ್ರಮ ಯಶಸ್ವಿಗೆ ಶುಭ ಹಾರೈಸಿದರು. ಜಿಲ್ಲೆ ಮತ್ತು ಸ್ಥಳೀಯ ಮುಸ್ಲಿಂ ಸಮುದಾಯದ ಗುರು ಹಿರಿಯರು ಪಾಲ್ಗೊಂಡಿದ್ದರು. 


ಸುದ್ದಿ ಓದಿ